ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಗೆ ಇಂದು ಬಹು ಮಹತ್ವದ ದಿನವಾಗಿದೆ. ಏಕೆಂದರೆ ಇಂದು ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ ಕೋರ್ಟ್ನಲ್ಲಿ ಘಟನೆಯ ಕುರಿತು ಸ್ಫೋಟಕವಾದ ಮಾಹಿತಿಯನ್ನು ಬಿಚ್ಚಿಡಲಿದ್ದಾನೆ. ಕೆಲವೇ ಕ್ಷಣಗಳಲ್ಲಿ ಬಿಗಿ ಭದ್ರತೆಯೊಂದಿಗೆ ಪ್ರದೋಷ್ ನನ್ನ ಕೋರ್ಟಿಗೆ ಕರೆತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿನ 59ನೇ ಸಿಸಿಎಚ್ ಕೋರ್ಟ್ ಬಳಿ ಪೊಲೀಸರಿಂದ ಬಿಗಿ ಭದ್ರತೆ ನಿಯೋಜಿಸಲಾಗಿದ್ದು ಮಾಫಿಸಾಕ್ಷಿಗೆ ಸೂಕ್ತ ಭದ್ರತೆ ನೀಡಲು ಕೋರ್ಟ್ ಸೂಚನೆ ನೀಡಿದೆ. ಹಾಗಾಗಿ ಕೋರ್ಟ್ ಆವರಣದಲ್ಲಿ ಕೇಂದ್ರ ವಿಭಾಗ ಪೊಲೀಸರಿಂದ ಭದ್ರತೆ ನಿಯೋಜಿಸಲಾಗಿದೆ ಓರ್ವ ಎಸಿಪಿ, ಮೂವರು ಇನ್ಸ್ಪೆಕ್ಟರ್, 8 ಜನ ಪಿ ಎಸ್ ಐ, 40ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.