E-PAPER
16 Nov 2026, 02:20:04 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿ ಸಾಹಿತಿಗಳಿಗೆ  ಪ್ರಶಸ್ತಿಗಳಾಗಲಿ ಸ್ಥಾನಮಾನವಾಗಲಿ ಸಿಗುತ್ತಿಲ್ಲ ; ಎಲ್. ಎಸ್.ಶಾಸ್ತ್ರಿ

ಬೆಳಗಾವಿ; ಗಡಿನಾಡು ಬೆಳಗಾವಿ ಆಡು ಮಾತಿನಲ್ಲಿ ಕರ್ನಾಟಕದ ಎರಡನೇ ರಾಜಧಾನಿ ಎನ್ನುವ ಅಭಿಮಾನದ ಮಾತುಗಳು ಹರಿದಾಡುತ್ತವೆ. ಸ್ಥಳೀಯ ಬೆಳಗಾವಿ ಜಿಲ್ಲೆಯವರಿಗೆ ಅದರಲ್ಲೂ ಸಾಹಿತ್ಯ ವಲಯದವರಿಗೆ ಬಹು ದಿನಗಳಿಂದಲೂ ಬಹಳ ಅನ್ಯಾಯವಾಗುತ್ತಿದೆ ಅರ್ಹ ಸಾಹಿತಿಗಳಿಗೆ ಸಿಗಬೇಕಾದ ಪ್ರಶಸ್ತಿಗಳಾಗಲಿ ಸ್ಥಾನಮಾನಗಳಾಗಲಿ ಸಿಗುತ್ತಿಲ್ಲ ಎಂದು ಹಿರಿಯ ಸಾಹಿತಿ ಎಲ್ ಎಸ್ ಶಾಸ್ತ್ರಿ  ಹೇಳಿದರು.
 ಅವರು ರಾಜ್ಯಮಟ್ಟದ ಸಂಘವಾದ ಕರ್ನಾಟಕ ವಿಕಾಸರಂಗ ಇಂದು ಬೆಳಗಾವಿಯಲ್ಲಿ ಜಿಲ್ಲಾ ಘಟಕವನ್ನು ಪ್ರಾರಂಭ ಮಾಡುತ್ತಿದೆ. ಈ ಜಿಲ್ಲೆಯ ಕಲಾವಿದರು ಮತ್ತು ಸಾಹಿತಿಗಳ ಪರವಾಗಿ ಕರ್ನಾಟಕ ವಿಕಾಸ ರಂಗದ ಬೆಳಗಾವಿ ಘಟಕ ನಿಲ್ಲುವಂತಾಗಬೇಕು. ಗಡಿ ಭಾಗದಲ್ಲಿ ಕನ್ನಡ ಸಂಘಟನೆಗಳು ಬಹಳ ಇವೆ. ಆ ಎಲ್ಲ ಸಂಘಟನೆಗಳು ಒಂದಾಗಿ ಕೆಲಸಗಳನ್ನು ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ಬೆಳಗಾವಿಗರಿಗೆ ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ ಎಂದು ಸೋಮವಾರ ಮಧ್ಯಾಹ್ನ ನಗರದ ಕನ್ನಡ ಸಾಹಿತ್ಯ ಭವನದ ಸಭಾಂಗಣದಲ್ಲಿ ಕರ್ನಾಟಕ ವಿಕಾಸರಂಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಎಲ್ ಎಸ್ ಶಾಸ್ತ್ರಿಯವರು ಅಭಿಪ್ರಾಯಪಟ್ಟರು.
 ಕನ್ನಡ ಭಾಷೆಯ ಉಳಿಕೆ ಮತ್ತು ಬೆಳವಣಿಗೆ ಸಲುವಾಗಿ ತಳಸ್ಥರದಿಂದ ಕಾರ್ಯ ಚಟುವಟಿಕೆಗಳನ್ನು ಮಾಡುವ ಯೋಜನೆಗಳನ್ನು ಕರ್ನಾಟಕ ವಿಕಾಸರಂಗ ಹಮ್ಮಿಕೊಳ್ಳಲಿ. ಮಾರ್ಗದರ್ಶನ ಮತ್ತು ಸಹಯೋಗಕ್ಕೆ ಬೆಳಗಾವಿಯಲ್ಲಿ ಅನೇಕ ಕಲಾವಿದರು ಮತ್ತು ಸಾಹಿತಿಗಳು ಜೊತೆಗಿದ್ದಾರೆ ಎನ್ನುವ ಆಶಾಭಾವನೆಯ ಮಾತನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟಕಕಾರ ಸಾಹಿತಿ ಡಿ ಎಸ್ ಚೌಗಲೆಯವರು ಹೇಳಿದರು..
 ಬೆಂಗಳೂರಿನ ಅನೇಕ ವೇದಿಕೆ ಮತ್ತು ಮಾಧ್ಯಮಗಳ ಮಧ್ಯೆ ಕೆಲಸ ಮಾಡಿದ ಅನುಭವವನ್ನು ಹೊಂದಿದ ಹಿನ್ನೆಲೆಯಲ್ಲಿ ಬೆಳಗಾವಿಯ ಕಲಾವಿದರು ಮತ್ತು ಸಾಹಿತಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕಾರ್ಯವಾಗುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸರಂಗ ಶ್ರಮಿಸಲಿದೆ ಎಂದು ಕರ್ನಾಟಕ ವಿಕಾಸರಂಗದ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಶ್ರೀಮತಿ ಸರ್ವಮಂಗಳಾ ಅರಳಿಮಟ್ಟಿ ಹೇಳಿದರು.
ವೇದಿಕೆಯ ಮೇಲೆ ಕರ್ನಾಟಕ ವಿಕಾಸ ರಂಗದ ಉಪಾಧ್ಯಕ್ಷರುಗಳಾದ ಆರ್ ಪಿ ಪಾಟೀಲ್ ನ್ಯಾಯವಾದಿಗಳು ಹಾಗೂ ಪ್ರಕಾಶ ಹೊಸಮನಿ ಹಾಗೂ ಖಜಾಂಚಿಯಾದ ಸೋಮಲಿಂಗ ಮಾವಿನಕಟ್ಟಿ ಉಪಸ್ಥಿತರಿದ್ದರು.
 ಇದೇ ಸಂದರ್ಭದಲ್ಲಿ ಲಿಂಗರಾಜ್ ಶಟ್ಟೆಣ್ಣವರ ಹಾಗೂ ಜ್ಯೋತಿ ಗವಿಮಠ ಇವರಿಂದ ಕನ್ನಡ ಗೀತೆಗಳು ಪ್ರಸ್ತುತಗೊಂಡವು.
 ಕಾರ್ಯಕ್ರಮದ ಸಂಪೂರ್ಣ  ನಿರ್ವಹಣೆಯನ್ನು ಸಂಘದ ಕಾರ್ಯದರ್ಶಿ ಎಂ ವಾಯ್ ಮೆಣಸಿನಕಾಯಿಯವರು ನಿರ್ವಹಿಸಿದರು.ಶಿವಾನಂದ ತಲ್ಲೂರ್ ನಿರೂಪಿಸಿದರು.ಡಾ, ಸುನೀಲ್ ಪರೀಟ್ ವಂದಿಸಿದರು.
 ಭಾಗ್ಯಶ್ರೀ ಭೈರಪ್ಪನವರ್, ಕಾವೇರಿ ಕಿಲಾರಿ, ಭವ್ಯಾ ಸಂಪಗಾರ್, ಮಂಜುಳಾ ಹೊತ್ತಿಗೆಮಠ, ಮುರುಗೇಶ ಶಿವಪೂಜಿ, ಶಿವಾನಂದ ನಾಯಕ್, ಆರ್ ಬಿ ಬನಶಂಕರಿ, ಮಲ್ಲಿಕಾರ್ಜುನ್ ಕೊಳ್ಳಿ, ಮತ್ತಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ