ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವೆ ಸ್ಟಿಂಗ್ ಆಪರೇಷನ್ ಕುರಿತು ಸಮರ ನಡೆದಿದ್ದು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ ಹೆಣ್ಣು ಮಕ್ಕಳ ಮರ್ಯಾದೆ ತೆಗೆದ ಪುಣ್ಯಾತ್ಮ ಡಿಕೆ ಶಿವಕುಮಾರ್ ಮಾಜಿ ಸಿಎಂ ತರ ನಾವು ಸ್ಟೇ ತಗೊಂಡಿಲ್ಲ ಡಿಕೆ ಶಿವಕುಮಾರ್ ನೀರೇರದು ಬೆಳೆಸಿದ್ದ ಸ್ಟಿಂಗ್ ಆಪರೇಷನ್ ಇದೀಗ ಹೆಮ್ಮರವಾಗಿ ಬೆಳೆದಿದೆ. ಅದರ ಫಲವನ್ನು ಉಣ್ಣಲೇಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಗೆ ಫುಲ್ ಸ್ಟಾಪ್ ಹಾಕಬೇಕು ಅದಕ್ಕಾಗಿ ನಾನು ಸಿದ್ದರಾಮಯ್ಯಗೆ ಒತ್ತಾಯ ಮಾಡುತ್ತೇನೆ ನಿಮ್ಮ ಹಳೆಯ ದ್ವನಿಯತ್ತಿ ಸಿದ್ದರಾಮಯ್ಯ ಅವರೇ. ನಾನು ಸಿದ್ದರಾಮಯ್ಯ ಅವರ ಪರ ಅನುಕಂಪ ತೋರಿಸಿದಂತೆ ನಮ್ಮ ಕುಟುಂಬ ನೋವು ಅನುಭವಿಸಿದೆ ಅದಕ್ಕೆ ನಿಮ್ಮ ಪರ ನಿಂತೆ ನಾವು ನೀವು ಬೈದಾಡಿದ್ದೇವೆ ಅನುಕಂಪಕಾಗಿ ನಾನು ಹೇಳುತ್ತಿಲ್ಲ ನಿಮಗೆ ಅಹಿಂದ ದ್ವನಿ ಇದೆ ಅಹಿಂದ ಸಮಾಜಕ್ಕೂ ಹೇಳುತ್ತೇನೆ ಇಂತಹ ಕೆಲಸಗಳನ್ನು ನಿಲ್ಲಿಸಲಿಲ್ಲ ಅಂದರೆ ಏನು ಆಗುತ್ತೆ ನೋಡಿ 8 ವರ್ಷ ಆಳಿದ್ದೀರಿ ಹೋರಾಟ ಮಾಡುವ ಶಕ್ತಿ ಇಲ್ವಾ? ಹೆದರ ಬೇಕಿಲ್ಲ ಯಾಕೆ ಸ್ಟೇ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಇದಕ್ಕೆಲ್ಲ ಇತಿಶ್ರೀ ಹಾಡಲು CBI ತನಿಖೆಗೆ ಕೊಡಿ ಡಿ.ಕೆ ಶಿವಕುಮಾರ್ ಅವರೇ ಎಂದು ಎಚ್ ಡಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ಗೆ ಆಗ್ರಹಿಸಿದರು. ಸ್ಟಿಂಗ್ ಆಪರೇಷನ್ ಕೇಸ್ ತನಿಖೆ ಸಿಬಿಐಗೆ ನೀಡಬೇಕು ಇದರ ಹಿಂದೆ ಯಾರು ಇದ್ದಾರೆ ಎಂದು ತನಿಖೆ ಆಗಬೇಕು ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕು ಈ ವಿಚಾರವಾಗಿ ಕೇಂದ್ರ ಗೃಹ ಸಚಿವರ ಭೇಟಿ ಮಾಡುತ್ತೇನೆ ಸ್ಟಿಂಗ್ ಆಪರೇಷನ್ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಸ್ಟೇ ಪಡೆದಿದ್ದಾರೆ ಡಿಕೆ ಶಿವಕುಮಾರ್ ಅವರೇ ಸ್ಟಿಂಗ್ ಆಪರೇಷನ್ ಗೆ ನೀರು ಹಾಕಿ ಬೆಳೆಸಿದರು ಈಗ ಅದು ಹೆಮ್ಮರವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ಪ್ರಜ್ವಲ ರೇವಣ್ಣ ನಮ್ಮ ಕುಟುಂಬದ ಒಬ್ಬ ಸದಸ್ಯ ಚುನಾವಣೆಗೆ ಎರಡು ದಿನ ಇದ್ದಾಗ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಮಾಡಲಾಯಿತು. ಆ ಮಹಿಳೆಯನ್ನು ಕರೆಸಿ ಇಲ್ಲಿ ಕಂಪ್ಲೇಂಟ್ ಕೊಡಿಸಿದರು ರಾಹುಲ್ ಗಾಂಧಿ ಈ ಬಗ್ಗೆ ದೇಶಾದ್ಯಂತ ಪ್ರಸ್ತಾಪ ಮಾಡಿದರು ಎಚ್ ಡಿ ದೇವೇಗೌಡರ ಮರ್ಯಾದೆ ಕಳೆಯುವುದಕ್ಕೆ ಹೋದರು ದೇವರಾಜೇಗೌಡ ಮತ್ತು ಇನ್ನೊಬ್ಬ ಮಾತಾಡುವ ಆಡಿಯೋ ಬಂತು ಡಿಕೆ ಶಿವಕುಮಾರ್ ಮಾತನಾಡಿ ಅಂತ ದೇವರಾಜ ಗೌಡಗೆ ಫೋನ್ ಕೊಡುತ್ತಾರೆ ಆಗ ಡಿಕೆ ಶಿವಕುಮಾರ್ ಈ ಹೆಣ್ಣುಮಗಳನ್ನು ಹುಡುಕಲು ಸುಸ್ತಾಗಿದ್ದೀನಿ ಅಂತಾರೆ. ವಿಡಿಯೋ ಹಾಕಿ ಹೆಣ್ಣು ಮಕ್ಕಳ ಕುಟುಂಬದ ಮರ್ಯಾದೆ ಕಳೆದರು ಈಗ ಮಾಜಿ ಸಿಎಂ ಸಿದ್ದರಾಮಯ್ಯ ಕೋರ್ಟ್ ನಿಂದ ಸ್ಟೇ ತೆಗೆದುಕೊಂಡಿದ್ದಾರೆ ಅಂತಿಮವಾಗಿ ನ್ಯಾಯ ದೊರಕಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು
ಪ್ರಜ್ವಲ್ ವಿಚಾರದಲ್ಲಿ 400 ವಿಡಿಯೋ ಇದೆ ಅಂತ ರಾಹುಲ್ ಗಾಂಧಿ ಹೇಳಿದರು ಅದಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶ್ರಮ ಎಷ್ಟು ಇದೆ ಪೆನ್ ಡ್ರೈವ್ ಮಾಡಿ ಹಂಚಿದ್ರಲ್ಲ ಅವರ ಬಗ್ಗೆ ಕ್ರಮ ಕೈಗೊಂಡರ ಈಗಿನ ಹಾಸನದ ಎಂಪಿ ಸದಾಶಿವನಾಗರದ ಯಾರ ಮನೆಯಲ್ಲಿ ಪೆನ್ಡ್ರೈವ್ ತಯಾರು ಮಾಡಿದಿರಿ? ಈ ಬಗ್ಗೆ ಕ್ರಮ ಕೈಗೊಂಡರ? ಈಗ ನಡೆದಿರುವ ಹೆಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆ ಯಾಕೆ ಮಾಡಿಸಲಿಲ್ಲ? ನಮ್ಮಿಂದ ಆರಂಭವಾಗಿದೆ ನಿಮ್ಮ ಕೈಯಲ್ಲಿ ಅಂತ್ಯವಾಡಿ.
ಬಿಡದಿ ಟೌನ್ ಶಿಪ್ ವಿರುದ್ಧ ವಿರುದ್ಧ ಹೋರಾಟ ಆರಂಭವಾದ ಕೂಡಲೇ ಪ್ರಜ್ವಲ್ ರೇವಣ್ಣ ಜೈಲಿನ ವಿಡಿಯೋ ಹೊರಗೆ ಬಂತು ಈಗ ಸ್ಟಿಂಗ್ ಆಪರೇಷನ್ ಆರಂಭವಾದ ಕೂಡಲೇ ಪ್ರಜ್ವಲ್ ರೇವಣ್ಣಗೆ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲು ಯತ್ನಿಸಿದರು. ಶಿರಾವರೆಗೆ ಹೋಗಿ ಮತ್ತೆ ವಾಪಸ್ ಬೆಂಗಳೂರಿಗೆ ಕರೆತಂದರು ವಾಪಸ್ ಕರೆ ತರುವಂತೆ ಅವರಿಗೆ ಯಾರು ಹೇಳಿದ್ದು ಯಾರು? ನೀವು ನಮ್ಮ ತಾಯಿಯನ್ನು ಬಿಡಲಿಲ್ಲ ಸರಣಿ ಎಪಿಸೋಡ್ ಮಾಡಿದ್ರು ಎಂದು ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.