Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BIG NEWS : ನೌಕರರ ಗ್ರಾಚ್ಯುಟಿ ಹಣದಿಂದ ಬಾಕಿ ಮೊತ್ತ ಕಡಿತಗೊಳಿಸುವಂತಿಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಉದ್ಯೋಗಿಗೆ ಸಿಗಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ ಅಥವಾ ಬಡ್ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡುವ ಮೂಲಕ ಸಾರಿಗೆ ನಿಗಮದ ಮನವಿಯನ್ನು ವಜಾಗೊಳಿಸಿದೆ.

1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6)ರ ಮಾನದಂಡಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ, ಸಂಸ್ಥೆಗೆ ನೌಕರನಿಂದ ನೇರವಾಗಿ ತೀವ್ರ ಆರ್ಥಿಕ ನಷ್ಟ ಸಂಭವಿಸಿದ್ದರೆ ಅಥವಾ ಆತ ಸಮಾಜಘಾತುಕ ಕೃತ್ಯಗಳ ಹಿನ್ನೆಲೆಯಲ್ಲಿ ವಜಾಗೊಂಡಿದ್ದರೆ ಮಾತ್ರ ನಿಯಮಾನುಸಾರ ಗ್ರಾಚ್ಯುಟಿ ಹಣ ತಡೆಹಿಡಿಯಲು ಅವಕಾಶವಿದೆ. ಉಳಿದಂತೆ ಸಂಸ್ಥೆಗೆ ನೌಕರನಿಂದ ಬರಬೇಕಾದ ಯಾವುದೇ ಬಾಕಿ ಹಣವಿದ್ದರೂ ಅದನ್ನು ಕಾನೂನುಬದ್ಧವಾದ ಇತರ ಮಾರ್ಗಗಳಿಂದ ಇಲ್ಲವೇ ಆತನಿಗೆ ಬರಬೇಕಾದ ಇತರ ಸೌಲಭ್ಯಗಳಿಂದ ವಸೂಲಿ ಮಾಡಬಹುದೇ ವಿನಾ, ಗ್ರಾಚ್ಯುಟಿ ಹಣದಲ್ಲಿ ಕಡಿತಗೊಳಿಸಲು ಕಾನೂನಿನಲ್ಲಿ ಜಾಗವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಈ ಹಿಂದೆ ಗ್ರಾಚ್ಯುಟಿ ನಿಯಂತ್ರಣ ಪ್ರಾಧಿಕಾರವು ಶೇಕಡಾ 10ರಷ್ಟು ಬಡ್ಡಿಯೊಂದಿಗೆ ಮೊತ್ತವನ್ನು ಮರುಪಾವತಿಸುವಂತೆ ಕೆಎಸ್‌ಆರ್‌ಟಿಸಿಗೆ ನಿರ್ದೇಶನ ನೀಡಿತ್ತು. ಇದನ್ನು ವಿರೋಧಿಸಿ ಸಂಸ್ಥೆ ಹೈಕೋರ್ಟ್‌ ಮೆಟ್ಟಿಲೇರಿತ್ತಾದರೂ, ನ್ಯಾಯಪೀಠವು ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದು ಅರ್ಜಿಯನ್ನು ತಳ್ಳಿಹಾಕಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು ನಗರಪಾಲಿಕೆ ಮಟ್ಟದಲ್ಲಿ ಪೊಲೀಸ್–ಪಾಲಿಕೆ ಜಂಟಿ ಟಾಸ್ಕ್‌ಫೋರ್ಸ್ ರಚನೆ: ಸಚಿವ ಕೃಷ್ಣ ಬೈರೇಗೌಡಕೆ.ಆರ್.ಐ.ಡಿ.ಎಲ್. ಆರೋಪ- ವರದಿ ಬಳಿಕ ಕ್ರಮ: ಸಚಿವ ಈಶ್ವರ ಖಂಡ್ರೆಬಸವರಾಜ ಕನ್ನಾಳೆ ಭಾಲ್ಕಿಯ ಬಿಜೆಪಿ ಕಾರ್ಯಕರ್ತ: ಸಚಿವ ಈಶ್ವರ ಖಂಡ್ರೆಸಾಗರ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಶಾಸಕರ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ವಾಗ್ದಾಳಿUPI ಪಾವತಿ ವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ಕಳುಹಿಸಿದ್ದೀರಾ? ವಾಪಸ್ ಪಡೆಯಲು ಹೀಗೆ ಮಾಡಿ!ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾಳೆ ಮಧ್ಯಾಹ್ನ ‘ಶಿಕ್ಷಕರ ದಿನಾಚರಣೆ’ ಆಚರಿಸಲು ಸರ್ಕಾರ ಆದೇಶBIG NEWS : ನೌಕರರ ಗ್ರಾಚ್ಯುಟಿ ಹಣದಿಂದ ಬಾಕಿ ಮೊತ್ತ ಕಡಿತಗೊಳಿಸುವಂತಿಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶಗಮನಿಸಿ : ಪ್ರತಿಯೊಬ್ಬ ಭಾರತೀಯನ ಮೊಬೈಲ್’ನಲ್ಲೂ ಇರಬೇಕಾದ 5 ಸರ್ಕಾರಿ ಆ್ಯಪ್‌ಗಳಿವು.!ಬೆಂಗಳೂರಿಗರೇ ಗಮನಿಸಿ : 4 ಫ್ಲೈ ಓವರ್ ಗಳಲ್ಲಿ ಇಂದಿನಿಂದ ಈ ವಾಹನಗಳ ಸಂಚಾರ ಸಂಪೂರ್ಣ ನಿಷೇಧ.!ಬೆಂಗಳೂರಿನಲ್ಲಿ 'ಏರೋ ಇಂಡಿಯಾ 2027' ದಿನಾಂಕ ಪ್ರಕಟ: ಫೆಬ್ರವರಿ 8 ರಿಂದ 12 ರವರೆಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ!