ಈ ಕಾರಣಕ್ಕೆ ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ .!
ಬೆಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮಾರ್ಗದಲ್ಲಿ ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ ಇಂದಿನಿಂದ ನವೆಂಬರ್ 1ರವರೆಗೆ ಬೆಂಗಳೂರು-ಮಂಗಳೂರು ಹಾಗೂ ಬೆಂಗಳೂರು-ಕಾರವಾರ ನಡುವಿನ 6 ರೈಲುಗಳ ಹಗಲು ಸಂಚಾರ ರದ್ದುಗೊಳಿಸಲಾಗಿದೆ.
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, ಕಾರವಾರ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್ ವಾರದ ವಿಶೇಷ ಎಕ್ಸ್‌ಪ್ರೆಸ್ ಮುಂದಿನ 5 ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.