ಹಾಸನ : ದೇಶಾದ್ಯಂತ SIR ಪ್ರಕ್ರಿಯೆಯಲ್ಲಿ ಅಕ್ರಮ ನಡೆಯಲಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದ್ದು ಅಲ್ಲದೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಅಗ್ರಹಿಸಿ ವಿಪಕ್ಷಗಳು, ಸಿಜೆಪಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದರ ಮಧ್ಯ ಮತದಾರರ ಗುರುತಿನ ಚೀಟಿಗಳನ್ನು ಅಪರಿಚಿತರು ಸುಟ್ಟು ಹಾಕಿರುವ ಘಟನೆ ಹಾಸನದ ಸಕಲೇಶಪುರದ ಶ್ರೀಗಂಧ ಹೋಟೆಲ್ ಬಳಿ ಈ ಒಂದು ಘಟನೆ ನಡೆದಿದೆ.
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಹಾಸನ ಸೇರಿದಂತೆ ಇತರೆ ಜಿಲ್ಲೆಗಳಿಗೆ ಸೇರಿದ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾರೆ, ಹೊರ ರಾಜ್ಯದವರ ದಾಖಲೆಗಳಿಗೆ ಅಪರಿಚಿತರು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಹಾಸನ, ರಾಮನಗರ, ಕೊಟ್ಟೂರು, ಬಳ್ಳಾರಿ, bವಿಜಯಪುರ, ಮೈಸೂರು ಹಾಗೂ ಆಂಧ್ರಪ್ರದೇಶ ಮೂಲದ ವಿಳಾಸ ಇರುವ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ. ನೂರಾರು ವೋಟರ್ ಐಡಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇತರೆ ದಾಖಲೆಗಳಿಗೆ ಬೆಂಕಿ ಇಟ್ಟು ಅಪರಿಚಿತರು ಸುಟ್ಟು ಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರ ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.