ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮಕ್ಕೆ ನೂತನ ಅಧ್ಯಕ್ಷರಾಗಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ.!
ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮಕ್ಕೆ ನೂತನ ಅಧ್ಯಕ್ಷರಾಗಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳನ್ನು ಆಯ್ಕೆ ಮಾಡಲಾಗಿದೆ.
ಯೋಗಗುರು ತಿರುಕ ರಾಘವೇಂದ್ರ ಶ್ರೀಗಳು, ಶ್ರೀ ಸೂರದಾಸ್ ಜೀ, ಮುರುಘಾ ಮಠದ ಶಿವಮೂರ್ತಿ ಶರಣರು ಸೇವಾ ಶ್ರಮದ ಅಧ್ಯಕ್ಷರಾಗಿದ್ದರು. ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ನಂತರ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ವಜಾಗೋಳಿಸಲಾಗಿತ್ತು.
ನಂತರ ಮುರುಘಾಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಕಾರ್ಯದರ್ಶಿಯಾಗಿದ್ದರು. ಬಸವರಾಜನ್ ಮತ್ತು ಸಮಿತಿಯಿಂದ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ.
ಮಲ್ನಾಡಿಹಳ್ಳಿಯಲ್ಲಿ ಮಾದರ ಚೆನ್ನಯ್ಯ ಶ್ರೀಗಳು ಅಧಿಕಾರ ಸ್ವೀಕರಿಸಿದ್ದಾರೆ. ರಾಘವೇಂದ್ರ ಶ್ರೀಗಳು, ಸೂರದಾಸ್ ಶ್ರೀ ಗಳ ಮಾರ್ಗದರ್ಶನದಲ್ಲಿ ಅನಾಥ ಸೇವಾಶ್ರಮ ಮುನ್ನಡೆಸುವ ಭರವಸೆ ನೀಡಿದ್ದಾರೆ. ಶೂನ್ಯ ಅವಸ್ಥೆಯಿಂದ ನಾನು ಪೀಠಕ್ಕೆ ಬಂದವನು. ಆ ಪೀಠ ಕಟ್ಟಿದೆ ಎಂದು ಹೇಳಿದರೆ ಆ ಪೀಠ ನನ್ನದಲ್ಲ, ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯೂ ಶಾಶ್ವತವಲ್ಲ. ರಾಘವೇಂದ್ರ ಶ್ರೀ, ಸೂರದಾಸರ ಕೃಪೆ ಇರುವವರೆಗೆ ಅಭಿವೃದ್ದಿಗೆ ಶ್ರಮಿಸೋಣ ಎಂದು ಮಲ್ಲಾಡಿಹಳ್ಳಿಯಲ್ಲಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ ಹೇಳಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.