LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಡಿ. 15ಕ್ಕೆ ಮಂಡ್ಯದಲ್ಲಿ ಹೆಚ್‌ಡಿಕೆಯಿಂದ ಬೃಹತ್ ಅಭಿನಂದನಾ ಸಮಾವೇಶ

ಮಂಡ್ಯ : ಜೆಡಿಎಸ್ ಭದ್ರಕೋಟೆ ಮೇಲೆ ಕಣ್ಣಿಟ್ಟು ದೇವೇಗೌಡರ ತವರು ಹಾಸನದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ‘ಕೈ’ ಪಡೆಗೆ ಟಕ್ಕರ್‌ ಕೊಡಲು ಗೌಡರ ಕುಟುಂಬ ಸಜ್ಜಾಗಿದ್ದಾರೆ. ಮಂಡ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಆಯೋಜಿಸುವ ಮೂಲಕ ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ತಿರುಗೇಟು ನೀಡಲು ಸಿದ್ಧತೆ ನಡೆಸಿದೆ.

ಚನ್ನಪಟ್ಟಣ ಸೇರಿದಂತೆ 3 ಕ್ಷೇತ್ರಗಳ ಉಪಚುನಾವಣೆ ಗೆಲುವಿನ ಬಳಿಕ ಹಳೇ ಮೈಸೂರು ಭಾಗ ಕಬ್ಜಾ ಮಾಡಲು ಮುಂದಾಗಿರುವ ಕಾಂಗ್ರೆಸ್. ಮಾಜಿ ಪ್ರಧಾನಿ ದೇವೇಗೌಡರ ಪ್ರಾಬಲ್ಯವಿರುವ ಹಾಸನದಲ್ಲಿ ಜನಕಲ್ಯಾಣ ಹೆಸರಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ. ಕಾಂಗ್ರೆಸ್ಸಿಗರ ಸಮಾವೇಶಕ್ಕೆ ಪ್ರತ್ಯುತ್ತರ ನೀಡಲು ಜೆಡಿಎಸ್ ಪ್ಲಾನ್ ಮಾಡಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ ಮಂಡ್ಯದಲ್ಲಿ ಹೆಚ್‌ಡಿಕೆ ಅಭಿನಂದನಾ ಕಾರ್ಯಕ್ರಮ ಹೆಸರಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ.

ಡಿ.15 ರಂದು ಮಂಡ್ಯದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸುವ ಗುರಿಯನ್ನು ಜೆಡಿಎಸ್ ನಾಯಕರು ಹೊಂದಿದ್ದಾರೆ

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಧಾನಿ ಜೊತೆಗೂಡಿ ನಾಮಪತ್ರ ಸಲ್ಲಿಸಿದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ಪ್ರತಿಷ್ಠಿತ ಅಪೋಲೋ ಫಾರ್ಮಸಿಗೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ!ಅರೇ,‌ ಉರ್ಫಿಗೇನಾಯ್ತು? ನಟಿಯ‌ ಮುಖ ಪರಚಿದ್ದು ಯಾರು?CAG report ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ವಿತ್ತೀಯ ಕೊರತೆ ಭಾರೀ ಹೆಚ್ಚಳ: CAG ವರದಿಯಲ್ಲಿ ಮಾಹಿತಿ; ಆದಾಯ ಶೇ.1.86, ಖರ್ಚು ಶೇ.12.54ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆಆನ್‌ಲೈನ್ ಗೇಮಿಂಗ್ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಬೆಂಗಳೂರು ನಗರ ವಿವಿಗೆ ಡಾ. ಮನಮೋಹನ್ ಸಿಂಗ್ ಹೆಸರು - ವಿಧಾನಸಭೆಯಲ್ಲಿ ಅನುಮೋದನೆಕ್ರಿಮಿನಲ್ ಕೇಸ್‌ನಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸೂದೆ ಇಂದು ಮಂಡನೆಮಕ್ಕಳ ನಾಪತ್ತೆ, ಅಪಹರಣ ಪ್ರಕರಣ : ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಸರಣಿ ಅಪಘಾತ: ಗಾಯಾಳು ರಕ್ಷಿಸಲು ಬಂದ ಆಂಬುಲೆನ್ಸ್‌ಗೂ ಅಪಘಾತ: ಓರ್ವ ಸಾವು