Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Film

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ 2ನೇ ಪುತ್ರಿಗೆ ‘ದೇವಿ’ ಎಂದು ನಾಮಕರಣ!

ಮುಂಬೈ: ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ವಿಜಯದಶಮಿ (ದಸರಾ) ಹಬ್ಬದ ಶುಭ ದಿನದಂದು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಮುದ್ದಾದ ಕಂದಮ್ಮನಿಗೆ ‘ದೇವಿ ಪಡುಕೋಣೆ ಸಿಂಗ್’ (Devi Padukone Singh) ಎಂದು ನಾಮಕರಣ ಮಾಡಿರುವ ಜೋಡಿ, ಇಡೀ ಕುಟುಂಬ ಒಟ್ಟಾಗಿರುವ ಸುಂದರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಮನಸೂರೆಗೊಂಡ ಮುದ್ದಾದ ಕೌಟುಂಬಿಕ ಚಿತ್ರ

ಹಂಚಿಕೊಂಡಿರುವ ಭಾವಚಿತ್ರದಲ್ಲಿ ರಣವೀರ್ ಸಿಂಗ್ ತಮ್ಮ ಹಿರಿಯ ಪುತ್ರಿ ದುವಾ (Dua) ಳನ್ನು ಎತ್ತಿಕೊಂಡಿದ್ದು, ಆಕೆ ಪ್ರೀತಿಯಿಂದ ತನ್ನ ಪುಟ್ಟ ತಂಗಿ ದೇವಿಗೆ ಮುತ್ತಿಡುತ್ತಿರುವ ಅಪರೂಪದ ಕ್ಷಣ ಸೆರೆಯಾಗಿದೆ. ಪಕ್ಕದಲ್ಲೇ ತಾಯಿ ದೀಪಿಕಾ ಪಡುಕೋಣೆ ಮಂದಹಾಸ ಬೀರುತ್ತಾ ನಿಂತಿದ್ದಾರೆ. ಈ ಮುದ್ದಾದ ಕ್ಷಣದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದೀಪಿಕಾ, "ಪ್ರೀತಿ ಮತ್ತು ಸಮೃದ್ಧಿಯ ಸಂಕೇತ, ದೇವಿ ಪಡುಕೋಣೆ ಸಿಂಗ್" (Of Love & Abundance Devi Padukone Singh) ಎಂದು ಭಾವನಾತ್ಮಕ ಕ್ಯಾಪ್ಷನ್ ಬರೆದಿದ್ದಾರೆ.

ಸೆಪ್ಟೆಂಬರ್‌ನಲ್ಲೇ ಜನಿಸಿದ್ದ ಪುಟ್ಟ ಕಂದಮ್ಮ

ಈ ತಾರಾ ಜೋಡಿ ಸೆಪ್ಟೆಂಬರ್ 19 ರಂದೇ ಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡಿತ್ತು. ಶನಿವಾರದಂದು ದಸರಾ ಹಬ್ಬದ ದಿನದಂದೇ ಈ ಸಿಹಿ ಸುದ್ದಿಯೊಂದಿಗೆ ಮಗುವಿನ ಹೆಸರನ್ನೂ ಜಗತ್ತಿಗೆ ಪರಿಚಯಿಸಿದ್ದಾರೆ. ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ ದೀಪಿಕಾ ಪಡುಕೋಣೆ ಎರಡನೇ ಬಾರಿಗೆ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಮಗು ಜನಿಸಿದಾಗ ‘ವೆಲ್‌ಕಮ್ ಬೇಬಿ ಗರ್ಲ್’ ಎಂದು ಸರಳವಾಗಿ ಬರೆದು ದೃಷ್ಟಿ ತಾಗದಿರಲಿ ಎಂಬ ಇಮೋಜಿ (Evil Eye) ಹಂಚಿಕೊಂಡಿದ್ದರು.

ಈ ಹಿಂದೆ 2024ರ ಸೆಪ್ಟೆಂಬರ್ 8ರಂದು ಈ ದಂಪತಿಗೆ ಮೊದಲ ಹೆಣ್ಣು ಮಗು 'ದುವಾ' ಜನಿಸಿದ್ದಳು. ಸರಿಯಾಗಿ ಎರಡು ವರ್ಷಗಳ ಅಂತರದಲ್ಲಿ ಮತ್ತೊಬ್ಬ ಕಂದಮ್ಮನ ಆಗಮನವಾಗಿದ್ದು, ಇದೀಗ 'ದುವಾ' ಮತ್ತು 'ದೇವಿ' ಇಬ್ಬರೂ ಹೆಣ್ಣುಮಕ್ಕಳೊಂದಿಗೆ ದೀಪ್‌ವೀರ್ ಸಂಸಾರ ಸಂಪೂರ್ಣ ಕಳೆಗಟ್ಟಿದೆ.

ರೀಲ್ ಲೈಫ್‌ನಿಂದ ರಿಯಲ್ ಲೈಫ್‌ವರೆಗೆ ‘ದೀಪ್‌ವೀರ್’ ಪಯಣ

2013 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೋಂ ಕಿ ರಾಸಲೀಲಾ ರಾಮ್-ಲೀಲಾ’ ಸಿನಿಮಾದ ಸೆಟ್‌ನಲ್ಲಿ ಆರಂಭವಾದ ಇವರಿಬ್ಬರ ಪ್ರೇಮಕಥೆ, ಹಲವು ವರ್ಷಗಳ ಪ್ರೇಮಾಂಕುರದ ನಂತರ 2018ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇಟಲಿಯ ಲೇಕ್ ಕೋಮೋದಲ್ಲಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯಗಳೆರಡರ ಪ್ರಕಾರ ಅದ್ಧೂರಿಯಾಗಿ ವಿವಾಹವಾಗಿದ್ದ ಈ ಜೋಡಿ, ಇದೀಗ ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ಪೋಷಕರಾಗಿ ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ಗಣ್ಯರು ಹಾಗೂ ಅಭಿಮಾನಿಗಳು ಈ ತಾರಾ ಕುಟುಂಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!