ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಭಾರಿ ವಿವಾದ ಸೃಷ್ಟಿಸಿದ್ದು ಇದೀಗ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸ್ಪೋಟಕವಾದ ಬಾಂಬ್ ಸಿಡಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಇನ್ನೂ ಹಲವು ವಿಡಿಯೋಗಳಿವೆ ಆದರೆ ಸಿದ್ದರಾಮಯ್ಯ ಅವರು ಭಯದಿಂದ ಬಾಯಿ ಬಿಡುತ್ತಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದಲ್ಲೇ ಖೆಡ್ಡಾ ತೋಡಲು ಹಲವರು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಲು ಈ ಒಂದು ಸ್ಟಿಂಗ್ ಆಪರೇಷನ್ ಪಿತೂರಿ ಮಾಡಿದ್ದಾರೆ. ಅವರ ಹಲವು ವಿಡಿಯೋಗಳು ಇದೆ ಆದರೆ ಸಿದ್ದರಾಮಯ್ಯ ಅವರು ಭಯದಿಂದ ಬಾಯಿ ಬಿಡುತ್ತಿಲ್ಲ ಅಷ್ಟೇ. ಹಾಗಾಗಿ ಅವರು ಕೋರ್ಟ್ ನಿಂದ ಸ್ಟೇ ತಂದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.