LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅನುಭವ ಮಂಟಪ ಮತ್ತು ಮಹಾಮನೆಗೆ ಮುಕ್ತ ಪ್ರವೇಶವಾಕಾಶ: ಬಸವಕುಮಾರ ಮಹಾಸ್ವಾಮೀಜಿ.!

 

ಚಿತ್ರದುರ್ಗ : ಶೋಷಿತ ಸಮುದಾಯಗಳು ತಮ್ಮ ಬದುಕಿಗಾಗಿ ಸ್ವಾಭಿಮಾನದಿಂದ ಬದುಕಬೇಕಾದ ಅನಿವಾರ್ಯತೆ ಈಗ ಇದೆ .ಅಲಕ್ಷಿತ ಸಮುದಾಯಗಳನ್ನು 12 ನೇ ಶತಮಾನದಲ್ಲಿ ಬಸವಾದಿ ಶಿವಶಣರು ಅನುಭವ ಮಂಟಪ ಮತ್ತು ಮಹಾಮನೆಗೆ ಮುಕ್ತ ಪ್ರವೇಶವಾಕಾಶ ನೀಡುವ ಮೂಲಕ ತಳ ಸಮುದಾಯದವರ ಬದುಕಿನ ಹಸನಿಗೆ  ಕಾರಣರಾದರು.

ಅದರಿಂದ  ಈಗ ಒಂದಷ್ಟು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಅಖಿಲ ಕರ್ನಾಟಕ ಶ್ರೀ ಗುರು ಮೇದರ ಕೇತೇಶ್ವರ ಟ್ರಸ್ಟ್, ಚಿತ್ರದುರ್ಗ ಕೇತೇಶ್ವರ ಜಯಂತಿ ಮೇದರ ಸಂಸ್ಕೃತಿ ವೈಭವ ಹಾಗೂ ಲಿಂಗೈಕ್ಯ ಹನುಮಂತಯ್ಯ ಕೇತೇಶ್ವರ ಸ್ವಾಮೀಜಿಯವರ 36  ಪುಣ್ಯ ಸ್ಮರಣೋತ್ಸವದ  ಸಾನಿಧ್ಯ ವಹಿಸಿ ಮಾತನಾಡುತ್ತಾ ಕುಲ ಕಸುಬುಗಳ ಜೊತೆಗೆ ಶಿಕ್ಷಣವನ್ನು ಪಡೆಯುತ್ತಾ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಸಲಹೆ ಮಾಡಿ, ಈ ಹಿಂದಿನ ಬಸವಪ್ರಭು ಕೇತೇಶ್ವರ ಮಹಾಸ್ವಾಮಿಗಳು ಸಮಾಜವನ್ನು ಬಹಳ ಶ್ರಮವಹಿಸಿ ಸಂಘಟಿತರನ್ನಾಗಿ ಮಾಡಿದ್ದಾರೆ. ಅದು ಹೀಗೆ ಮುಂದುವರಿದುಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.

ಸಾನಿಧ್ಯ ವಹಿಸಿದ್ದ ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳವರು ಮಾತನಾಡಿ ಬಸವಾದಿ ಶಿವಶರಣರು ನಿಮ್ನ ವರ್ಗಗಳಿಗೆ ಸ್ವಾಭಿಮಾನವನ್ನು ಕೊಟ್ಟು ಹೋಗಿದ್ದಾರೆ. ನಮಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಾ ಸಂಕೋಚವನ್ನು ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಸ್ಥಾನ ಪಡೆಯಬೇಕೆಂದು ಹೇಳಿದರು. ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ ಎಂದು ನುಡಿದರು. ಸಣ್ಣ ಸಮುದಾಯಗಳಲ್ಲಿ ಒಗ್ಗಟ್ಟು ಇದ್ದರೆ ಗುರಿ ಸಾಧಿಸುವ ಮೂಲಕ ಗೆಲುವನ್ನು ಪಡೆಯಬಹುದು ಎಂದು ಕಿವಿಮಾತು ಹೇಳಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಇಮ್ಮಡಿ ಬಸವ ಪ್ರಭುಕೇತೇಶ್ವರ ಸ್ವಾಮಿಗಳವರು ಮಾತನಾಡಿ ಹಿಂದಿನ ನಮ್ಮ ಮಹಾಸ್ವಾಮಿಗಳವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗುವುದಾಗಿ ಹೇಳಿದ ಅವರು ಸಮಾಜದ ಮುಖಂಡರು  ಭಕ್ತರು ಶ್ರೀಮಠಕ್ಕೆ ಆಗಾಗ ಬರುತ್ತಾ ಸಲಹೆ ಸಹಕಾರ ನೀಡುತ್ತಿರಬೇಕೆಂದು ಹೇಳಿದರು.

ಸಮಾರಂಭದಲ್ಲಿ ಛಲವಾದಿ ಗುರುಪೀಠದ ಬಸವನಾಗಿದೇವ.ಮಹಾಸ್ವಾಮಿಗಳು,ಲಂಬಾಣಿ ಗುರುಪೀಠದ ಸರ್ದಾರ್ ಸೇವಾಲಾಲ್ ಮಹಾಸ್ವಾಮಿಗಳು ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

ರಾಜ್ಯ ಮಟ್ಟದ ಈ ಸಮಾರಂಭಕ್ಕೆ ರಾಜ್ಯದ ನಾನಾ ಕಡೆಯಿಂದ ಮೇದರ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST