Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಟಿಳಕವಾಡಿ ಪೊಲೀಸರಿಂದ ಬೈಕ್ ಕಳ್ಳನ ಬಂಧನ: 2 ಲಕ್ಷ ಮೌಲ್ಯದ 6 ಬೈಕ್ ವಶ

 

ಬೆಳಗಾವಿ :
ಟಿಳಕವಾಡಿ ಪೊಲೀಸ್ ಠಾಣೆ ಹಾಗೂ ನಗರ ವ್ಯಾಪ್ತಿಯಲ್ಲಿ ಮೋಟರ್ ವಾಹನ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಿಸಿರುವ ಖಚಿತ ಮಾಹಿತಿಯನ್ನಧರಿಸಿ ಅರುಣಕುಮಾರ ಕೋಳೂರ, ಎಸಿಪಿ ಖಡೇಬಜಾರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯ ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿಯವರ ತಂಡ ಕೊನೆಗೂ ಬೈಕ್ ಕಳ್ಳನನ್ನು ಬಂಧಿಸಿದೆ.

ಅಡಿವೇಶ ಲಕ್ಷ್ಮಣ ನಿಪ್ಪಾಣಿ (20) ಸಾ|| ಲಗಮೇಶ್ವರ, ತಾ| ಗೋಕಾಕ, ಹಾಲಿ ಭಾಗ್ಯ ನಗರ ಬೆಳಗಾವಿ ಈತನನ್ನು ಪತ್ತೆ ಮಾಡಿ ಆತ ಕಳ್ಳತನ ಮಾಡಿದ 06 ಬೈಕ್‌ಗಳು (05-ಸ್ಪ್ಲೆಂಡರ್ ಪ್ಲಸ್, 01-ಯಮಹಾ) ಒಟ್ಟು 2 ಲಕ್ಷ ಮೌಲ್ಯದ ವಾಹನವನ್ನು ಜಪ್ತಿ ಮಾಡಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

ಜಪ್ತ ಪಡಿಸಿಕೊಂಡ ಈ 6 ಮೋಟಾರ್ ಸೈಕಲ್‌ಗಳು ಉದ್ಯಮಬಾಗ ಠಾಣೆ-2, ಬೆಳಗಾವಿ ಗ್ರಾಮೀಣ ಠಾಣೆ-2 ಮತ್ತು ಟಿಳಕವಾಡಿ ಠಾಣೆಯ-2 ಪ್ರಕರಣಗಳಲ್ಲಿ ಕಳುವಾದ ಮೋಟಾರ್ ಸೈಕಲ್‌ಗಳ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

ಈ ಮೋಟರ ವಾಹನ ಕಳ್ಳತನ ಪ್ರಕರಣ ಪತ್ತೆ ಮಾಡಲು ಶ್ರಮಿಸಿದ ಪಿಐ ದಯಾನಂದ ಶೇಗುಣಸಿ, ಸಂತೋಷ ದಳವಾಯಿ ಪಿ.ಎಸ್.ಐ(ಕಾ&ಸು) ಹಾಗೂ ಸಿಬ್ಬಂದಿಯವರಾದ ಮಹೇಶ ಪಾಟೀಲ, ಲಾಡಜಿಸಾಬ ಮುಲ್ತಾನಿ, ನವೀನಕುಮಾರ ಗುಜ್ಜನ್ನವರ ಇವರ ತಂಡವನ್ನು ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು. (ಕಾ&ಸು ಉಪ ಪೊಲೀಸ್ ಆಯುಕ್ತರು, (ಅ&ಸಂ), ಬೆಳಗಾವಿ ನಗರ ಅವರು ಶ್ಲಾಘಿಸಿರುತ್ತಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ