LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

BHEL ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಹೆಚ್ಇಎಲ್) ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿತ್ತು. ಈ ಕೆಲಸಗಳಿಗೆ ಡಿಸೆಂಬರ್ 09 ಅಂದರೆ ನಾಳೆಯೇ ಕೊನೆಯ ದಿನವಾಗಿದ್ದರಿಂದ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅಪ್ಲೇ ಮಾಡಬಹುದು. ಏಕೆಂದರೆ ಕೊನೆಯ ದಿನಾಂಕವಾದ ಮೇಲೆ ಯೋಚಿಸಿದರೆ ಏನು ಉಪಯೋಗ ಇರುವುದಿಲ್ಲ.

ಇಷ್ಟ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಕೆಲಸಗಳಿಗೆ ಅಪ್ಲೇ ಮಾಡಬಹುದು. ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರಿಗೆ ಇಲ್ಲಿ ಅವಕಾಶ ಇದೆ. ಬಿಹೆಚ್ಇಎಲ್ ಸಂಸ್ಥೆಯ FTA ಗ್ರೇಡ್ II (AUSC) ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಇನ್ನು ಈ ಹುದ್ದೆಗಳಿಗೆ ಬೇಕಾದ ವೇತನ ಶ್ರೇಣಿ, ಹುದ್ದೆಯ ಸ್ಥಳ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ. ಇನ್ನು ಈ ಕೆಲಸಗಳಿಗೆ ಪರೀಕ್ಷೆ ಇರಲ್ಲ. ಇಂಟರ್ವ್ಯೂವ್ ಮೂಲಕ ನೇಮಕಾತಿ ಇರುತ್ತದೆ.

ವೇತನ ಶ್ರೇಣಿ- 84,000 ರೂಪಾಯಿಗಳು

ಯಾವುದೇ ಪರೀಕ್ಷೆ, ಟೆಸ್ಟ್ ಇರಲ್ಲ

ಇಂಟರ್ವ್ಯೂವ್ ಮೂಲಕ ಆಯ್ಕೆ

ಅರ್ಜಿ ಶುಲ್ಕ- ಇರುವುದಿಲ್ಲ

ವಿದ್ಯಾರ್ಹತೆ-

ಬಿಇ/ ಬಿಟೆಕ್/ ಬಿಎಸ್ಸಿ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಕನಿಷ್ಠ 2 ವರ್ಷ ಕೆಲಸದ ಅನುಭವ ಇರಬೇಕು.

ವಯಸ್ಸಿನ ಮಿತಿ

18 ವರ್ಷದಿಂದ 34 ವರ್ಷಗಳು

ಉದ್ಯೋಗದ ಹೆಸರು– FTA Grade-II (AUSC)

ಒಟ್ಟು ಹುದ್ದೆಗಳು= 05

ಅರ್ಜಿ ಸಲ್ಲಿಸುವುದು ಹೇಗೆ..?

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ recruitment ಎನ್ನುವುದನ್ನು ಕ್ಲಿಕ್ ಮಾಡಿ BHEL ಉದ್ಯೋಗಗಳ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ. ಹಾಗೇ ಕೆಳಗೆ ಸ್ಕ್ರಾಲ್ ಮಾಡಿ, ಉದ್ಯೋಗಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ಕಿಸಿ. ಯಾವುದೇ ತಪ್ಪುಗಳಿಲ್ಲದೆ ಅರ್ಜಿಯನ್ನ ಪೂರ್ಣವಾಗಿ ಭರ್ತಿ ಮಾಡಿ ಸಬ್ಮೀಟ್ ಮಾಡಿ.

ಅನ್ಲೈನ್ ಅಪ್ಲೇ ಲಿಂಕ್-

https://hwr.bhel.com/recruitment/FtaEngg/index.jsp

ಅರ್ಜಿಗೆ ಕೊನೆ ದಿನಾಂಕ- 09 ಡಿಸೆಂಬರ್ 2024
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ ತನಿಖೆ ಚುರುಕು : SIT ಎದುರು ವಿಚಾರಣೆಗೆ ಹಾಜರಾದ ದೂರುದಾರ.!ನಿವೃತ್ತಿ ಬಳಿಕ ಸರ್ಕಾರದ ಯಾವುದೇ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದ ಸಿಜೆಐ ಬಿ.ಆರ್. ಗವಾಯಿಸೋನ್‌ಪ್ರಯಾಗ್ ಬಳಿ ಭೂಕುಸಿತ ಸಂಭವಿಸಿದ ಹಿನ್ನೆಲೆ ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸುಪ್ರೀಂ ಕೋರ್ಟ್‌ ಮಾರ್ಗಸೂಚಿ'ಮೈಸೂರಿನ ಅಭಿವೃದ್ಧಿಗೆ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ'-ಮುಖ್ಯಮಂತ್ರಿ ಸಿದ್ದರಾಮಯ್ಯಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ!ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಈ ತಿಂಗಳ ಅಂತ್ಯಕ್ಕೆ ನಿವೃತ್ತಿತಾರಕಕ್ಕೇರಿದ ಕಾಂಬೋಡಿಯಾ-ಥೈಲ್ಯಾಂಡ್ ಘರ್ಷಣೆ; ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯರಿಗೆ ಸಲಹೆಶಾಲಾ ಮೇಲ್ಛಾವಣಿ ಕುಸಿದು 7 ಮಕ್ಕಳು ಸಾವು; ಐವರು ಶಿಕ್ಷಕರ ಅಮಾನತು'ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮೀಕ್ಷೆ ಅನಿವಾರ್ಯ'- ಸಿಎಂ