LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತ್ಯಾಗಕ್ಕೆ ಬಲಿಯಾದ ಬಿದನೂರು

ವರದಿ : ಸನತ್ , ಶಿವಮೊಗ್ಗ
ಪ್ರಕೃತಿ ಸೌಂದರ್ಯವನ್ನೆ ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ಜಿಲ್ಲೆಯ ನಗರ ಹೋಬಳಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಆಗಬೇಕಿತ್ತು. ಆದರೆ ಆನೇಕ ಕಾರಣಗಳಿಂದಾಗಿ ಈ ಹೋಬಳಿ ಅಭಿವೃದ್ಧಿಯ ಪತದಲ್ಲಿ ಸೇರದೆ ತಟಸ್ಥವಾಗೆ ಉಳಿದಿದೆ.

ಹೌದು,ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಹೋಬಳಿಗಳು ಅಭಿವೃದ್ಧಿ ಆಗುತ್ತಲೆ ಇದೆ.ಆದರೆ ಈ ಭಾಗದ ಜನತೆ ದುರಾದೃಷ್ಟೊವೊ ಏನೋ ಅಥವಾ ಪ್ರಕೃತ್ತಿ ಸೌಂದರ್ಯವನ್ನು ಹಾಳು ಮಾಡಬಾರದೋ ಏನೋ ಸದ್ದುದೇಶದಿಂದ ಒಟ್ಟಾರೆ ಅಭಿವೃದ್ಧಿ ಮಾತ್ರ ಕಾಣದಾಗಿದೆ.ರಾಜರ ಅಳ್ವಿಕೆಯಲ್ಲಿ ಈ ಹೋಬಳಿಯನ್ನ ಬಿದನೂರು ಎಂದು  ಕರೆಯಲಾಗುತ್ತಿತ್ತು.ನಂತರ ವರ್ಷದಲ್ಲಿ ಇದಕ್ಕೆ ನಗರ ಎಂದು ನಾಮಕಾರಣ ಮಾಡಲಾಯಿತು.ಹೆಸರೆನೊ ನಗರವಾಯಿತು ಆದರ ನಗರ ಪ್ರದೇಶದಲ್ಲಿ ಇರುವಂತಹ ಯಾವುದೇ ಸೌಲತ್ತುಗಳು ಈ ಭಾಗದಲ್ಲಿ ಕಾಣದಾಯಿತು.ಪ್ರವಾಸಿ ತಾಣಕ್ಕೆ ಹೇಳಿ ಮಾಡಿಸಿದ ಊರು.ಆದರೂ ಸಹ ಇಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ.

ಮಾಣಿ , ಚಕ್ರ , ಸಾವೇಹಕ್ಲು  ಜಲಾಯಶಗಳು ಸೇರಿದಂತೆ ಇನ್ನೂ ಆನೇಕ ಪ್ರಕೃತಿ ಸೌಂದರ್ಯದ ರಸದೌತಣವೇ ಇಲ್ಲಿ ಕಾಣಸಿಗುತ್ತದೆ. ಪ್ರಕೃತಿ ಪ್ರಿಯರಿಗಂತೂ ಹೇಳಿ ಮಾಡಿಸಿದ ಜಾಗ ಆದರೆ ಮೂಲ ಸೌಕರ್‍ಯಗಳೆ ಇಲ್ಲಿ ಇಲ್ಲವಾಗಿರುವದರಿಂದ ಪ್ರವಾಸಿಗರಿಗೆ ಅನಕೂಲಕ್ಕಿಂತ ಆನಾನುಕೂಲವೇ ಜಾಸ್ತಿಯಾಗಿದೆ.ಇಂದು ಸಾಮಾಜಿಕ ಜಾಲತಾಣಗಳಲ್ಲಿ ಬಿದನೂರಿನ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಹಸಿರಿನಿಂದ ಆವರಿಸಿಕೊಂಡ ಬೆಟ್ಟಗುಡ್ಡಗಳು, ಜಲಪಾತಗಳು, ಡ್ಯಾಮ್‌ಗಳು ಹಾಗೂ ಐದು ಅಣೆಕಟ್ಟಿನ ಹಿನ್ನೀರಿನ ಮಧ್ಯೆ ಮಿಂಚುವ ನೈಸರ್ಗಿಕ ಸೌಂದರ್ಯ  ನೋಡಿದವರಿಗೆ ಇದು ನಿಜಕ್ಕೂ ಸ್ವರ್ಗದಂತೆ ಕಾಣುತ್ತದೆ.

ನಾಡಿಗೆ ಬೆಳಕನ್ನ ಕೊಟ್ಟು ತಮ್ಮ ಬದುಕನ್ನೆ ಕತ್ತಲಾಗಿಸಿಕೊಂಡ ಈ ಭಾಗದ ಜನತೆಗೆ ಇನ್ನೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿರುವುದು ನಿಜಕ್ಕೂ ದುರಾದೃಷ್ಟಕರ.ಮುಳಗಡೆ ಎಂಬ ಪದವೇ ಶಾಪವಾಗಿ ಈ ಭಾಗಕ್ಕೆ ಪರಿಣಮಿಸದೆ ಎಂದರೆ ತಪ್ಪಾಗಲಾರದು.
೧೯೬೪ರಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ, ಕೆಳದಿ ಸಂಸ್ಥಾನದ ರಾಜಧಾನಿಯಾಗಿ ಶತಮಾನಕ್ಕೂ ಹೆಚ್ಚು ಕಾಲ ವೈಭವದಿಂದ ಮೆರೆದ ಬಿದನೂರು ತನ್ನದೇ ನೆಲವನ್ನೇ ಕಳೆದುಕೊಂಡಿತು. ಸುಮಾರು 140 ವರ್ಷಗಳ ಕಾಲ ತಾಲೂಕು ಕೇಂದ್ರವಾಗಿದ್ದ ಈ ಊರು, ಆಡಳಿತಾತ್ಮಕ ಮಹತ್ವವನ್ನೂ ಕಳೆದುಕೊಂಡಿತು.ಸಾವಿರಾರು ಎಕರೆಗಳ ಭೂಮಿ, ಮನೆಮಠಗಳು ನೀರಿನಲ್ಲಿ ಮುಳುಗಿದವು. 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಊರನ್ನು ಬಿಟ್ಟು ಬೇರೆಡೆ ಬದುಕು ಹುಡುಕಬೇಕಾಯಿತು.ಅಂದು ಬಿದನೂರು ಕೇವಲ ನೀರಲ್ಲಷ್ಟೇ ಅಲ್ಲ, ಇತಿಹಾಸದಲ್ಲೇ ಮುಳುಗಿತು.

ನಂತರ ವರ್ಷಗಳು ಉರುಳಿವೆ. ಸರ್ಕಾರಗಳು ಬದಲಾಗಿವೆ. ಆದರೆ ಬಿದನೂರಿನ ಸ್ಥಿತಿ ಮಾತ್ರ ಹಾಗೆ ಉಳಿದಿದೆ. ವಿಸ್ತಾರದಲ್ಲಿ ದೊಡ್ಡ ಹೋಬಳಿಯಾದರೂ, ಅದರ ಅರ್ಧ ಭಾಗ ಇಂದಿಗೂ ಹಿನ್ನೀರಿನಲ್ಲೇ ಮುಳುಗಿದೆ. ತಾಲೂಕು ಕೇಂದ್ರ ಕಚೇರಿ ಹೊಸನಗರಕ್ಕೆ ಸರಿದಿತು. ನಂತರ ವಿಧಾನಸಭಾ ಕ್ಷೇತ್ರವೂ ಕೈ ತಪ್ಪಿತು.ಇದು ಕೇವಲ ಕಚೇರಿ ಬದಲಾವಣೆ ಅಲ್ಲ  ಊರಿನ ಬೆಳವಣಿಗೆಯ ಬಾಗಿಲೇ ಮುಚ್ಚಿದಂತಾಯಿತು.

ಇನ್ನೂ ಸಿಗಂದೂರಿಗೆ ಕೇಬಲ್ ಬ್ರಿಡ್ಜ್ ಆಗುವ ಮೊದಲು ಲಾಂಚ್‌ನಲ್ಲಿ ಪ್ರಯಾಣಿಕರು ಸಾಗುತ್ತಿದ್ದರು. ಸಂಜೆ 6 ಗಂಟೆ ನಂತರ ಲಾಂಚ್ ತನ್ನ ಪ್ರಯಾಣವನ್ನ ನಿಲ್ಲಿಸಿದ ನಂತರ ಪ್ರಯಾಣಿಕರು ಬಿದನೂರು ಮಾರ್ಗವಾಗಿಯೇ ವಾಹನವನ್ನು ಸಂಚಿರಿಸುತ್ತಿದ್ದರು.ಆದರಿಂದಾಗಿ ನಗರ ಒಂದಿಷ್ಟು ಸಂಪರ್ಕವನ್ನು ಹೊಂದಿತ್ತು .ಇದೀಗ ಕೇಬಲ್ ಬ್ರಿಡ್ಜ್ ಆದ ನಂತರ ಈ ಸಂಪರ್ಕಕ್ಕೂ ಕಡಿವಾಣ ಬಿದ್ದಿತ್ತು.ಇದರಿಂದಾಗಿ ನಗರವೇ ಬಿಕೋ ಎನ್ನುವಂತಾಗಿದೆ.ಬಿದನೂರಿಗೆ ಮತ್ತೊಂದು ಆಘಾತ ತಂದಿದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆ ಅಭಿವೃದ್ಧಿಯ ಸಂಕೇತವಾಗಬೇಕಿತ್ತು. ಆದರೆ ಅದು ಬಿದನೂರನ್ನು ಪ್ರವಾಹದಿಂದ ದೂರ ಸರಿಸಿದಂತೆ, ಪ್ರಗತಿಯಿಂದಲೂ ದೂರ ತಳ್ಳಿದೆ.

ಇದೆಲದಕ್ಕೂ ಕಾರಣ ನಗರ ಹೋಬಳಿ ಹೊಂದಿರುವ ಹೊಸನಗರ ತಾಲೂಕನ್ನ  ತೀರ್ಥಹಳ್ಳಿ ಹಾಗೂ ಸಾಗರ ವಿಧಾನ ಸಭಾ ಕ್ಷೇತ್ರಗಳಿಗೆ ಹರಿದು ಹಂಚಲಾಗಿದೆ. ಇದರಿಂದಾಗಿ ತಾಲೂಕು ತನ್ನದೇ ಆದ ಶಾಸಕರನ್ನ ಹೊಂದದಂತಾಗಿದೆ.ಇದು ಅಭಿವೃದ್ಧಿ ಗೆ ಹಿನ್ನಡೆಯಾಗಿದೆ ಎಂಬುದು ಈ ಭಾಗದ ಜನರ ಆರೋಪ.ಇದರಿಂದ ಹೊಸನಗರ ವಿಧಾನಸಭಾ ಕ್ಷೇತ್ರವನ್ನ ಪುನ: ನಿರ್ಮಿಸಬೇಕು ಎಂಬುದು ಜನರ ಆಗ್ರಹವಾಗಿದೆ.ಆಗಲಾದರೂ ನಮ್ಮ ಊರು ಅಭಿವೃದ್ಧಿ ಹೊಂದಬಹುದು ಎಂಬುದು ಜನರ ನಿರೀಕ್ಷೆಯಾಗಿದೆ.

ಒಮ್ಮೆ ಬಿದನೂರು ಮೂಲಕ ಸಿಗಂದೂರಿಗೆ ಸಂಚರಿಸುತ್ತಿದ್ದ ಸಾವಿರಾರು ವಾಹನಗಳು, ಇವತ್ತು ಈ ಊರನ್ನು ಸ್ಪರ್ಶಿಸುವುದೇ ಇಲ್ಲ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯೂ ಬಿದನೂರನ್ನು ಬಿಟ್ಟು ಹೋಗಿದೆ. ಮುಂದಿನ ದಿನಗಳಲ್ಲಿ ಬೆಕ್ಕೋಡಿ ಸೇತುವೆ ಉದ್ಘಾಟನೆಯಾದರೆ, ಈ ಊರು ಸಂಪೂರ್ಣವಾಗಿ ಬದಿಗೊತ್ತಲ್ಪಡುತ್ತದೆ ಎಂಬ ಭೀತಿ ಇನ್ನಷ್ಟು ಹೆಚ್ಚಾಗಿದೆ.

ಇಷ್ಟೆಲ್ಲದರ ನಡುವೆಯೂ ಬಿದನೂರು ಇನ್ನೂ ಜೀವಂತವಾಗಿದೆ. ಮಾರಿಕಾಂಬ ಜಾತ್ರೆ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿಗೂ ಜನರನ್ನು ಸೆಳೆಯುತ್ತವೆ. ಹೊಸನಗರ ತಾಲೂಕಿನಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಹೋಬಳಿ ಇದಾಗಿದ್ದರೂ, ಅವುಗಳಿಗೆ ಅಗತ್ಯವಾದ ಅಭಿವೃದ್ಧಿ ಇನ್ನೂ ಕನಸಾಗಿಯೇ ಉಳಿದಿದೆ.
ಅಂತಿಮವಾಗಿ ಬಿದನೂರಿನ ಭವಿಷ್ಯವನ್ನು ಬದಲಾಯಿಸೋದು ಕೇವಲ ಸರ್ಕಾರದಿಂದ ಸಾಧ್ಯವಿಲ್ಲ.ಈ ಊರಿನ ಎಲ್ಲಾ ಜನರು ರಾಜಕೀಯ ಭೇದ ಮರೆತು ಒಗ್ಗಟ್ಟಾಗಿ ಧ್ವನಿ ಎತ್ತುವ ತನಕ ಬದಲಾವಣೆ ಸಾಧ್ಯವಿಲ್ಲ. ಇಲ್ಲದಿದ್ದರೆ ಬಿದನೂರು ಮುಂದೆಯೂ ಸುಂದರ ಚಿತ್ರಗಳಲ್ಲಿ ಮಾತ್ರ ಉಳಿದು ಬದುಕಿನ ಹಾದಿಯಲ್ಲಿ ನಿಧಾನವಾಗಿ ಮರೆತು ಹೋಗುವ ಊರಾಗುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST