LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಮ್ಮ ಕ್ಲಿನಿಕ್ ಮಾಹಿತಿ ಕೊಡಲು ಬಿಬಿಎಂಪಿ ಹೊಸ ಪ್ಲಾನ್….!

ಬೆಂಗಳೂರು: ‘ನಮ್ಮ ಕ್ಲಿನಿಕ್’ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ಅವುಗಳ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಹೊಸ ತಂತ್ರವನ್ನೂ ಪಾಲಿಕೆ ಅನುಸರಿಸಲಿದೆ. ಸದ್ಯ ಬೆಂಗಳೂರಿನ ಎಂಟು ವಲಯಗಳಲ್ಲಿ ನಮ್ಮ ಕ್ಲಿನಿಕ್​ಗಳನ್ನ ಜನರ ಬಳಕೆಗೆ ಸಿಗುವಂತೆ ಮಾಡಲು ಚಿಂತನೆ ನಡೆಸಿರುವ ಬಿಬಿಎಂಪಿಯ ಆರೋಗ್ಯ ವಿಭಾಗ, ಪ್ರತಿ ವಾರ್ಡ್​ನಲ್ಲೂ ಕ್ಯೂಆರ್ ಕೋಡ್ ಅಳವಡಿಸಲು ಸಜ್ಜಾಗಿದೆ.

ಕ್ಯೂಆರ್ ಕೋಡ್ ಮೂಲಕ ಆಯಾ ವಾರ್ಡ್​ಗಳಲ್ಲಿ ನಮ್ಮ ಕ್ಲಿನಿಕ್ ಎಲ್ಲಿದೆ, ಅಲ್ಲಿ ಸಿಗೋ ಸೌಲಭ್ಯಗಳೇನು ಎಂಬ ಬಗ್ಗೆ ಜನರಿಗೆ ಮಾಹಿತಿ ಒದಗಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ರಾಜಧಾನಿಯ ವಾರ್ಡ್​ಗಳಲ್ಲಿರುವ ನಮ್ಮ ಕ್ಲಿನಿಕ್​ಗಳಲ್ಲಿ ಏನೆಲ್ಲ ಸೌಲಭ್ಯ ಸಿಗಲಿದೆ ಎಂಬ ಬಗ್ಗೆ ಪಾಲಿಕೆ ಜನರಿಗೆ ಮಾಹಿತಿ ಒದಗಿಸಲಿದೆ. ಕ್ಯೂಆರ್ ಕೋಡ್ ಜೊತೆಗೆ ಆಯಾ ವಲಯದಲ್ಲಿರುವ ನಮ್ಮ ಕ್ಲಿನಿಕ್​ಗಳಲ್ಲಿ ಇರುವ ವೈದ್ಯರ ಮಾಹಿತಿ, ವೈದ್ಯರ ಫೋಟೋವನ್ನು ಕೂಡ ಪ್ರಕಟಿಸುವ ಮೂಲಕ ಜನರಿಗೆ ನಮ್ಮ ಕ್ಲಿನಿಕ್ ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ನೀಡಲು ಮುಂದಾಗಿದೆ.

ಜನರಲ್ಲಿ ನಮ್ಮ ಕ್ಲಿನಿಕ್​ಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಬಿಬಿಎಂಪಿ ಆರೋಗ್ಯ ವಿಭಾಗದ ಉದ್ದೇಶವಾಗಿದೆ ಎಂದು ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಈಗಾಗಲೇ ನಮ್ಮ ಕ್ಲಿನಿಕ್​ಗಳಲ್ಲಿ ವಾರಕ್ಕೊಮ್ಮೆ ಯೋಗ ನಡೆಸುವ ಮೂಲಕ ಜನರ ಗಮನ ಸೆಳೆಯಲು ಕೂಡ ಪಾಲಿಕೆ ಯೋಜನೆ ರೂಪಿಸಿತ್ತು. ಇದಾದ ಬಳಿಕ ಇದೀಗ ಕ್ಯೂಆರ್ ಕೋಡ್ ಮೂಲಕ ನಮ್ಮ ಕ್ಲಿನಿಕ್​ಗಳನ್ನ ಸಮರ್ಪಕವಾಗಿ ಜನರ ಬಳಕೆಗೆ ಸಿಗುವಂತೆ ಮಾಡಲು ಪಾಲಿಕೆ ಹೆಜ್ಜೆ ಇಟ್ಟಿದೆ. ಬಿಬಿಎಂಪಿಯ ಈ ಹೊಸ ಪ್ಲಾನ್ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಬಡವರು, ದಿನಗೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸಬೇಕು ಎನ್ನುವ ಉದ್ದೇಶದೊಂದಿಗೆ 2022ರ ಡಿಸೆಂಬರ್ 14 ರಂದು ಕರ್ನಾಟಕದಾದ್ಯಂತ ನಮ್ಮ ಕ್ಲಿನಿಕ್​ಗಳನ್ನು ಆರಂಭಿಸಲಾಗಿತ್ತು. ಅದರಂತೆ, ಬೆಂಗಳೂರಿನ ವಾರ್ಡ್​ಗಳಲ್ಲಿಯೂ ನಮ್ಮ ಕ್ಲಿನಿಕ್​ಗಳು ಕಾರ್ಯಾಚರಿಸುತ್ತಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST