LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡಕಾಯಿತನ ಮೊಮ್ಮಗನ ಯುಪಿಎಸ್​​ಸಿ ಸಾಧನೆ

ಮಧ್ಯಪ್ರದೇಶ :ಒಂದು ಕಾಲದಲ್ಲಿ ದರೋಡೆ, ವಂಚನೆ ಮಾಡ್ತಿದ್ದವನ ಮೊಮ್ಮಗ ಇಂದು ಯುಪಿಎಸ್​​ಸಿ ಪರೀಕ್ಷೆಯಲ್ಲಿ ಕೊನೆ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಯಶಸ್ಸು​ ಕಂಡಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್​ನ ದೇವ್ ತೋಮರ್ ಸದ್ಯ ಯುಪಿಎಸ್​​ಸಿ ಪರೀಕ್ಷೆಯಲ್ಲಿ 629ನೇ ರ್ಯಾಂಕ್ ಪಡೆದು ದೇಶದ ಉನ್ನತ ಹುದ್ದೆ ಪಡೆಯಲಿದ್ದಾರೆ. ದೇವ್ ತೋಮರ್ ಅವರ ಅಜ್ಜ ಮಾಡಿದಂತ ದರೋಡೆಗಳಿಂದ ಅವರ ಕುಟುಂಬ ಇಂದಿಗೂ ನೋವನ್ನು ಅನುಭವಿಸುತ್ತಿದೆ. ಆ ಕುಟುಂಬದಿಂದ ಏನನ್ನು ಮಾಡಲು ಆಗಲ್ಲ ಎಂದು ಜನರು ಚುಚ್ಚಿ ಮಾತಾಡುತ್ತಿದ್ದರು. ಸದ್ಯ ಇಂತಹ ಮಾತುಗಳನ್ನು ಮೊಮ್ಮಗ ದೇವ್ ತೋಮರ್ ಮೆಟ್ಟಿ ನಿಂತಿದ್ದಾರೆ.

ದೇವ್ ತೋಮರ್ ಅವರ ಅಜ್ಜ ರಾಮ್​ಗೋವಿಂದ ಸಿಂಗ್ ತೋಮರ್​ ಒಂದು ಕಾಲದಲ್ಲಿ ಮಧ್ಯಪ್ರದೇಶದ ಚಂಬಲ್ ಏರಿಯಾದಲ್ಲಿ ಕುಖ್ಯಾತ ಡಕಾಯಿತ ಆಗಿದ್ದನು. ಹಣ, ಚಿನ್ನ ಹಾಗೂ ಮೌಲ್ಯಯುತ ವಸ್ತುಗಳಿಗಾಗಿ ಜನರನ್ನು ಹಿಂಸಿಸುತ್ತಿದ್ದನು. ತಂದೆ ವಂಚನೆ, ಮೋಸದಂತ ಕೆಲಸ ಮಾಡಿದರೂ ಮಗ ಬಲ್ವೀರ್​​ ಸಿಂಗ್ ತೋಮರ್ ಶಿಕ್ಷಣ ಮುಂದುವರೆಸಿ ಸಂಸ್ಕೃತದಲ್ಲಿ ಪಿಹೆಚ್​ಡಿ ಪಡೆದು ಕಾಲೇಜುವೊಂದಕ್ಕೆ ಪ್ರಾಂಶುಪಾಲರಾಗಿದ್ದರು. ಇವರ ಮಗ ಹಾಗೂ ಡಕಾಯಿತ ರಾಮ್​ಗೋವಿಂದನ ಮೊಮ್ಮಗ, ದೇವ್ ತೋಮರ್ ಇಂದು ಯುಪಿಎಸ್​​ಸಿ ಯಶಸ್ವಿಯಾಗಿದ್ದಾರೆ.

ನೆದರ್​ಲ್ಯಾಂಡ್​ನಲ್ಲಿ ಮುಖ್ಯ ಕಚೇರಿ ಇರುವ ಫಿಲಿಪ್ಸ್​ ಕಂಪನಿಯಲ್ಲಿ ದೇವ್ ತೋಮರ್ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ವರ್ಷಕ್ಕೆ 88 ಲಕ್ಷ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಈ ಕೆಲಸದ ಜೊತೆಯೇ 2019 ರಿಂದ ದೇವ್ ತೋಮರ್ ಯುಪಿಎಸ್​​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಇಂದು ಕೊನೆಯ ಹಂತದ ಪ್ರಯತ್ನದಲ್ಲಿ ಫಲ ಕಂಡುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬದ ಮೇಲಿದ್ದ ಕಪ್ಪು ಚುಕ್ಕೆಗೆ ತೆಗೆದುಹಾಕಿದ್ದಾರೆ.

ಒಂದು ಕಾಲದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನ ಮಾಡುತ್ತಿದ್ದ ಕುಟುಂಬದಿಂದ ಬಂದವರು ಇಂದು ಉನ್ನತ ಉದ್ಯೋಗ ಪಡೆಯುವ ಸಾಲಿನಲ್ಲಿ ನಿಂತಿದ್ದಾರೆ. ಯುಪಿಎಸ್​ಸಿಯಲ್ಲಿ 629ನೇ ರ್‍ಯಾಂಕ್‌ ಪಡೆದು ಯಶಸ್ಸಿನ ಹಾದಿ ಕಂಡುಕೊಂಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026