E-PAPER
16 Nov 2026, 02:20:26 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಉನ್ನತ ಅಧಿಕಾರವನ್ನು ಜನಸೇವೆಯ ಸಾಧನವೆಂದ ಬಸವಣ್ಣ-ವಿಜಯಲಕ್ಷ್ಮಿ ಪುಟ್ಟಿ

ಬೆಳಗಾವಿ; ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರು ತಮಗೆ ದೊರೆತ ಅಧಿಕಾರವನ್ನು ಜನಸೇವೆಯ ಸಾಧನವೆಂದು ಪರಿಗಣಿಸಿದವರು ಹೀಗಾಗಿ ಇಂದಿನ ಅಧಿಕಾರಸ್ತರಿಗೆ ಬಸವಣ್ಣನವರು ಮಾದರಿಯಾಗುತ್ತಾರೆ ಎಂದು ಪ್ರೊ. ವಿಜಯಲಕ್ಷ್ಮಿ ಪುಟ್ಟಿ ಹೇಳಿದರು.
ಅವರು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ಮಾಸಿಕ ಅನುಭವ ಸತ್ಸಂಗದಲ್ಲಿ "ಬಸವಣ್ಣ ನಮಗೆ ಏಕೆ ಬೇಕು" ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರ ನಡೆ ಮತ್ತು ನುಡಿಗಳಲ್ಲಿ ವಿನಯತೆ ಎದ್ದು ಕಾಣುತ್ತಿತ್ತು ಮೇಲು ಕೀಳು ಎನ್ನದೆ ಎಲ್ಲರನ್ನೂ ಗೌರವಿಸುತ್ತ ಸಮಾನವಾಗಿ ಕಾಣುವ ಅವರು ಎನಗಿಂತ ಕಿರಿಯರಿಲ್ಲ ಎನ್ನುತ್ತಾ ಅಹಂಕಾರದಿಂದ ದೂರ ಇದ್ದವರು ಇಂದಿನ ಅಧಿಕಾರಸ್ತರಲ್ಲಿ ಅದು ಕಾಣುತ್ತಿಲ್ಲ ಅಹಂಕಾರ ಹೆಚ್ಚಾಗಿದೆ, ಅಂದು ಶರಣರು ತಮ್ಮ ಮೌಲ್ಯಗಳಿಂದ ದೊಡ್ಡವರಾಗಿದ್ದರು ಇಂದು ಅಧಿಕಾರ ಮತ್ತು ಅಂತಸ್ತುಗಳಿಂದ ದೊಡ್ಡವರೇನಿಸಿಕೊಳ್ಳುತ್ತಾರೆ.
ಜಾತಿ ವ್ಯವಸ್ಥೆಯನ್ನೇ ನಿರ್ಮೂಲ ಮಾಡಲು ಪ್ರಯತ್ನಿಸಿದವರು ಬಸವಣ್ಣನವರು, ಕೆಳವರ್ಗದವರನ್ನು ಮುಟ್ಟುವುದು ಪಾಪ ಎನ್ನುವಂಥ ಪರಿಸ್ಥಿತಿಯಲ್ಲಿ ಕೇಳವರ್ಗದವರನ್ನು ಶೋಷಿತರನ್ನು ಒಪ್ಪಿಕೊಂಡರು, ಅಪ್ಪಿಕೊಂಡರು ಅವರಿಗೆ ಅನುಭವ ಮಂಟಪದಲ್ಲಿ ಸ್ಥಾನಮಾನಗಳನ್ನು ಕೊಟ್ಟು ಗೌರವಿಸಿದರು ದುರ್ದೈವದ ವಿಚಾರವೆಂದರೆ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲವಾಗಿಲ್ಲ ಎಂದವರು ವಿಷಾದ ವ್ಯಕ್ತಪಡಿಸಿದರು.
ಇಂದಿನ ಅಧಿಕಾರಸ್ಥರಲ್ಲಿ ಮೌಲ್ಯಗಳು ಇಲ್ಲ ವಿನಯತೆ ಇಲ್ಲ ಅಂತರಂಗ ಶುದ್ಧಿ ಇಲ್ಲ ಈ ಎಲ್ಲವೂ ಕೇವಲ ಭಾಷಣಗಳಲ್ಲಿ ಬಳಕೆಯಾಗುತ್ತಿವೆ ಅನಾಚಾರ, ಅತ್ಯಾಚಾರ, ದುರಾಚಾರ ಹೆಚ್ಚಾಗುತ್ತಿದೆ ಹೀಗಾಗಿ ಬಸವಣ್ಣನವರು ನಮಗೆ ಇಂದಿಗೂ ಬೇಕು ಅವರ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತ ಎನಿಸುವಂಥವು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತೀಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ ಸಮಸ್ತ ಲಿಂಗಾಯತ ಸಮಾಜವು ಒಕ್ಕಟ್ಟಾಗಿ ಇರುವುದು ಈ ಕ್ಷಣದ ಅಗತ್ಯವಾಗಿದೆ ಸಮಾಜದಲ್ಲಿ ಒಗ್ಗಟ್ಟಿಲ್ಲದಿರುವದು ದೊಡ್ಡ ಹಾನಿ ಇದೇ ಸ್ಥಿತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ. ಶಿವಬಸವ ದೇವರು ಆಶೀರ್ವಚನ ನೀಡಿ ಬಸವಣ್ಣನವರ ಬದುಕು ಉದಿನ ಕಡ್ಡಿಯಂತೆ ಸ್ವಂತ ಸುಟ್ಟು ಕೊಂಡು ಜಗಕ್ಕೆ ಪರಿಮಳ ಬೀರಿದವರು ಕಾಯಕ ನಿಷ್ಠೆ ಎನ್ನುವುದನ್ನು ಜೀವನದಲ್ಲಿ ರೂಡಿಸಿಕೊಂಡವರು, ಬಸವಾದಿ ಶರಣರ ಜೀವನವೇ ಒಂದು ಮಾದರಿ ಎಲ್ಲರೂ ತಮ್ಮ ಜೀವನದಲ್ಲಿ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಜಿಯವರು ಮನೆಮನೆಗೆ ತಿರುಗಿ ಶರಣರ ಜಗುಲಿಯ ಮೇಲಿದ್ದ ವಚನ ಕಟ್ಟು ಮತ್ತು ತಾಡೋಲೆಗಳನ್ನು ಸಂಗ್ರಹಿಸಿ ಬಾ.ಗು. ಹಳಕಟ್ಟೆಯವರಿಗೆ ನೀಡದೇ ಇದ್ದಿದ್ದರೆ ವಚನ ಸಾಹಿತ್ಯದಂಥ ಉನ್ನತ ಮೌಲ್ಯಗಳನ್ನು ಹೊಂದಿದ ಸಾಹಿತ್ಯದಿಂದ ನಾವು ವಂಚಿತರಾಗುತ್ತಿದ್ದೆವು ಡಾ.ಶಿವಬಸವ ಶ್ರೀಗಳ ಕಾರ್ಯ ಅದ್ವಿತೀಯವಾದದ್ದು ಎಂದರು.
ದಾಸೋಹ ಸೇವೆ ನೀಡಿದ್ದ ಎಂ.ಎ.ಕೋರಿಶೆಟ್ಟಿ ಮತ್ತು ಶ್ರೀಮತಿ. ಗೀತಾ ಕೋರಿ ಶೆಟ್ಟಿ ದಂಪತಿಗಳನ್ನು ಸತ್ಕರಿಸಲಾಯಿತು.
ಶ್ರೀಮತಿ. ಭಾಗ್ಯಶ್ರೀ
ಬೆಣಚನಮರಡಿ ಅವರು ಸ್ವಾಗತಿಸಿದರು, ಸಿ.ಎಂ. ಬೂದಿಹಾಳ ಅವರು ಅತಿಥಿಗಳ ಪರಿಚಯ ಮಾಡಿದರು, ಶ್ರೀಮತಿ. ಕಾವೇರಿ ಕಿಲಾರಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಮುರುಗೇಶ ಶಿವಪೂಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಾಗತೀಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಪ್ರವೀಣ್ ಚಿಕಲಿ, ಎಸ್ ಜಿ ಸಿದ್ನಾಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ