LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು: ಅಚ್ಚರಿ ಹೇಳಿಕೆ ನೀಡಿದ ಶಾಸಕ ಕೆ.ಎನ್.ರಾಜಣ್ಣ

ಬೆಂಗಳೂರು: ಈ ಹಿಂದೆ ಶಾಸಕ ಕೆ.ಎನ್. ರಾಜಣ್ಣ ಅವರು ‘ಸೆಪ್ಟೆಂಬರ್ ಕ್ರಾಂತಿ’ ಹೇಳಿಕೆ ನೀಡಿದ್ದರು. ತಮ್ಮ ಈ ಹೇಳಿಕೆ ವಿಳಂಬಕ್ಕೆ ಸ್ಪಷ್ಟನೆ ನೀಋವ ಅವರು ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ರಾಜಕಾರಣದಲ್ಲಿ ಇಂತಹ ಬದಲಾವಣೆಗಳು ಸಹಜ ಪ್ರಕ್ರಿಯೆ.ತಾವು ಮೊದಲು ಪ್ರಸ್ತಾಪಿಸಿದ ”ಸೆಪ್ಟೆಂಬರ್ ಕ್ರಾಂತಿ’ ವಿಳಂಬವಾಗಿದ್ದು, ಇದು ರಾಜಕೀಯದಲ್ಲಿ ಸಾಮಾನ್ಯ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಡಾ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡಲಿ ಎಂಬುದು ನನ್ನ ಅಭಿಪ್ರಾಯ. ದಲಿತ ಸಿಎಂ ಹೇಳಿಕೆ ಹಾಗೂ ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ತಮ್ಮ ಹಿಂದಿನ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ರಾಜಣ್ಣ ಹೇಳಿದ್ದಾರೆ.

ಪರಮೇಶ್ವರ್ ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಅವರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಂತ್ರಿಗಳು ಹೈಕಮಾಂಡ್ ಭೇಟಿ ಮಾಡಲು ಹೋಗಿರುವುದು ಸ್ಥಾನ ಕಳೆದುಕೊಳ್ಳುವ ಭೀತಿಯಿಂದಲ್ಲ, ಬದಲಿಗೆ ಪಕ್ಷದ ಕೆಲಸಕ್ಕಾಗಿ ತಮ್ಮನ್ನು ನಿಯೋಜಿಸುವಂತೆ ಬೇಡಿಕೆ ಇಡಲು ಎಂದು ಇದೇ ವೇಳೆ ರಾಜಣ್ಣ ವಿವರಿಸಿದ್ದಾರೆ.

ಇನ್ನು ಬದಲಾವಣೆಗಳು ಕೇವಲ ಕಾಂಗ್ರೆಸ್‌ಗೆ ಸೀಮಿತವಲ್ಲ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಗೊಂದಲಗಳಿವೆ ಮತ್ತು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಟೊಯೋಟಾ ಕಿರ್ಲೋಸ್ಕರ್ ನಿಂದ 1,200 ಕೋಟಿ ರೂಪಾಯಿ ಹೂಡಿಕೆ: ಮಹತ್ವದ ಒಪ್ಪಂದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಸಹಿಅರಣ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ: ರಾಜ್ಯದ 5 ಹಿರಿಯ ಐಎಫ್‌ಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆಭಟ್ಕಳ ಮುರಿನಕಟ್ಟೆ ವಿವಾದ: ಪೊಲೀಸರಿಂದ 4 ಕೇಸ್ ದಾಖಲು, 6 ಜನ ಅರೆಸ್ಟ್ಮೇ 28 ರಂದು ಮದ್ಯ ಮಾರಾಟ ನಿಷೇಧಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವುಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ: ಕೆರೆ ಬಳಿ ಶವ ಎಸೆದು ಪರಾರಿSHOCKING: ಹುಚ್ಚು ನಾಯಿ ಕಡಿದು ಗಾಯಗೊಂಡಿದ್ದ ಯುವಕ ಸಾವುಸೊಸೆ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ: ಮಾವನಿಗೆ ಜಾಮೀನುಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಒನ್‌-ಟೈಮ್‌ ಬಯೋಮೆಟ್ರಿಕ್‌ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ₹2,000 ಹಣ ಕಟ್‌BREAKING: ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ಗೋಡೆ ಕುಸಿತ ದುರಂತ: ಬಾಲಕ ಸಾವು, ಇಬ್ಬರು ಕಾರ್ಮಿಕರಿಗೆ ಗಾಯ