Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BREAKING : ದೆಹಲಿ ಸರಣಿ ಅತ್ಯಾಚಾರ : ನಿರ್ಭಯಾ ಪ್ರಕರಣಕ್ಕೆ ಹೋಲಿಕೆ ಮಾಡದಿರಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇವಲ ಎರಡು ವಾರಗಳ ಅಂತರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಸರಣಿ ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಈ ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ದೆಹಲಿ ಪೊಲೀಸ್ ಮತ್ತು ದೆಹಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಾಗರಿಕರಿಗೆ ಮೂಲಭೂತ ಭದ್ರತೆಯನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ವೈಫಲ್ಯ ಕಂಡಿದೆ ಎಂದು ನ್ಯಾಯಪೀಠವು ಕಟುವಾಗಿ ಎಚ್ಚರಿಸಿದೆ.

ಈ ಹೇಯ ಕೃತ್ಯಗಳು 2012ರ ಭೀಕರ 'ನಿರ್ಭಯಾ' ದುರಂತದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದು, ನೋವಿನ ಹೋಲಿಕೆ ಮಾಡದೆ ಇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ವ್ಯಕ್ತಪಡಿಸಿದೆ. ಭಯಮುಕ್ತವಾಗಿ ಹಾಗೂ ಘನತೆಯಿಂದ ಬದುಕುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕಾಗಿದೆ. ಆದರೆ, ಉದ್ಯಾನಗಳು, ರಸ್ತೆಗಳು ಮತ್ತು ಸಾರ್ವಜನಿಕ ಬಸ್‌ಗಳಲ್ಲಿ ಸೂಕ್ತ ಬೀದಿದೀಪಗಳಿಲ್ಲದಿರುವುದು, ಸಿಸಿಟಿವಿ ನಿಗಾ ಹಾಗೂ ಪೊಲೀಸ್ ಗಸ್ತು ಕೊರತೆಯಿಂದಾಗಿ ಈ ಸ್ಥಳಗಳು ಮಹಿಳೆಯರಿಗೆ ‘ಹೆಚ್ಚಿನ ಅಪಾಯದ ವಲಯ’ಗಳಾಗುತ್ತಿವೆ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.

ಕೇವಲ ಘಟನೆಗಳು ನಡೆದಾಗ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾಧ್ಯಮಗಳ ಮುಂದೆ ಸಾಂತ್ವನ ಹಾಗೂ ಒಗ್ಗಟ್ಟು ವ್ಯಕ್ತಪಡಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ಕಟ್ಟುನಿಟ್ಟಾದ ಹೊಣೆಗಾರಿಕೆ ಹಾಗೂ ತಕ್ಷಣದ ಸ್ಪಷ್ಟ ರಕ್ಷಣಾ ಕ್ರಮಗಳು ಜಾರಿಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಭೀಕರ ಕೃತ್ಯಗಳ ಪಟ್ಟಿ:

  • ಸ್ವರೂಪ್ ನಗರ (ಸೆ. 10): 17 ವರ್ಷದ ಬಾಲಕಿಯ ಮೇಲೆ ಆಕೆಯ ಸ್ನೇಹಿತ ಮತ್ತು ಇತರರು ಸಾಮೂಹಿಕ ಅತ್ಯಾಚಾರ ಎಸಗಿ, ಎಂಟು ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದರು.

  • ದೇಶಬಂಧು ಗುಪ್ತಾ ರಸ್ತೆ (ಸೆ. 14): 6 ವರ್ಷದ ಪುಟ್ಟ ಬಾಲಕಿಯ ಮೇಲೆ ಅಂಕಿತ್ ಎಂಬಾತನಿಂದ ದೌರ್ಜನ್ಯ ಮತ್ತು ಅತ್ಯಾಚಾರ.

  • ಸದರ್ ಬಜಾರ್ (ಸೆ. 17): 11 ವರ್ಷದ ಬಾಲಕಿಯ ಕೈಕಾಲುಗಳನ್ನು ಕಟ್ಟಿಹಾಕಿ, 56 ವರ್ಷದ ದರ್ಜಿ ಮಕ್ಸೂದ್ ಎಂಬಾತ ಅತ್ಯಾಚಾರ ಎಸಗಿದ್ದ.

  • ಕಲ್ಕಾಜಿ ಆಸ್ತಾ ಕುಂಜ್ ಪಾರ್ಕ್ (ಸೆ. 21): ದೇವಸ್ಥಾನಕ್ಕೆ ಬಂದಿದ್ದ 17 ವರ್ಷದ ಬಾಲಕಿಯನ್ನು ಪೊಲೀಸರ ಸೋಗಿನಲ್ಲಿ ಬಂದ ಮೂವರು ಕಾಮುಕರು ಬೆದರಿಸಿ, ಗೆಳೆಯನಿಂದ ಬೇರ್ಪಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರು ಪರಿಶೀಲಿಸಿ: ಸಿಎಂ ಡಿ ಕೆ ಶಿವಕುಮಾರ್ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣಪತಿ ಟಿ. ನಾಯ್ಕ ಟ್ರಸ್ಟ್‌ನಿಂದ ಮಹತ್ವದ ಕಾರ್ಯ: ಸಚಿವ ಮಧು ಬಂಗಾರಪ್ಪಸೆ.30ರಂದು ಶಿಕಾರಿಪುರದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪಸೊರಬ ಕ್ಷೇತ್ರದಲ್ಲಿ ₹2.30 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಭೂಮಿಪೂಜೆಈ ದಿನ ಗಣಪತಿಯನ್ನು ಹೀಗೆ ಆರಾಧಿಸಿ: ಇಷ್ಟಾರ್ಥ ಸಿದ್ಧಿ ಗ್ಯಾರಂಟಿಕರ್ನಾಟಕದಲ್ಲಿ LPG ತಪಾಸಣೆ: ಪ್ರತಿ 4 ಸಿಲಿಂಡರ್‌ಗಳಲ್ಲಿ ಒಂದರಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಗ್ಯಾಸ್ ಪತ್ತೆ!ಕೆಪಿವೈಸಿಸಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಅಧ್ಯಕ್ಷರಾಗಿ ಭರತ್ ಯಾದವ್ ಜೆ. ನೇಮಕ ನಕಲಿ ಔಷಧ ತಯಾರಿಕೆ ಕೇಸ್: ಅಕ್ಟೋಬರ್.7ರವರೆಗೆ ಕಿಂಗ್ ಪಿನ್ ಪ್ರಶಾಂತ್ ಎಸ್ಐಟಿ ಕಸ್ಟಡಿಗೆWatch Video: 'ಪೌರಕಾರ್ಮಿಕರ ಪಾದಪೂಜೆ' ಮಾಡಿ ಗೌರವ ಸಮರ್ಪಿಸಿದ 'KAS ಅಧಿಕಾರಿ': ವೀಡಿಯೋ ವೈರಲ್ಗರ್ಭಕೋಶ ಶಸ್ತ್ರಚಿಕಿತ್ಸೆ ಯಡವಟ್ಟು ಆರೋಪ: ನಾಳೆ ಸಾಗರದಲ್ಲಿ ತಜ್ಞ ವೈದ್ಯರ ತಂಡದಿಂದ ಡಾ.ನಾಗೇಂದ್ರಪ್ಪ, ಸಂತ್ರಸ್ತೆ ವಿಚಾರಣೆ