ಚಿಕ್ಕಮಗಳೂರು : ಚಿಕ್ಕಮಗಳೂರುಲ್ಲಿ ಪಟಾಕಿ ಸಿಡಿದು ಮೂವರಿಗೆ ಗಾಯಗಳಾಗಿರುವ ಘಟನೆ ಇದೀಗ ವರದಿಯಾಗಿದೆ ಗೌರಮ್ಮನ ಮೆರವಣಿಗೆ ವೇಳೆ ಪಟಾಕಿ ಸಿಡಿದು ಗಂಭೀರವಾದ ಗಾಯಗಳಾಗಿದ್ದು ಚಿಕ್ಕಮಗಳೂರು ತಾಲೂಕಿನ ಲಕ್ಯ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮೆರವಣಿಗೆ ವೇಳೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿದಾಗ ಯುವಕ ಈ ವೇಳೆ ಪಟಾಕಿ ಸಿಡಿದು ಗಂಭೀರವಾದಂತಹ ಗಾಯಗಳಾಗಿದೆ.
ಮಂಜುನಾಥ್ ಎಂಬುವರ ಕಣ್ಣು ಮತ್ತು ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು ಪಟಾಕಿ ಸಿಡಿದ ಪರಿಣಾಮ ಕಣ್ಣಿನ ಭಾಗ ಸಂಪೂರ್ಣವಾಗಿ ಹಾನಿಯಾಗಿದೆ ರತ್ನ ಹಾಗೂ ಭಾಗ್ಯ ಅವರಿಗೂ ಕೂಡ ಗಾಯಗಳಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿ ವರ್ಷ ಗಣೇಶ ವಿಸರ್ಜನೆ ಬಳಿಕ ಗೌರಮ್ಮನ ಮೆರವಣಿಗೆ ನಡೆಯುತ್ತದೆ ಮುಂಜಾನೆಯವರಿಗೂ ಗೌರಮ್ಮನ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಸಾವಿರಾರು ಜನ ಸೇರಿರುತ್ತಾರೆ ಈ ವೇಳೆ ಪಟಾಕಿ ಅವಘಡ ಸಂಭವಿಸಿ ಮೂವರಿಗೆ ಗಾಯಗಳಾಗಿದೆ.