ಬೆಂಗಳೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ಗಲಾಟೆ ಇದೀಗ ಬೀದಿಗೆ ಬಂದಿದ್ದು, ಈತ ನನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ಮ್ಯಾನೇಜರ್ ಧನ್ವಿರ್ ವಿರುದ್ಧ ದೂರು ಕೊಟ್ಟಿದ್ದಾರೆ. ಅತ್ತ ಧನವೀರ್ ತಂದೆ ವಿಜಯಲಕ್ಷ್ಮಿ ವಿರುದ್ಧ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದಾರೆ.
ಇದೆಲ್ಲದರ ಮಧ್ಯೆ ದರ್ಶನ್ ತಮ್ಮ ದಿನಕರ್ ವಿರುದ್ಧವು ಧನ್ವೀರ್ ನಿಂದನೆ ಮಾಡಿದ್ದಾರೆ ಎನ್ನಲಾಗುತ್ತಿದೆ ನಾನು ಮಾಡುತ್ತಿರುವುದು ದರ್ಶನ್ ಫ್ಯಾಮಿಲಿ ಚೆನ್ನಾಗಿರಲಿ ಅಂತ ಆದರೆ ಆ ಸೂ* ಮಗ ಅವನ ತಮ್ಮ ಅನಿಸಿಕೊಂಡವನು ಬರ್ತಾನೆ, ಅವನಿಗೆ ಹುಟ್ಟಿದಿನ ಇವನಿಗೆ ಹುಟ್ಟಿದಿನ ಅಂತಾನೆ ದಿನಕರ ಬಗ್ಗೆಯೂ ಧನ್ವೀರ್ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎನ್ನಲಾಗುತ್ತಿದೆ. ಇದೆ ವೇಳೆ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ವಿರುದ್ಧ ಕೂಡ ವಾಗ್ದಾಳಿ ನಡೆಸಿರುವ ದನ್ವೀರ್ ಜೈದ್ ಖಾನ್ ಎಲ್ಲ ನಮ್ಮ * ಸಮ ಸರ್. ಶೋ ಆಫ್ ಮಾಡುವ ಬುದ್ದಿ ನನಗಿಲ್ಲ. ಆತ ನನ್ನ ಕಾಲಿನ ಧೂಳಿಗೂ ಸಮ ಇಲ್ಲ ಎಂದು ಅನಾಮಿಕ ವ್ಯಕ್ತಿ ಜೊತೆ ಮಾತನಾಡಿರುವ ಧನ್ವೀರ್ ಆಡಿಯೋ ಇದೀಗ ವೈರಲ್ ಆಗಿದೆ.