Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BIG NEWS : ಆಹಾರ ಉದ್ಯಮಿಗಳಿಗೆ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ನಿಯಮ ಕಡ್ಡಾಯ

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಆಹಾರ ಉದ್ದಿಮೆದಾರರು (ಫುಡ್ ಬ್ಯುಸಿನೆಸ್ ಆಪರೇಟರ್ಸ್-ಎಫ್ ಬಿ ಓ)ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು  ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತಾಧಿಕಾರಿಗಳಾದ ಡಾ.ಮೈತ್ರಿ ಸೂಚಿಸಿದ್ದಾರೆ.

ಇತ್ತೀಚೆಗೆ ರಾಜ್ಯಾದ್ಯಂತ ಕೈಗೊಂಡ ವಿಶೇಷ ಪರಿಶೀಲನಾ ಅಭಿಯಾನದಲ್ಲಿ ಹಲವು ಆಹಾರ ಉದ್ಯಮಗಳಲ್ಲಿ ಕೊರತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.

ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗದರ್ಶಿ ನಿಯಮಗಳು:

ಎಫ್ ಎಸ್ ಎಸ್ ಎ ಐ ಪರವಾನಗಿ / ನೋಂದಣಿ: ಎಲ್ಲಾ ಆಹಾರ ಉದ್ಯಮದಾರರು ಅನ್ವಯವಾಗುವಂತೆ ಮಾನ್ಯವಾದ  ಎಫ್ ಎಸ್ ಎಸ್ ಎ ಐ ಪರವಾನಗಿ ಅಥವಾ ನೋಂದಣಿಯನ್ನು ಹೊಂದಿರಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಷರತ್ತು ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು.

ಆಹಾರದ ಗುಣಮಟ್ಟ ಮತ್ತು ಸುರಕ್ಷತೆ: ಮಾನವ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥಗಳನ್ನು ಮಾತ್ರ ತಯಾರಿಸಿ, ಸಂಗ್ರಹಿಸಿ ಮಾರಾಟ ಮಾಡಬೇಕು. ಅವಧಿ ಮೀರಿದ, ಹಾಳಾದ, ಕೊಳೆತ, ಕಲುಷಿತ ಅಥವಾ ಅನುಮಾನಾಸ್ಪದ ಗುಣಮಟ್ಟದ ಯಾವುದೇ ಆಹಾರ ಪದಾರ್ಥಗಳನ್ನು ಬಳಸಬಾರದು.

ಕಚ್ಚಾ ವಸ್ತುಗಳ ಖರೀದಿ ಮತ್ತು ಸಂಗ್ರಹಣೆ: ಕಚ್ಚಾ ವಸ್ತುಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ, ಸೂಕ್ತ ತಾಪಮಾನದಲ್ಲಿ ನೈರ್ಮಲ್ಯಯುತ ವಾತಾವರಣ ಅಥವಾ ಕಂಟೇನರ್‌ಗಳಲ್ಲಿ ಸಂಗ್ರಹಿಸಬೇಕು. ಖರೀದಿಸುವಾಗ ಉತ್ಪನ್ನದ ಗುಣಮಟ್ಟ, ಬ್ಯಾಚ್ ಸಂಖ್ಯೆ, ತಯಾರಿಕಾ ದಿನಾಂಕ ಹಾಗೂ ಅವಧಿ ಮುಕ್ತಾಯ ದಿನಾಂಕ ಪರಿಶೀಲಿಸಬೇಕು.

ಅವಧಿ ಮೀರಿದ ಆಹಾರ ಪದಾರ್ಥಗಳ ವಿಲೇವಾರಿ: ಬಳಕೆಗೆ ಯೋಗ್ಯವಲ್ಲದ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ತಕ್ಷಣ ಪ್ರತ್ಯೇಕಿಸಿ, ಅವು ಮರುಬಳಕೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಅಡುಗೆಮನೆ ಮತ್ತು ಉದ್ದಿಮೆ ಆವರಣದ ಸ್ವಚ್ಛತೆ: ಅಡುಗೆಮನೆ, ತಯಾರಿಕಾ ಸ್ಥಳ, ಸಂಗ್ರಹಣಾ ಪ್ರದೇಶ, ನೆಲ, ಗೋಡೆ, ಕಿಟಕಿ, ಮೇಲ್ಛಾವಣಿ ಹಾಗೂ ಇತರ ಮೂಲಸೌಕರ್ಯಗಳನ್ನು ಸದಾ ಶುಚಿಯಾಗಿಡಬೇಕು. ಹಾನಿಗೊಳಗಾದ ಟೈಲ್ಸ್, ಗೋಡೆ ಅಥವಾ ಕಿಟಕಿಗಳನ್ನು ತಕ್ಷಣ ದುರಸ್ತಿ ಮಾಡಬೇಕು.

ಆಹಾರ ಸಂಪರ್ಕ ಮೇಲ್ಮೈಗಳು ಮತ್ತು ಉಪಕರಣಗಳು: ಆಹಾರದೊಂದಿಗೆ ನೇರ ಸಂಪರ್ಕಕ್ಕೆ ಬರುವ ಪಾತ್ರೆಗಳು, ಕತ್ತರಿಸುವ ಬೋರ್ಡ್‌ಗಳು, ಚಾಕುಗಳು ಹಾಗೂ ಕೌಂಟರ್‌ಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಬೇಕು. ಕಲುಷಿತಗೊಂಡ ಅಥವಾ ಅಪಾಯ ಉಂಟುಮಾಡುವ ಉಪಕರಣಗಳನ್ನು ಬಳಸಬಾರದು.

ಕೀಟ ನಿಯಂತ್ರಣ: ಆಹಾರ ತಯಾರಿಕಾ ಹಾಗೂ ಸಂಗ್ರಹಣಾ ಪ್ರದೇಶಗಳಲ್ಲಿ ಕ್ರಿಮಿಕೀಟ, ಇಲಿ, ಜಿರಳೆ ಪ್ರವೇಶಿಸದಂತೆ ತಡೆಯಲು ಅಧಿಕೃತ ಸಂಸ್ಥೆಗಳ ಮೂಲಕ ಪರಿಣಾಮಕಾರಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.

ತಾಪಮಾನ ನಿಯಂತ್ರಣ: ಹಾಲು, ಮಾಂಸ, ಮೊಟ್ಟೆ ಹಾಗೂ ಸಿದ್ಧ ಆಹಾರಗಳಂತಹ ಶೀಘ್ರ ಹಾಳಾಗುವ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು. ರೆಫ್ರಿಜರೇಟರ್, ಡೀಪ್ ಫ್ರೀಜರ್ ಹಾಗೂ ಕೂಲರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ವೈಯಕ್ತಿಕ ನೈರ್ಮಲ್ಯ: ಸಿಬ್ಬಂದಿಯು ಸ್ವಚ್ಛವಾದ ಉಡುಪು, ಹೆಡ್ ಕ್ಯಾಪ್/ಹೆಡ್ ಕವರ್, ಏಪ್ರನ್ ಹಾಗೂ ಅಗತ್ಯವಿದ್ದರೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸಬೇಕು. ಆಹಾರ ನಿರ್ವಹಣೆಗೆ ಮೊದಲು ಹಾಗೂ ಅಗತ್ಯವಿರುವಾಗ ಕೈಗಳನ್ನು ಸರಿಯಾಗಿ ತೊಳೆಯಬೇಕು.

ಸುರಕ್ಷಿತ ನೀರು ಮತ್ತು ಐಸ್: ಆಹಾರ ತಯಾರಿಕೆ, ಸಂಸ್ಕರಣೆ ಹಾಗೂ ಕುಡಿಯಲು ಬಳಸುವ ನೀರು ನಿಗದಿತ ಗುಣಮಟ್ಟದ್ದಾಗಿರಬೇಕು. ತಯಾರಿಕೆಯಲ್ಲಿ ಬಳಸುವ 'ಐಸ್' ಕೂಡ ಸುರಕ್ಷಿತ ಹಾಗೂ ಗುಣಮಟ್ಟದ ನೀರಿನಿಂದ ತಯಾರಿಸಲ್ಪಟ್ಟಿರಬೇಕು.

ಲೇಬಲಿಂಗ್ ಮತ್ತು ಆಹಾರ ಪ್ರದರ್ಶನ: ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿ ಎಫ್ ಎಸ್ ಎಸ್ ಎ ಐ ನಿಯಮಗಳ ಪ್ರಕಾರ ಕಡ್ಡಾಯ ಲೇಬಲಿಂಗ್ ವಿವರಗಳನ್ನು ನಮೂದಿಸಬೇಕು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಯಾವುದೇ ಲೇಬಲ್ ಅಥವಾ ಪ್ರದರ್ಶನವನ್ನು ಬಳಸಬಾರದು.

ಆಹಾರ ತ್ಯಾಜ್ಯ ನಿರ್ವಹಣೆ: ಆಹಾರ ತ್ಯಾಜ್ಯವನ್ನು ಮುಚ್ಚಳವಿರುವ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ, ನಿಯಮಗಳ ಪ್ರಕಾರ ವಿಲೇವಾರಿ ಮಾಡಬೇಕು. ತ್ಯಾಜ್ಯವು ಆಹಾರ ತಯಾರಿಕಾ ಪ್ರದೇಶದ ಬಳಿ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.

ಸಿಬ್ಬಂದಿಯ ಆರೋಗ್ಯ ಮತ್ತು ತರಬೇತಿ: ಸಿಬ್ಬಂದಿಗೆ ಆಹಾರ ಸುರಕ್ಷತೆ, ನೈರ್ಮಲ್ಯ ಹಾಗೂ ನೈರ್ಮಲ್ಯಯುತ ನಿರ್ವಹಣೆಯ ತರಬೇತಿ ನೀಡಬೇಕು. ಅನ್ವಯವಾಗುವ ನಿಯಮಗಳ ಪ್ರಕಾರ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಬೇಕು.

ದಾಖಲೆಗಳ ನಿರ್ವಹಣೆ: ಆಹಾರ ಪದಾರ್ಥಗಳ ಖರೀದಿ, ಸ್ವೀಕೃತಿ, ಸಂಗ್ರಹಣೆ, ತಾಪಮಾನ ನಿಯಂತ್ರಣ, ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ಸಿಬ್ಬಂದಿ ತರಬೇತಿಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆಗೆ ಸಹಕಾರ: ತಪಾಸಣೆ ನಡೆಸುವ ಅಧಿಕಾರಿಗಳಿಗೆ ಅಗತ್ಯ ದಾಖಲೆ ಹಾಗೂ ಮಾಹಿತ ನೀಡುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕು. ಗುರುತಿಸಲಾದ ಲೋಪಗಳನ್ನು ನಿಗದಿತ ಅವಧಿಯೊಳಗೆ ಸರಿಪಡಿಸಬೇಕು.

15 ದಿನಗಳ ಕಾಲಾವಕಾಶ - ವಿಫಲವಾದರೆ ಕಾನೂನು ಕ್ರಮ:

ವಿಶೇಷ ತಪಾಸಣೆ ವೇಳೆ ಕಂಡುಬಂದ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಲಹೆ/ಆದೇಶ ಜಾರಿಯಾದ ದಿನಾಂಕದಿಂದ 15 ದಿನಗಳ ಕಡ್ಡಾಯ ಕಾಲಾವಕಾಶ ನೀಡಲಾಗುತ್ತದೆ. ಕಾಲಾವಧಿ ಮುಗಿದ ನಂತರ ಮರುತಪಾಸಣೆ ನಡೆಸಲಾಗುವುದು. ಮರುತಪಾಸಣೆ ವೇಳೆ ಲೋಪಗಳನ್ನು ಸರಿಪಡಿಸದಿರುವುದು ಅಥವಾ ನಿಯಮ ಉಲ್ಲಂಘನೆ ಮುಂದುವರಿದಿರುವುದು ಕಂಡುಬಂದಲ್ಲಿ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006' ಹಾಗೂ ನಿಯಮಗಳು 2011ರನ್ವಯ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು ನಗರಪಾಲಿಕೆ ಮಟ್ಟದಲ್ಲಿ ಪೊಲೀಸ್–ಪಾಲಿಕೆ ಜಂಟಿ ಟಾಸ್ಕ್‌ಫೋರ್ಸ್ ರಚನೆ: ಸಚಿವ ಕೃಷ್ಣ ಬೈರೇಗೌಡಕೆ.ಆರ್.ಐ.ಡಿ.ಎಲ್. ಆರೋಪ- ವರದಿ ಬಳಿಕ ಕ್ರಮ: ಸಚಿವ ಈಶ್ವರ ಖಂಡ್ರೆಬಸವರಾಜ ಕನ್ನಾಳೆ ಭಾಲ್ಕಿಯ ಬಿಜೆಪಿ ಕಾರ್ಯಕರ್ತ: ಸಚಿವ ಈಶ್ವರ ಖಂಡ್ರೆಸಾಗರ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ವಾಗ್ದಾಳಿUPI ಪಾವತಿ ವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳುಹಿಸಿದ್ದೀರಾ? ವಾಪಸ್ ಪಡೆಯಲು ಹೀಗೆ ಮಾಡಿ!ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾಳೆ ಮಧ್ಯಾಹ್ನ ‘ಶಿಕ್ಷಕರ ದಿನಾಚರಣೆ’ ಆಚರಿಸಲು ಸರ್ಕಾರ ಆದೇಶBIG NEWS : ನೌಕರರ ಗ್ರಾಚ್ಯುಟಿ ಹಣದಿಂದ ಬಾಕಿ ಮೊತ್ತ ಕಡಿತಗೊಳಿಸುವಂತಿಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶಗಮನಿಸಿ : ಪ್ರತಿಯೊಬ್ಬ ಭಾರತೀಯನ ಮೊಬೈಲ್’ನಲ್ಲೂ ಇರಬೇಕಾದ 5 ಸರ್ಕಾರಿ ಆ್ಯಪ್‌ಗಳಿವು.!ಬೆಂಗಳೂರಿಗರೇ ಗಮನಿಸಿ : 4 ಫ್ಲೈ ಓವರ್ ಗಳಲ್ಲಿ ಇಂದಿನಿಂದ ಈ ವಾಹನಗಳ ಸಂಚಾರ ಸಂಪೂರ್ಣ ನಿಷೇಧ.!ಬೆಂಗಳೂರಿನಲ್ಲಿ 'ಏರೋ ಇಂಡಿಯಾ 2027' ದಿನಾಂಕ ಪ್ರಕಟ: ಫೆಬ್ರವರಿ 8 ರಿಂದ 12 ರವರೆಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ!