E-PAPER
16 Nov 2026, 02:20:22 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನ್ನಡದ ಸಾಹಿತ್ಯದ ರುಚಿ ಹಚ್ಚಿಸಿದ ಬಾನುಮಷ್ತಾಕ್ ಮತ್ತು ದೀಪಾ ಬಾಸ್ಥೆ 

ಬೆಳಗಾವಿ; ಜಗತ್ತಿಗೆ ಕನ್ನಡದ ಸಾಹಿತ್ಯ ಸತ್ವದ ರುಚಿ ಹಚ್ಚಿಸಿದ ಬಾನುಮಷ್ತಾಕ್ ಮತ್ತು ದೀಪಾ ಬಾಸ್ಥೆ ಅವರಿಗೆ ಈ ರೀತಿ ಕಾರ್ಯಕ್ರಮ ಆಯೋಜಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸದ ಸಂಗತಿ .ಇವರ  ಕತೆಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬದುಕಿನಲ್ಲಿಧಾರ್ಮಿಕ ರಾಜಕೀಯ ಸಾಮಾಜಿಕ ವಾಗಿ ನಡೆಯುವ ಶೋಷಣೆ ಗಳ ,ನೋವು ಸಂಕಟಗಳ ಚಿತ್ರಣಗಳಷ್ಟೇ  ಇಲ್ಲ ಅದರಾಚೆಗೆ ಮುಂದೇನು ಎಂಬ ಪ್ರಶ್ನಗಳಿಗೆ ಉತ್ತರಗಳ ಹುಡುಕಾಟಗಳು ಇವೆ .ಆರಂಭದಲ್ಲಿ ೮೦ ರ ದಶಕದ ಲಂಕೇಶ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳಿಂದ ಈ ತನಕದ ಹೆಣ್ಣು ಹದ್ದಿನ ಸ್ವಯಂವರ  ಸಂಕಲನದ ತನಕ  ಓದಿದಾಗ ಇವರ ಕಥಾ ಪಯಣದ ಲ್ಲಿ ಈ ಹುಡುಕಾಟಗಳ ದಿಕ್ಕು ಕಾಣುತ್ತದೆ  ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ನೀಡಿದ ಜೂರಿಗಳು ಮೆಚ್ಚುಗೆ ಸೂಚಿಸುತ್ತಹೇಳಿದ ಮಾತು ಗಳೂ ಗಮನಾರ್ಹ beutifull busy life affirming stories ಎಂದಿದ್ದಾರೆ ಎಷ್ಟೆಲ್ಲ ನೋವು ಸಂಕಟಗಳಾಚೆಯೂ ಬದುಕನ್ನು ಕುರಿತಾದ ಲೇಖಕಿಯ ಇತ್ಯಾತ್ಮಕ ದೃಷ್ಟಿಕೋನ ಇವರ ಕಥೆಗಳ ಶಕ್ತಿ ಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಘಟಕ ೨೮/೫/೨೫ ರಂದು ಆಯೋಜಿಸಿದ್ದ ಹಸೀನಾ ಸಿನಿಮಾ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಮಾಜ ಶಾಸ್ತ್ರಜ್ಞೆ  ಡಾ ರಂಜನಾ ಗೋಧಿಯವರು ನುಡಿದರು
 ಬೆಳಗಾವಿಯ ಶಿವಬಸವ ನಗರದಲ್ಲಿ ರುವ ಡಾ ಮಾಳಿಯವರ ಹೋಂ ಥಿಯೇಟರ್ನಲ್ಲಿ   ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮಷ್ತಾಕ್ ಅವರ ಕರಿ ನಾಗರಗಳು ಕತೆಯ ಆಧಾರಿತ ಗಿರೀಶ ಕಾಸರವಳ್ಳಿ ನಿರ್ದೇಶನದಹಸೀನಾ  ಸಿನಿಮಾವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು   .ಶ್ರೇಷ್ಟ ಅಭಿನಯದಿಂದ  ಕನ್ನಡದ ತಾರೆ ತಾರಾ ೨೦೦೪ ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಹಸೀನಾ ಸಿನಿಮಾ  ಇಂದಿಗೂ ಪ್ರಸ್ತುತ ವಾಗಿದೆ .ಹಸೀನಾಳ ನೋವು ಕೇವಲ ಮುಸ್ಲಿಂ ಸಮುದಾಯದ ಹೆಣ್ಣಿನ ನೋವು ಸಂಕಟಗಳಾಗಿ ಉಳಿಯುವುದಿಲ್ಲ ಅದು ಜಗತ್ತಿನ ಯಾವುದೇ ಮೂಲೆಯಲ್ಲಿನ ಗಂಡಾಳ್ವಿಕೆಯಲ್ಲಿ ಸಂಕಟಪಡುತ್ತಿರುವ ಹೆಣ್ಣು ಮಕ್ಕಳ ನೋವು ಅಸಹಾಯಕತೆಗಳಾಗಿದೆ ಈ ಕತೆಯ ಯಶಸ್ಸು ಹಸೀನಾಳ ಪ್ರತಿರೋಧದಲ್ಲಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಘಟಕದ ಕಲೇಸಂ ಅಧ್ಯಕ್ಷರಾದ ಡಾ ಕೆ ಆರ್ ಸಿದ್ದಗಂಗಮ್ಮ.ದೀಪಿಕಾ ಚಾಟೆ ಸುನಂದಾ ಹಾಲಬಾವಿ ವಿಜಯಾ ದೇವನಗಾವಿ ಉಷಾ ಸಂಕಪಾಲ ವಿಮಲಾ ಜೈನಾಜ್ ಹೇಮಾ ಬರಬರಿ ಶಶಿ ಮಾಳಿ ಶ್ರೀಮತಿ ಭಿಕ್ಕೋಜಿ ಸುಮಿತ್ರ ಚೋಬಾರಿ ನೀಲಂ ಗುತ್ತಿಗೊಳಿ ಜ್ಯೋತಿ ಬಾದಾಮಿ   ಸುಧಾ ಪಾಟೀಲ್ ಮುಂತಾದವರು ಸಂವಾದ ದಲ್ಲಿ ಪಾಲ್ಗೊಂಡಿದ್ದರು
ರಾಜನಂದಾ ಗಾರ್ಗಿಯವರು ಸ್ವಾಗತಿಸಿದರು ನಿರ್ಮಲಾ ಬಟ್ಟಲ ವಂದನಾರ್ಪಣೆ ಸಲ್ಲಿಸಿದರು .

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ