ಕೊಡಗು : ಜಿಲ್ಲೆಯ ಮಡಿಕೇರಿಯಲ್ಲಿರುವ ಐಷಾರಾಮಿ ಕೂರ್ಗ್ ವೈಲ್ಡರ್ ನೆಸ್ ರೆಸಾರ್ಟ್ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಿವಂಗತ ಮಾಜಿ ಸಚಿವ ಟಿ.ಜಾನ್ ಅವರ ಪುತ್ರರ ಒಡೆತನದಲ್ಲಿರುವ ಈ ರೆಸಾರ್ಟ್ನಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಬುಧವಾರ ಮಧ್ಯಾಹ್ನವೇ ಆರಂಭವಾಗಿರುವ ಈ ಐಟಿ ದಾಳಿಯ ಬಿಸಿ ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲದೆ, ಕೇರಳದ ಕೊಚ್ಚಿಯಲ್ಲಿರುವ ಟಿ.ಜಾನ್ ಒಡೆತನದ ಇತರ ಉದ್ಯಮಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ತೆರಿಗೆ ವಂಚನೆ ಅಥವಾ ಆರ್ಥಿಕ ಅಪರಾಧಗಳ ಶಂಕೆ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಶಂಕಿಸಲಾಗಿದೆ.