LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬ್ರಹ್ಮ ಚಾರಿಣಿ ನವರಾತ್ರಿಯ ಎರಡನೇ ದಿನ

ದೇವಾದಿ ದೇವ ಮಹಾದೇವ ಪರಶಿವನನ್ನು ಪತಿಯಾಗಿ ಪಡೆಯಲು ತಪಸ್ಸನ್ನು ಆಚರಿಸಿದ ಬ್ರಹ್ಮಚಾರಿಣಿ ದೇವಿಯು ದುರ್ಗೆಯ ಎರಡನೇ ಅವತಾರವಾಗಿ ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಶ್ವೇತ ವಸ್ತ್ರಧಾರಿಣಿಯಾಗಿದ್ದು ಶುದ್ಧತೆ ಮತ್ತು ಶಾಂತಿಯನ್ನು ಪ್ರತಿಪಾದಿಸುತ್ತಾಳೆ. ಈಕೆಯು ತನ್ನ ಎಡಗೈಯಲ್ಲಿ ಕಮಂಡಲನ್ನು ಹಿಡಿದಿದ್ದು ಬಲಗೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ಶಿವ ಯೋಗದ ಸಮಯದಲ್ಲಿ ಶಿವ ಮತ್ತು ಶಕ್ತಿ ರೂಪಿಣಿಯಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ

ಎಲ್ಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ, ಸುಖ ಸಮೃದ್ಧಿ ಸಮಾಧಾನಗಳು ಹೆಚ್ಚುತ್ತವೆ.
ಸಿದ್ದಿ ಸಾಧನೆಗೆ ಮೂರ್ತ ರೂಪವೇ ಬ್ರಹ್ಮಚಾರಿಣಿ ದೇವಿ. ತನ್ನ ಹಿಂದಿನ ಜನ್ಮದಲ್ಲಿ ಸತಿ ದೇವಿಯಾಗಿ ಹುಟ್ಟಿದ ಆಕೆ ತನಗೆ ಮತ್ತು ತನ್ನ ಪತಿಗಾದ ಅವಮಾನದಿಂದ ತಂದೆಯು ಮಾಡುತ್ತಿದ್ದ ಯಜ್ಞದ ಕುಂಡಕ್ಕೆ ಹಾರಿ ಪ್ರಾಣಬಿಟ್ಟಳು... ಆಕೆಯೇ ಮರುಜನ್ಮದಲ್ಲಿ ಹಿಮವಂತನ ಮಗಳಾಗಿ ಮರುಜನ್ಮವೆತ್ತಿದಳು. ವಿಧಿ ಲಿಖಿತದಂತೆ ಶಿವನನ್ನು ವಿವಾಹವಾಗಲು ಸತತ ಶ್ರದ್ಧೆ ಮತ್ತು ಸಾಧನೆಯಿಂದ ಒಡಗೂಡಿದ ಆಕೆಯ ಭಕ್ತ ಭಾವದ ವ್ಯಕ್ತ ರೂಪಕ್ಕೆ ಸಾಕ್ಷಾತ್ ಪರಶಿವನೇ ಸೋತು ಆಕೆಯನ್ನು ಮದುವೆಯಾದನು.
ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯ ವಿಧಿಗಳನ್ನು ಪೂರೈಸಿ ಪೂಜೆಗೆ ಎಲ್ಲ ಪ್ರೀತಿಯ ತಯಾರಿಗಳನ್ನು ಮಾಡಿಕೊಂಡು ಶ್ವೇತವರ್ಣದ ಬಟ್ಟೆಗಳನ್ನು ಧರಿಸಿ
ದಧಾನ ಕರದ್ಮಾಭಾಮಕ್ಷ ಮಾಲಾ ಕಮಂಡಲ
ದೇವಿ ಪ್ರಸೀದತುಮಯೀ ಬ್ರಹ್ಮಚಾರಿಣ್ಯನುತ್ತಮಾ

ಸ್ವಾದಿಷ್ಟಾನ ಚಕ್ರದ ಮೇಲೆ ಹಿಡಿತವನ್ನು ಸಾಧಿಸಲು ಮೊಸರನ್ನವನ್ನು ಬಹುವಾಗಿ ಇಷ್ಟಪಡುವ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು. ಬ್ರಹ್ಮಚಾರ್ಯ ಶಕ್ತಿಯನ್ನು ಕಾಪಾಡುವ, ಸೃಷ್ಟಿಯ ಅಧಿದೇವತೆ ಪಾರ್ವತಿ ದೇವಿಯ ಅವತಾರವಾಗಿರುವವಳೇ ಬ್ರಹ್ಮಚಾರಿಣಿ. ಕೇವಲ ಒಂದು ಎಲೆಯನ್ನು ಸೇವಿಸಿ ನೂರಾರು ವರ್ಷ ತಪಸ್ಸನ್ನು ಆಚರಿಸಿದ ಆಕೆ ಅಪರ್ಣೇ ಎನಿಸಿದಳು. ಕಂದ ಮೂಲಗಳನ್ನು ಸೇವಿಸಿ ಕೂಡ ಆಕೆ ಕಠಿಣ ತಪಸ್ಸನ್ನು ಆಚರಿಸಿ ಶಿವನನ್ನು ಪತಿಯಾಗಿ ಪಡೆದು ಉಮಾ ಎನಿಸಿಕೊಂಡಳು

ಓಂ ಹ್ರೀಂ ಬ್ರಹ್ಮಚಾರಿಣಿ ದುರ್ಗಾಯೇ ನಮಃ ಎಂದು ಜಪಿಸಬೇಕು.

ಭಕ್ತಿ ಮತ್ತು ವೈರಾಗ್ಯಗಳನ್ನು ಹೊಂದಬಯಸುವವರು ಶಕ್ತಿ ರೂಪೀಣಿಯಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು
ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತ ನಮಸ್ತಸ್ಯೆ ನಮಸ್ತಸ್ಯೆ ನಮಸ್ತ್ಯಸ್ಯೆ ನಮೋನಮಃ
ಎಂದು ಜಪಿಸಬೇಕು.



ವೀಣಾ ಹೇಮಂತಗೌಡ ಪಾಟೀಲ ಮುಂಡರಗಿ ಗದಗ್
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು