ಬೆಂಗಳೂರು : ಲಾರಿಗೆ ಕಾರು ಡಿಕ್ಕಿಯಾಗಿ ಬಿಜೆಪಿ ಮುಖಂಡ ಬಲಿಯಾಗಿದ್ದಾನೆ. ಮಾಲೂರಿನ ಬಿಜೆಪಿ ಮುಖಂಡ ಶಿವಕುಮಾರ್ ಈ ಒಂದು ಅಪಘಾತದಲ್ಲಿ ದುರ್ಮರಣ ಹೊಂದಿದ್ದು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಕುಮಾರ್ ಎಂಬಾತ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಒಂದು ಅಪಘಾತ ಸಂಭವಿಸಿದೆ.
ಲಾರಿ ಗೆ ರೇಂಜ್ ರೋವರ್ ಕಾರು ಡಿಕ್ಕಿಯಾಗಿ ಶಿವಕುಮಾರ್ ಸಾವನಪ್ಪಿದ್ದಾನೆ. ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಚಿತ್ರದುರ್ಗದಿಂದ ರೇಂಜ್ ರೋವರ್ ಕಾರಿನಲ್ಲಿ ನಾಲ್ವರು ತೆರಳುತ್ತಿದ್ದರು. ಈ ವೇಳೆ ಓವರ್ಟೇಕ್ ಮಾಡುವಾಗ ಗ್ಯಾಸ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ್ ಸ್ಥಳದಲ್ಲಿಯೇ ಸಾವನಪ್ಪಿದು ಮೂವರಿಗೆ ಗಂಭೀರವಾದ ಗಾಯಗಳಾಗಿವೆ.