Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮದ್ಯ ಪ್ರಿಯರಿಗೆ ಬಿಗ್ ಶಾಕ್

 

ಬೆಂಗಳೂರು:
ಮದ್ಯದ ಬೆಲೆ ಏರಿಕೆ ಇಂದಿನಿಂದ (ಜುಲೈ 21) ಅನ್ವಯವಾಗುವಂತೆ ಜಾರಿಯಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಜುಲೈ 18ರಂದು ಪ್ರಕಟಿಸಿದೆ.

ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು 1968, ಕರ್ನಾಟಕ ಅಬಕಾರಿ ಅಧಿನಿಯಮ 1965, (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ 1ನೇ ಉಪ ಪ್ರಕರಣದಲ್ಲಿ ತಿದ್ದುಪಡಿ ಕರ್ನಾಟಕ ಸರ್ಕಾರ ಈ ಅಧಿಸೂಚನೆಯನ್ನು ಪ್ರಕಟಿಸಿದೆ.

ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ, ಇನ್ನು ಜಾರಿಗೆ ತರಬೇಕಾದ ವಿವಿಧ ಜನಪ್ರಿಯ ಯೋಜನೆಗಳ, ಗ್ಯಾರೆಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸುವ ಸಲುವಾಗಿ ಆದಾಯ ಹೆಚ್ಚಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್‌ ಸರ್ಕಾರದ್ದು. ಇದರ ಪರಿಣಾಮವಾಗಿ ನಿರೀಕ್ಷೆಯಂತೆಯೇ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ.

ಅಬಕಾರಿ ಸುಂಕ ಹೆಚ್ಚಳ ಬಹುತೇಕ ಕೂಡಲೇ ಜಾರಿಗೆ ಬರಲಿದೆ. ಬಜೆಟ್‌ ಪ್ರತಿಯಲ್ಲಿ ಕೊಟ್ಟಿರುವ ಪಟ್ಟಿಯ ಪ್ರಕಾರ, ಮದ್ಯದ ರಟ್ಟಿನ ಪೆಟ್ಟಿಗೆಯ ದರಗಳ ಅಬಕಾರಿ ಸುಂಕ ಹೆಚ್ಚಳದ ವಿವರ ಹೀಗಿದೆ.

ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ 450 ರೂಪಾಯಿ ತನಕ ಇದ್ದರೆ ಅದರ ಅಬಕಾರಿ ಸುಂಕ 215 ರೂಪಾಯಿ ಆಗಲಿದೆ.

ಇದೇ ರೀತಿ, 450ರಿಂದ 499 ರೂಪಾಯಿ ತನಕದ ಮೌಲ್ಯದ ಪೆಟ್ಟಿಗೆ ಮೇಲಿನ ಅಬಕಾರಿ ಸುಂಕ 294 ರೂಪಾಯಿ ಆಗಲಿದೆ. ಅದೇ ರೀತಿ 500 ರೂಪಾಯಿಯಿಂದ 549 ರೂಪಾಯಿ ತನಕದ ಪೆಟ್ಟಿಗೆಯ ಸುಂಕ 386 ರೂಪಾಯಿ ಆಗಲಿದೆ. ಈ ರೀತಿ, 18 ಸ್ತರದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದೆ. ಇದರಲ್ಲಿ ಬ್ರಾಂದಿ, ವಿಸ್ಕಿ, ಜಿನ್‌, ರಮ್‌ ಮತ್ತು ಅಂಥ ಇತರ ಮದ್ಯಗಳು ಮಾತ್ರ ಒಳಗೊಂಡಿವೆ. ಆದರೆ, ಬಿಯರ್‌, ವೈನ್‌, ಸೇಂದಿ ಮತ್ತು ಪೆನ್ನಿಗಳು ಈ ವ್ಯಾಪ್ತಿಗೆ ಬರುವುದಿಲ್ಲ.

ಕರ್ನಾಟದಲ್ಲಿ ಮದ್ಯದ ದರ ಹೆಚ್ಚಳ
ಮದ್ಯದ ದರ ಹೆಚ್ಚಳ ಎಷ್ಟು - ಏನು ವಿವರ ಇಲ್ಲಿದೆ

ಕ್ರಮ ಸಂಖ್ಯೆ ಮದ್ಯದ ಘೋಷಿತ ಬೆಲೆ (ರೂಪಾಯಿ) ಸುಂಕ ಹೆಚ್ಚಳ (ರೂಪಾಯಿ)
01 0-449 215
02 450-499 294
03 500-549 386
04 550-599 497
05 600-699 668
06 700-799 816
07 800-899 870
08 900-999 938
09 1000-1099 982
10 1100-1199 1102
11 1200-1299 1325
12 1300-1399 1541
13 1400-1799 1667
14 1800-2199 1860
15 2200-4924 2124
16 4925-7650 2483
17 7651-15000 3571
18 15001 ರಿಂದ ಮೇಲ್ಪಟ್ಟು 5358
ಬಿಯರ್‌ ದರ ಶೇಕಡ 185 ಏರಿಕೆ
ಬಿಯರ್‌ ದರವನ್ನೂ ಸರ್ಕಾರ ಇಂದಿನಿಂದ ಅನ್ವಯವಾಗುವಂತೆ ಹೆಚ್ಚಿಸಿದೆ. ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ ಅಬಕಾರಿ ಸುಂಕ ಶೇಕಡ 185 ಏರಿಕೆಯಾಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ, ಘೋಷಿತ ದರದ ಶೇಕಡ 185 ಅಬಕಾರಿ ಸುಂಕ ಇರಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ