Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BREAKING: ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳಲ್ಲಿ ಈ ವಾಹನಗಳ ಸಂಚಾರ ನಿರ್ಬಂಧ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಲು ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ನಗರದ ಪ್ರಮುಖ ಫ್ಲೈಓವರ್ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಆದೇಶ ಹೊರಡಿಸಿದೆ.

ವಾಹನಗಳ ವೇಗದ ವ್ಯತ್ಯಾಸದಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸುವುದು, ಸುಗಮ ಸಂಚಾರ, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಯ ಸಂಚಾರ ನಿರ್ವಹಣೆಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಫ್ಲೈಓವರ್‌ವಾರು ನಿರ್ಬಂಧದ ವಿವರಗಳು:

  • ಬಿಜಿಎಸ್ ಫ್ಲೈಓವರ್ (ಮೈಸೂರು ರಸ್ತೆ):

    • ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿಷೇಧಿಸಲಾಗಿದೆ.

    • ಮೂರು ಚಕ್ರದ ಗೂಡ್ಸ್ ಆಟೋ ಸೇರಿದಂತೆ ಇತರೆ ಎಲ್ಲಾ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7:00 ರಿಂದ 11:00 ಹಾಗೂ ಸಂಜೆ 4:00 ರಿಂದ ರಾತ್ರಿ 10:00 ಗಂಟೆಯವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ.

  • ಪೀಣ್ಯ ಎಲಿವೇಟೆಡ್ ಕಾರಿಡಾರ್:

    • ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳ ಸಂಚಾರ ದಿನದ 24 ಗಂಟೆಯೂ ನಿಷೇಧ.

    • ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7:00 ರಿಂದ 11:00 ಹಾಗೂ ಸಂಜೆ 4:00 ರಿಂದ ರಾತ್ರಿ 10:00 ರವರೆಗೆ ನಿರ್ಬಂಧ.

  • ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್:

    • ದ್ವಿಚಕ್ರ ವಾಹನಗಳು (ಬೈಕ್), ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳ ಸಂಚಾರವನ್ನು ದಿನದ 24 ಗಂಟೆಯೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    • ಎಲ್ಲಾ ಮಾದರಿಯ ಸರಕು ಸಾಗಣೆ ವಾಹನಗಳಿಗೆ (ಭಾರಿ, ಮಧ್ಯಮ ಮತ್ತು ಲಘು ಸರಕು ವಾಹನಗಳು) ಬೆಳಗ್ಗೆ 6:00 ರಿಂದ ರಾತ್ರಿ 10:00 ಗಂಟೆಯವರೆಗೆ ಪ್ರವೇಶ ಇರುವುದಿಲ್ಲ.

  • ಡಬಲ್ ಡೆಕ್ಕರ್ ಫ್ಲೈಓವರ್ (ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ):

    • ಭಾರಿ ಸರಕು ಸಾಗಣೆ ವಾಹನಗಳ ಸಂಚಾರ ದಿನದ 24 ಗಂಟೆಯೂ ನಿಷೇಧ.

  • ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ (ಸಂಜೀವ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ):

    • ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳ ಸಂಚಾರ ದಿನದ 24 ಗಂಟೆ ನಿಷೇಧ.

    • ಎಲ್ಲಾ ವಿಧದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6:00 ರಿಂದ ರಾತ್ರಿ 10:00 ಗಂಟೆಯವರೆಗೆ ನಿರ್ಬಂಧ.

ಯಾವಾಗಿನಿಂದ ಜಾರಿ?

ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಸಿಲ್ಕ್ ಬೋರ್ಡ್-ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಈ ನಿಯಮವು ದಿನಾಂಕ: 04.09.2026 ರಿಂದ ಜಾರಿಗೆ ಬರಲಿದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ದಿನಾಂಕ: 11.09.2026 ರಿಂದ ಈ ನಿರ್ಬಂಧ ಜಾರಿಯಾಗಲಿದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಜಾರಿಗೆ ತರಲಾಗಿರುವ ಈ ಉಪಕ್ರಮಕ್ಕೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಹಕರಿಸುವಂತೆ ಸಂಚಾರ ಪೊಲೀಸ್ ಇಲಾಖೆ ಕೋರಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತಮುಂಬರುವ ಸಾಲು ಸಾಲು ನೇಮಕಾತಿ ಪರೀಕ್ಷೆಗಳಿಗೆ ಕೆಇಎ ಸಿದ್ಧತೆ: ಜಿಲ್ಲೆಗೆ ಇಬ್ಬರು ಪರೀಕ್ಷಾ ಮಾಸ್ಟರ್ ತರಬೇತುದಾರರ ನೇಮಕ, ತರಬೇತಿಪ್ರಪಂಚದಲ್ಲೆ ಸನಾತನ ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮವಿಲ್ಲ : ಸುಭುದೇಂದ್ರ ತೀರ್ಥರು ಹೇಳಿಕೆBREAKING : 'ಗೃಹಜ್ಯೋತಿ ಮರುಪರಿಶೀಲನೆ' : ಸೆ.30ರವರೆಗೆ ಗಡುವು ವಿಸ್ತರಿಸಿದ ರಾಜ್ಯ ಸರ್ಕಾರ!ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು 'ಪ್ರಜಾಸೇವಾ' ಸಜ್ಜು : ಸೆಪ್ಟೆಂಬರ್ 5 ರಿಂದ ರಾಜ್ಯಾದ್ಯಂತ ಅಧಿಕೃತ ಚಾಲನೆ!'ಶಕ್ತಿ ಯೋಜನೆ' ಉಚಿತ ಬಸ್ ಪ್ರಯಾಣದಿಂದ ಭಕ್ತರಿಗೆ ಅನುಕೂಲ: ಮಂತ್ರಾಲಯ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಶ್ಲಾಘನೆ!BREAKING : ಬಿಗ್ ಬಾಸ್ ಕನ್ನಡ ಶೋಗೆ ಸಂಕಷ್ಟ : ಅನುಮತಿ ಕೊಡೋದಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ!ಆಪರೇಷನ್ ಮುಕ್ತ 2.O: ಬೆಂಗಳೂರಿನಲ್ಲಿ ಸೆರೆಯಾಗಿದ್ದ 31 ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರುBREAKING: KPSC ನೇಮಕಾತಿ ಹಗರಣ: ಸೆ.9ರವರೆಗೆ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ CID ಕಸ್ಟಡಿಗೆBIG NEWS: ರಾಜ್ಯದಲ್ಲಿ ಆಗಸ್ಟ್ ತಿಂಗಳ ‘ಅನ್ನಭಾಗ್ಯ’ ಅಕ್ಕಿ ವಿತರಣೆ ಸ್ಥಗಿತ: ಪಡಿತರದಾರರಲ್ಲಿ ಗೊಂದಲ