ಬೆಂಗಳೂರು: ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ವ್ಯಾಪ್ತಿಯ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ಒಟ್ಟು 18 ತಹಶೀಲ್ದಾರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಅವರು ಈ ಅಧಿಸೂಚನೆ ಹೊರಡಿಸಿದ್ದು, ಸ್ಥಳ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೆ ಹುದ್ದೆ ನೀಡುವುದರ ಜೊತೆಗೆ ಹಲವು ತಾಲೂಕು ಮತ್ತು ನಿಗಮ-ಮಂಡಳಿಗಳ ಅಧಿಕಾರಿಗಳನ್ನು ಪರಸ್ಪರ ಬದಲಾಯಿಸಲಾಗಿದೆ.
ಪ್ರಮುಖ ಅಧಿಕಾರಿಗಳ ವರ್ಗಾವಣೆ ವಿವರ:
ಸಂಗಮೇಶ ಜಿಡಗ (ಗ್ರೇಡ್-2): ಬಳ್ಳಾರಿ ನಗರಾಭಿವೃದ್ಧಿ ಕೋಶದಿಂದ ಯಾದಗಿರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭಾ ತಹಶೀಲ್ದಾರ್ ಹುದ್ದೆಗೆ.
ಎಂ.ಆರ್. ಷಣ್ಮುಖ (ಗ್ರೇಡ್-2): ಕಾರಟಗಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
ಶಾರದಾ ಬಿರಾದಾರ (ಗ್ರೇಡ್-2): ಸ್ಥಳ ನಿರೀಕ್ಷೆಯಲ್ಲಿದ್ದ ಇವರನ್ನು ಕಲಬುರಗಿಯ ಕೆಕೆಆರ್‌ಡಿಬಿ (KKRDB) ಆಪ್ತ ಕಾರ್ಯದರ್ಶಿಯಾಗಿ ನಿಯುಕ್ತಿ.
ಹೆಚ್.ಸಿ. ಸುಜಾತ (ಗ್ರೇಡ್-2): ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಹಶೀಲ್ದಾರ್ ಆಗಿ ನೇಮಕ.
ರುಕಿಯಾ ಬೇಗಂ (ಗ್ರೇಡ್-1): ಇವರ ಹಿಂದಿನ ವರ್ಗಾವಣೆ ಆದೇಶ ರದ್ದುಗೊಳಿಸಿ, ಸಾಲಿಗ್ರಾಮದಲ್ಲೇ ಮುಂದುವರಿಸಲಾಗಿದೆ.
ರೂಪ. ಡಿ (ಗ್ರೇಡ್-2): ಕರ್ನಾಟಕ ರಾಜ್ಯ ಹಣಕಾಸು ನಿಗಮದ (KSFC) ವಿಶೇಷ ತಹಶೀಲ್ದಾರ್ ಆಗಿ ವರ್ಗಾವಣೆ.
ನೀಲಬಾಯಿ ಲಮಾಣಿ (ಗ್ರೇಡ್-2): ಬೆಂಗಳೂರಿನ ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಸ್ಥಳನಿಯುಕ್ತಿ.
ಎಸ್.ಬಿ. ಕಾಯಲಿ (ಗ್ರೇಡ್-2): ಬೀಳಗಿಯಿಂದ ಜಮಖಂಡಿ ತಾಲೂಕು ತಹಶೀಲ್ದಾರ್ ಹುದ್ದೆಗೆ.
ಎಂ.ವಿ. ಬಿರಾದರ ಪಾಟೀಲ (ಗ್ರೇಡ್-2): ರಾಮದುರ್ಗದಿಂದ ಅಥಣಿ ತಾಲೂಕಿಗೆ ವರ್ಗಾವಣೆ.
ಆರ್.ಎಸ್. ವಳಸಂಗ (ಗ್ರೇಡ್-2): ಅಥಣಿಯಿಂದ ರಾಮದುರ್ಗ ತಾಲೂಕಿಗೆ ಅದಲು-ಬದಲು ವರ್ಗಾವಣೆ.
ಜಯಲಕ್ಷ್ಮಿ ವಸ್ತ್ರದ (ಗ್ರೇಡ್-1): ಗದಗ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
ಜಿ.ಕೆ. ಮಂಜುನಾಂದ (ಗ್ರೇಡ್-2): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ತಹಶೀಲ್ದಾರ್ ಆಗಿ ನೇಮಕ.
ವಿ.ಎಸ್. ರವೀಂದ್ರ (ಗ್ರೇಡ್-2): ಬೆಂಗಳೂರು ಮಹಾನಗರ ಕಾರ್ಯಪಡೆ (BMTF) ತಹಶೀಲ್ದಾರ್ ಹುದ್ದೆಗೆ.
ಟಿ. ವಿನೋದ (ಗ್ರೇಡ್-1): ಮೈಸೂರಿನ ಯು.ಪಿ.ಓ.ಆರ್. (UPOR) ತಹಶೀಲ್ದಾರ್ ಆಗಿ ನೇಮಕ.
ನರಸಿಂಹಮೂರ್ತಿ ಟಿ.ಎನ್. (ಗ್ರೇಡ್-1): ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
ಡಿ.ಜೆ. ಕೋರಿ (ಗ್ರೇಡ್-2): ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಯ ವಿಶೇಷ ತಹಶೀಲ್ದಾರ್ ಆಗಿ.
ಜೆ.ವಿ. ತುಳಸಿ (ಗ್ರೇಡ್-2): ಗುಡಿಬಂಡೆಯಿಂದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (KRDCL) ವರ್ಗಾವಣೆ.
ಕಾವ್ಯಶ್ರೀ ಹೆಚ್. (ಗ್ರೇಡ್-1): ಬೆಂಗಳೂರಿನ ಐ.ಎಂ.ಎ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಕಚೇರಿಯ ತಹಶೀಲ್ದಾರ್ ಆಗಿ ನಿಯುಕ್ತಿ.
ವರ್ಗಾವಣೆಗೊಂಡಿರುವ ಅಧಿಕಾರಿಗಳು ನಿಯೋಜಿತ ಸ್ಥಳಗಳಲ್ಲಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಿ, ಚಾರ್ಜ್ ರಿಪೋರ್ಟ್ (CTC) ಅನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.


