Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BREAKING : ಮಠಾಧೀಶರು, ಭಕ್ತರಿಗಾಗಿ 2 ಎಕರೆ ಜಾಗ ಕೊಡುತ್ತೇನೆ : ಸಿಎಂ ಡಿಕೆ ಶಿವಕುಮಾರ್‌ ಘೋಷಣೆ

ಬೆಂಗಳೂರು: ವೀರಶೈವ ಲಿಂಗಾಯತ ಸಮಾಜವು ಕೇವಲ ತಮ್ಮಲ್ಲೇ ಒಗ್ಗಟ್ಟು ಕಾಯ್ದುಕೊಂಡರೆ ಸಾಲದು, ಇಡೀ ರಾಜ್ಯದ ಎಲ್ಲಾ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ 'ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕ್ಕೆ ಮೊದಲ ಸಂಸತ್ತು ಹಾಗೂ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕೊಡುಗೆಯಾಗಿ ನೀಡಿದ್ದು ಜಗಜ್ಯೋತಿ ಬಸವಣ್ಣನವರು. ಈ ಕಾರಣಕ್ಕಾಗಿಯೇ ಅವರನ್ನು 'ವಿಶ್ವಗುರು' ಎಂದು ಪೂಜಿಸಲಾಗುತ್ತದೆ ಎಂದು ಬಣ್ಣಿಸಿದ ಅವರು, "ಮಾನವ ಧರ್ಮದ ಪ್ರತಿಪಾದನೆಯಿಂದಲೇ ಮಠಗಳಿಗೆ ನೈಜ ಶಕ್ತಿ ಮತ್ತು ಬಲ ಬರುತ್ತದೆ. 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂಬ ಬಸವತತ್ವದ ಅಡಿಯಲ್ಲೇ ವೀರಶೈವ ಲಿಂಗಾಯತ ಧರ್ಮವನ್ನು ಪ್ರತಿಯೊಬ್ಬರೂ ಕಾಪಾಡಿಕೊಂಡು ಹೋಗಬೇಕಿದೆ" ಎಂದು ಮಠಾಧೀಶರಲ್ಲಿ ಮನವಿ ಮಾಡಿದರು.

ನಾಡಿನ ಲಿಂಗಾಯತ ಮಠಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಿವಕುಮಾರ್, ಆರ್ಥಿಕವಾಗಿ ಸಬಲವಾಗಿರುವ ಮಠಗಳು ಸರ್ಕಾರಕ್ಕೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿವೆ. ಜಾತಿ-ಧರ್ಮದ ಭೇದವಿಲ್ಲದೆ ಸಮಾಜದ ಎಲ್ಲಾ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ, ಜ್ಞಾನ ಮತ್ತು ಸಂಸ್ಕಾರವನ್ನು ನೀಡುತ್ತಿವೆ. ರಾಜ್ಯದಲ್ಲೇ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಮಠಗಳ ಕೊಡುಗೆಯಿಂದಾಗಿ ಇಂದು ಪ್ರಪಂಚದ ನಾನಾ ಭಾಗಗಳಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಮಾನವ ಜೀವನದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಮಹತ್ವವನ್ನು ಉಲ್ಲೇಖಿಸಿದ ಅವರು, "ಯಾರೂ ಕೂಡ ನಿರ್ದಿಷ್ಟ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಜನಿಸುವುದಿಲ್ಲ. ಆದರೆ ಮಗುವಿನ ನಾಮಕರಣದಿಂದ ಹಿಡಿದು ಕೊನೆಯಲ್ಲಿ ಮಣ್ಣು ಮಾಡುವ ಅಥವಾ ಅಗ್ನಿಸ್ಪರ್ಶ ಮಾಡುವವರೆಗೂ ಪ್ರತಿಯೊಂದು ಹಂತದಲ್ಲೂ ಧರ್ಮ ಹಾಗೂ ಸಿದ್ಧಾಂತದ ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ಕಾಲ ಮತ್ತು ಸಮಸ್ಯೆಗಳು ಎಷ್ಟೇ ಬದಲಾದರೂ ನಮ್ಮ ನೈತಿಕ ಮೌಲ್ಯಗಳು ಹಾಗೂ ಉಪಕಾರ ಸ್ಮರಣೆ ಬದಲಾಗಬಾರದು" ಎಂದು ಪ್ರತಿಪಾದಿಸಿದರು.

ಇದೇ ವೇಳೆ, ಹೊರಊರುಗಳಿಂದ ಬೆಂಗಳೂರಿಗೆ ಆಗಮಿಸುವ ಮಠಾಧೀಶರು ಹಾಗೂ ಭಕ್ತಾದಿಗಳ ತಂಗುವಿಕೆಗಾಗಿ ನಗರದ ಹೊರವಲಯದಲ್ಲಿ ೨ ಎಕರೆ ಜಾಗವನ್ನು ನೀಡುವುದಾಗಿ ಪ್ರಕಟಿಸಿದರು. "ಜಾಗ ನೀಡುವುದು ನಮ್ಮ ಹೊಣೆ, ಅಲ್ಲಿ ಕಟ್ಟಡ ನಿರ್ಮಿಸುವುದು ನಿಮ್ಮ ಜವಾಬ್ದಾರಿ" ಎಂದು ಹೇಳಿದ ಅವರು, ತಾವು ಬಸವಣ್ಣನವರ 'ಕಾಯಕವೇ ಕೈಲಾಸ' ಹಾಗೂ 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ತತ್ವವನ್ನು ನಂಬಿದ್ದು, ಸಮಾಜದ ರಕ್ಷಣೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರು ಪರಿಶೀಲಿಸಿ: ಸಿಎಂ ಡಿ ಕೆ ಶಿವಕುಮಾರ್ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣಪತಿ ಟಿ. ನಾಯ್ಕ ಟ್ರಸ್ಟ್‌ನಿಂದ ಮಹತ್ವದ ಕಾರ್ಯ: ಸಚಿವ ಮಧು ಬಂಗಾರಪ್ಪಸೆ.30ರಂದು ಶಿಕಾರಿಪುರದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪಸೊರಬ ಕ್ಷೇತ್ರದಲ್ಲಿ ₹2.30 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಭೂಮಿಪೂಜೆಈ ದಿನ ಗಣಪತಿಯನ್ನು ಹೀಗೆ ಆರಾಧಿಸಿ: ಇಷ್ಟಾರ್ಥ ಸಿದ್ಧಿ ಗ್ಯಾರಂಟಿಕರ್ನಾಟಕದಲ್ಲಿ LPG ತಪಾಸಣೆ: ಪ್ರತಿ 4 ಸಿಲಿಂಡರ್‌ಗಳಲ್ಲಿ ಒಂದರಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಗ್ಯಾಸ್ ಪತ್ತೆ!ಕೆಪಿವೈಸಿಸಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಅಧ್ಯಕ್ಷರಾಗಿ ಭರತ್ ಯಾದವ್ ಜೆ. ನೇಮಕ ನಕಲಿ ಔಷಧ ತಯಾರಿಕೆ ಕೇಸ್: ಅಕ್ಟೋಬರ್.7ರವರೆಗೆ ಕಿಂಗ್ ಪಿನ್ ಪ್ರಶಾಂತ್ ಎಸ್ಐಟಿ ಕಸ್ಟಡಿಗೆWatch Video: 'ಪೌರಕಾರ್ಮಿಕರ ಪಾದಪೂಜೆ' ಮಾಡಿ ಗೌರವ ಸಮರ್ಪಿಸಿದ 'KAS ಅಧಿಕಾರಿ': ವೀಡಿಯೋ ವೈರಲ್ಗರ್ಭಕೋಶ ಶಸ್ತ್ರಚಿಕಿತ್ಸೆ ಯಡವಟ್ಟು ಆರೋಪ: ನಾಳೆ ಸಾಗರದಲ್ಲಿ ತಜ್ಞ ವೈದ್ಯರ ತಂಡದಿಂದ ಡಾ.ನಾಗೇಂದ್ರಪ್ಪ, ಸಂತ್ರಸ್ತೆ ವಿಚಾರಣೆ