E-PAPER
16 Nov 2026, 02:19:29 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅನುಭಾವದಿಂದ ವಚನಗಳು ಮೂಡಿದ ವಚನಗಳು; ಬಸವರಾಜ ರೊಟ್ಟಿ 

ಬೆಳಗಾವಿ; ವಚನಗಳ ಕಂಠಪಾಠ ಮಾಡುವುದರಿಂದ ಮಕ್ಕಳಲ್ಲಿ ಸ್ಮರಣ ಶಕ್ತಿ ವೃದ್ಧಿಸುತ್ತದೆ. ಅದರೊಂದಿಗೆ ಉತ್ತಮ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬೆಳೆಯಲು ಸಹಕಾರ ನೀಡುತ್ತವೆ. ಬಸವಾದಿ ಶರಣರ ಕಾಯಕ, ದಾಸೋಹ,ಅನುಭವ, ಅನುಭಾವದಿಂದ ವಚನಗಳು ಮೂಡಿ ಬಂದಿವೆ.ಮನುಷ್ಯನಲ್ಲಿರುವ ಮೌಡ್ಯವನ್ನು ವಚನಗಳು ದೂರಮಾಡಿ ಬಾಳಲ್ಲಿ ಬೆಳಕು ನೀಡುತ್ತವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣ ಬಸವರಾಜ ರೊಟ್ಟಿ ಹೇಳಿದರು.
    ಇವರು ರವಿವಾರ ದಿನಾಂಕ 2 -3 -2025 ರಂದು ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಮಹಾನಗರ ಹಾಗೂ ತಾಲೂಕ ಘಟಕಗಳು ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಶಿವಬಸವ ನಗರ ಬೆಳಗಾವಿಯಲ್ಲಿ ಏರ್ಪಡಿಸಿದ ಬೆಳಗಾವಿ ತಾಲೂಕ ಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೇಳಿದರು.
   70 ಜನ ಮಕ್ಕಳು ಹಾಗೂ ವಯಸ್ಕರರು ಭಾಗವಹಿಸಿದ ವಚನ ಕಂಠಪಾಠ ಸ್ಪರ್ಧೆಯಲ್ಲಿ 180 ವಚನ ಹೇಳಿದ ಕುಮಾರ ಶ್ರೇಯಸ್ಸ ಕುರಗುಂದಿ ಪ್ರಥಮ ಸ್ಥಾನ,97 ವಚನ ಹೇಳಿದ ಶ್ರವಣಕುಮಾರ ದೇವರಮನಿ ದ್ವಿತಿಯ ಸ್ಥಾನ,96 ವಚನ ಹೇಳಿದ ಸುಪ್ರೀತಾ ಕುಂಬಾರ ತೃತಿಯ ಸ್ಥಾನ ಗಳಿಸಿದರು.ಈ ಮೂರು ಜನ ವಿಜೇತರಿಗೆ ಮುಂಬರುವ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಬಹುಮಾನಗಳನ್ನು ವಿತರಣೆ ಮಾಡಲಾಗುವುದೆಂದು ತಿಳಿಸಿದರು ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
    ಪ್ರಾರಂಭದಲ್ಲಿ ಜಾಲಿಂ ಮಹಾಸಭಾದ ಮಹಾ ನಗರ  ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಬೂದಿಹಾಳ ಸ್ವಾಗತಿಸಿದರು.ಸಂಚಾರಿ ಗುರು ಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಸ್ಪರ್ಧಾ ನಿಯಮಗಳನ್ನು ತಿಳಿಸಿದರು. ಬೆಳಗಾವಿ ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ರಾಜಶೇಖರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಘಟಕದ ಅಧ್ಯಕ್ಷರಾದ ಬಿ.ಜಿ ವಾಲಿಇಟಗಿ, ಪ್ರಾಯೋಜಕರಾದ ಬಸವರಾಜ ಮಿಂಡೊಳ್ಳಿ ಹಾಗೂ ಜಿಲ್ಲಾ ಖಜಾಂಚಿ ಮುರಿಗೆಪ್ಪ ಬಾಳಿ ವೇದಿಕೆಯ ಮೇಲಿದ್ದರು.
      ಜಾ.ಲಿಂ ಮಹಾಸಭಾದ ಪದಾಧಿಕಾರಿಗಳಾದ ಆನಂದ ಕೊಂಡಗುರಿ,ಎಫ್. ಆರ್ ಪಾಟೀಲ,ಈರಣ್ಣ ಚಿನಗುಡಿ, ಸುಜಾತಾ ಮತ್ತಿಕಟ್ಟಿ,ನೈನಾ ಗಿರಿಗೌಡರ,ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ,ಮಹಾದೇವಿ ಬೂದಿಹಾಳ,ಕೆಂಪಣ್ಣಾ ರಾಮಾಪುರಿ,ನೇತ್ರಾವತಿ ರಾಮಾಪುರಿ,ಭಾರತಿ ಪವಾಡೆಪಗೋಳ, ಮಹಾನಂದಾ ಪಾರುಶೆಟ್ಟಿ, ರಾಜಶ್ರೀ ದೇಯನ್ನವರ,ಶರಣ ಲಾಳಸಂಗಿ,ಎನ್.ಪಿ.ಉಪ್ಪಿನ,ಬಾಬುಗೌಡ ಪಾಟೀಲ,ಶರಣ ಹಿರೇಹೊಳಿ,ಸಿ ಎಮ್ ಹುಬ್ಬಳ್ಳಿ,ಪಿ ಎ ರೊಟ್ಟಿ, ಮುಂತಾದ ಮಹಾಸಭಾ ಹಾಗೂ ಸಂಚಾರಿ ಗುರುಬಸವ ಬಳಗದ ಸದಸ್ಯರು,ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ