Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BREAKING : ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಟ್‌ಕಾಯಿನ್ (Bitcoin) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಹಾಗೂ ರಾಬಿನ್ ಖಂಡೇವಾಲ ಅವರಿಗೆ ಹಿನ್ನಡೆಯಾಗಿದೆ. ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ಹಾಗೂ ಇ.ಡಿ (ED) ಪ್ರಕರಣಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತನಿಖೆ ಕೈಗೆತ್ತಿಕೊಂಡಿದ್ದರು. ತನಿಖೆಯ ಭಾಗವಾಗಿ ಕೆಲ ತಿಂಗಳ ಹಿಂದೆ ಹಲವು ಆರೋಪಿಗಳ ನಿವಾಸಗಳ ಮೇಲೆ ದಾಳಿ ನಡೆಸಿ, ಪ್ರಮುಖ ಆರೋಪಿಗಳಾದ ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುಖೇಶ್ ಹೆಗ್ಡೆ ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು. ಇದೇ ವೇಳೆ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರ ಮನೆಗಳ ಮೇಲೆಯೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಪ್ರಕರಣದ ಸುದೀರ್ಘ ತನಿಖೆ ಪೂರ್ಣಗೊಳಿಸಿದ ಇ.ಡಿ ಅಧಿಕಾರಿಗಳು ಇತ್ತೀಚೆಗಷ್ಟೇ ಮೊಹಮ್ಮದ್ ನಲಪಾಡ್ ಸೇರಿದಂತೆ ಪ್ರಮುಖ ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್‌ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಬಂಧನದಲ್ಲಿದ್ದ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ನ್ಯಾಯಾಂಗ ಬಂಧನದಿಂದ ಹೊರಬರಲು ಪ್ರತ್ಯೇಕವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಇ.ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಮಧು ಆರ್. ರಾವ್ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಹಗರಣದ ಗಂಭೀರತೆ ಹಾಗೂ ಪ್ರಕರಣದಲ್ಲಿ ಆರೋಪಿಗಳು ವಹಿಸಿರುವ ಪಾತ್ರದ ಕುರಿತು ನ್ಯಾಯಪೀಠಕ್ಕೆ ಮಾಹಿತಿ ನೀಡಿದ ಅವರು, ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಪ್ರಬಲ ವಾದ ಮಂಡಿಸಿದ್ದರು. ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ವಿಶೇಷ ನ್ಯಾಯಾಲಯವು ಇ.ಡಿ ವಾದವನ್ನು ಎತ್ತಿಹಿಡಿದು ಇಬ್ಬರೂ ಆರೋಪಿಗಳ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋರ್ಟ್ ಆದೇಶ ಉಲ್ಲಂಘನೆ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ FIR ದಾಖಲುದ್ವೈತ ಸಿದ್ಧಾಂತಕ್ಕೆ ವ್ಯವಸ್ಥಿತ ರೂಪ ನೀಡಿದ ಗುರುರಾಘವೇಂದ್ರರು: ಸಾಗರದಲ್ಲಿ ಡಾ.ಗುರುರಾಜ್ ಕಲ್ಲಾಪುರ ಅಭಿಪ್ರಾಯಬಿ.ನಾಗೇಂದ್ರ ರಾಜೀನಾಮೆ ದಲಿತ ಸಮುದಾಯಕ್ಕೆ ಸಂದ ಜಯ: ವಿಪಕ್ಷ ನಾಯಕ ಆರ್.ಅಶೋಕ್ಬಿಜೆಪಿ ಸಂಸದರಿಗೆ ಕಾಳಜಿ ಇದ್ದರೆ ಕಸ್ತೂರಿ ರಂಗನ್ ವರದಿ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲಿ: ಸಚಿವ ಮಧು ಬಂಗಾರಪ್ಪ ಸವಾಲ್ನ್ಯಾಯಾಲಯಗಳ ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವನಾಗೇಂದ್ರ ರಾಜೀನಾಮೆ ವೇಳೆ ಸುರಿಸಿದ ಕಣ್ಣೀರು ಬಿಜೆಪಿಯನ್ನು ನಾಶ ಮಾಡಲಿದೆ: ಸಚಿವ ಮಧು ಬಂಗಾರಪ್ಪಮಿ.ಡಿಸಿಪಿ ಯುನಿಫಾರ್ಮ್ ನಲ್ಲಿ ಇದ್ದ ಮಾತ್ರಕ್ಕೆ ಜನರ ಸ್ವಾತಂತ್ರ್ಯ ಕಸಿಯಲಾಗದು : ವೈಟ್ ಫೀಲ್ಡ್ ಡಿಸಿಪಿಗೆ ಹೈಕೋರ್ಟ್ ತರಾಟೆ!ಕಲಬುರ್ಗಿ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ : ನೂತನ ಮೇಯರ್ ಆಗಿ ಅಜ್ಜಲ್ ಅಹಮದ್, ಉಪಮೇಯರ್ ಆಗಿ ಫರ್ಹಾನಾಜ್ ಆಯ್ಕೆBREAKING : RSS ವಿರುದ್ಧ ಅವಹೇಳನಕಾರಿ ಹೇಳಿಕೆ ಕೇಸ್ : ಸಚಿವ ಪ್ರಿಯಾಂಕ್ ಖರ್ಗೆ ನಲಪಾಡ್ ಗೆ ಜಾಮೀನು ಮಂಜೂರು ನಾಗೇಂದ್ರ ರಾಜೀನಾಮೆ ನಡುವೆಯೂ 'ಬಿಜೆಪಿ ಪಾದಯಾತ್ರೆ' ಫಿಕ್ಸ್: ಶ್ರೀರಾಮುಲು 'ಬಳ್ಳಾರಿ ಚಲೋ' ಪೋಸ್ಟರ್ ರಿಲೀಸ್!