E-PAPER
16 Nov 2026, 02:19:40 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸರ್ವ ಸಮಾನತೆಗಾಗಿ ಬಸವಣ್ಣನವರ ಕೊಡುಗೆ ಮನುಕುಲಕ್ಕೆ ಮಾದರಿ:ಡಾ.ಪ್ರಭಾಕರ ಕೋರೆ

ಬೆಳಗಾವಿ : ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ವರ್ಗ ಲಿಂಗ ಅಸಮಾನತೆಗಳನ್ನು ಕಿತ್ತುಹಾಕಲು 12ನೇ ಶತಮಾನದಲ್ಲಿ ಹೋರಾಡಿದ ಬಸವಣ್ಣವರ ಕ್ರಾಂತಿ ಮನುಕುಲಕ್ಕೆ ಉತ್ತಮ ನಿರ್ದೇಶನವಾಗಿದೆ. ಇಂದಿಗೂ ಇಂತಹ ಅಸಮಾನತೆ ವಿರುದ್ಧ ಸಮಾಜ ಬಸವಲಿಯುತ್ತಿರುವ ಸಂದರ್ಭದಲ್ಲಿ ಬಸವಣ್ಣವರು ಮಾಡಿದ ಹೋರಾಟ ನೆನಪಾಗುತ್ತದೆ ಎಂದು ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ  ಹೇಳಿದರು.
ಅವರು ಹನುಮಾನ ನಗರದಲ್ಲಿ ಹಮ್ಮಿಕೊಂಡಿದ್ದ ಶಿವಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ಮಹಾ ಮಾನವತಾವಾದಿಯಾಗಿದ್ದರು. ಬಸವಣ್ಣ ಸಾಮಾಜಿಕ ಸ್ತರವಿನ್ಯಾಸವನ್ನು ಕಿತ್ತು ಹಾಕಲು 900 ವರ್ಷಗಳ ಹಿಂದೆ ಹೋರಾಡಿದ್ದರು ಎಂದರೆ ಆಶ್ಚರ್ಯವೆನಿಸುತ್ತದೆ. ಇಂದಿಗೂ ಕೂಡ ಸಾಮಾಜಿಕ ಅಸಮಾನತೆಯನ್ನು ಕಿತ್ತುಹಾಕಲು ಸಾಧ್ಯವಾಗುತ್ತಿಲ್ಲ. ಅನುಭವ ಮಂಟಪ ವೆಂಬ ಪಾರ್ಲಿಮೆಂಟಿನಲ್ಲಿ ಮಹಿಳಾ ಸಮಾನತೆಯನ್ನು ನೀಡಿದ ಪ್ರಥಮ ನಾಯಕ ಬಸವಣ್ಣ. ಸಮಾಜದ ಎಲ್ಲ ವರ್ಗದವರನ್ನು ಇವ ನಮ್ಮವ ಇವ ನಮ್ಮವ ಎಂದವರು ಕಾಯಕ ದಾಸೋಹವನ್ನು ಅನುಷ್ಠಾನಕ್ಕೆ ತಂದರು. ದುಡಿಯುವ ಸಂಸ್ಕೃತಿಯನ್ನು ತಿಳಿಸಿದ್ದರೆ ಅದು ಬಸವಣ್ಣ. ವ್ಯಕ್ತಿಯಿಂದ ಸಮಾಜ ಕಲ್ಯಾಣವಾಗಬೇಕು ಎಂಬ ಅವರ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿದೆ. ಮಾನವೀಯತೆ ಅವರ ಸಂದೇಶಗಳು ಸಮಾಜಕ್ಕೆ ಸೋಪಾನವಾಗಿವೆ. ಅಂತೆ ರಾಷ್ಟ್ರಧರ್ಮವನ್ನು ಕಾಪಾಡಿದ ಶಿವಾಜಿ ಮಹಾರಾಜರ ಕೊಡುಗೆ ಮರೆಯುವಂತೆ ಇಲ್ಲ. ಇಂತಹ ಮಹಾತ್ಮರ ಜೀವನವನ್ನು ನಮ್ಮ ಯುವ ಜನಾಂಗಕ್ಕೆ ತಿಳಿಸಿ ಕೊಡುವ ಅವಶ್ಯಕತೆ ಇದೆ. ವಿಚಾರಗಳನ್ನು ನಮ್ಮ ಬದುಕಿಗೆ ಅಳವಡಿಸಿಕೊಂಡರೆ ನಾವು ಅವರಿಗೆ ಸಲ್ಲಿಸುವ ಮಹಾ ಗೌರವ ಎಂದು ಹೇಳಿದರು.
ಬೆಳಗಾವಿಯ ಉತ್ತರ ಶಾಸಕರಾದ ರಾಜು ಶೇಟ್ ಅವರು ಮಾತನಾಡಿ ಮಹಾತ್ಮ ಬಸವೇಶ್ವರ ಹಾಗೂ ಶಿವಾಜಿ ಮಹಾರಾಜರು ಈ ಸಮಾಜಕ್ಕೆ ನೀಡಿದ ಸೇವೆ ಅಗಾಧವಾದದ್ದು ಇಂಥ ಪುಣ್ಯಪುರುಷರ ದಾರಿಯಲ್ಲಿ ನಮ್ಮ ಜನಾಂಗ ಸಾಗಿದ್ದೆ ಆದರೆ ಸಮಾಜ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎ ಬಿ ಪಾಟೀಲ್ ಅವರು ಮಾತನಾಡುತ್ತಾ ಬಸವಣ್ಣನಂತ ದರ್ಶನಿಕ ಇಲ್ಲದೆ ಹೋಗಿದ್ದರೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿರಲಿಲ್ಲ. ಸಮಾಜ ಧಾರ್ಮಿಕವಾದ ಅವರ ಕ್ರಾಂತಿ ಮನು ಕುಲದ ಏಳಿಗೆಗೆ ಅತ್ಯಂತ ಮಹತ್ವವಾಗಿತ್ತು. ಅವರ ಪಥದಲ್ಲಿ ಸಾಗುವ ಮನಸ್ಸನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಪ ಮಹಾಪೌರರಾದ ಮಹಾಂತೇಶ್ ಕೊಂಗಾಳಿಯವರು ಮಾತನಾಡಿ ಬಸವಣ್ಣನವರು ಒಂದು ಜಾತಿ ಧರ್ಮ ಪಂತಕ್ಕೆ ಮಾತ್ರ ಸೀಮಿತಗೊಳ್ಳದೆ ವಿಶ್ವ ಮಾನವರಾಗಿ ಸಮಾಜವನ್ನು ಬೆಳಗಿದವರು ಅವರನ್ನ ನಾವೆಲ್ಲರೂ ಸದಾ ಸ್ಮರಿಸಬೇಕು ಅವರ ಮಾರ್ಗದಲ್ಲಿ ಸಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಸರ್ಜು ಕಾಟ್ಕರ್, ಡಾ ಎ ಬಿ ಘಾಟ್ಗೆ, ಡಾ. ಮಹೇಶ್ ಗುರನಗೌಡರ್ ಬಸವಣ್ಣವರು ಹಾಗೂ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷರಾದ ಮುರುಗೇಶ್ ಡಪಲಾಪುರ್, ಪ್ರಶಾಂತ್ ರಾಂಪುರೆ, ಪ್ರಾಚಾರ್ಯ ಬಿಎಸ್ ಗವಿಮಠ್, ನಗರಸೇವಕ ಸಂದೀಪ್ ಜೀರಿಗೆಹಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕೆಎಲ್ಇ ಆಸ್ಪತ್ರೆಯ ರಕ್ತಭಂಡಾರದ ಮುಖ್ಯಸ್ಥರಾದ ಶ್ರೀಕಾಂತ್ ವಿರ್ಗಿ, ವಿಟಿಯು ಕುಲ ಸಚಿವರಾದ ಡಾ ಪ್ರಸಾದ್ ರಾಂಪುರ ವಿಶೇಷ ಸಾಧನೆಗಾಗಿ ಸತ್ಕರಿಸಲಾಯಿತು. ಶ್ರೀಕಾಂತ್ ಶಾನವಾಡ ನಿರೂಪಿಸಿದರು. ರಾಜೇಂದ್ರ ಚಿಟಗಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ