Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BREAKING : ರೇಣುಕಸ್ವಾಮಿ ಕೊಲೆ ಪ್ರಕರಣ: ದರ್ಶನ್ ವಕೀಲರ ಮೆಮೋ ವಜಾ, ವಿಚಾರಣೆ ಕೆಲಕಾಲ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 59ನೇ ಸಿಸಿಎಚ್ (CCH) ನ್ಯಾಯಾಲಯದಲ್ಲಿ ಪ್ರಮುಖ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಮ್ರಾಣಿ ಅವರು ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡರು. ಇದೇ ವೇಳೆ ಆರೋಪಿಗಳ ಪರ ಹಾಗೂ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯದ ಮುಂದೆ ಹಾಜರಿದ್ದು ತಮ್ಮ ವಾದ-ಪ್ರತಿವಾದ ಮಂಡಿಸಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ನಟ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮೆಮೋ ಒಂದನ್ನು ಸಲ್ಲಿಕೆ ಮಾಡಿದರು. "ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿದ್ದೇವೆ. ಹೀಗಾಗಿ ಅಪ್ರೂವರ್ ಪ್ರದೋಷ್ ಅವರ ಸಾಕ್ಷಿ ವಿಚಾರಣೆಯನ್ನು ಕನಿಷ್ಠ ಎರಡು ದಿನಗಳ ಕಾಲ ಮುಂದೂಡಬೇಕು" ಎಂದು ದರ್ಶನ್ ಪರ ನ್ಯಾಯವಾದಿಗಳು ಕೋರ್ಟ್‌ಗೆ ಮನವಿ ಮಾಡಿಕೊಂಡರು.

ಆದರೆ, ದರ್ಶನ್ ಪರ ವಕೀಲರ ಈ ಮನವಿಗೆ ರಾಜ್ಯ ಸರ್ಕಾರದ ವಿಶೇಷ ಅಭಿಯೋಜಕರಾದ (SPP) ಪ್ರಸನ್ನ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ನ ಮೇ 15ರ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಎಸ್‌ಪಿಪಿ, "ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಆರೋಪಿಗಳ ಪರ ವಕೀಲರು ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಇದೇ ರೀತಿಯ ಮನವಿಯನ್ನು ಕೋರ್ಟ್ ಶನಿವಾರವೇ ತಿರಸ್ಕರಿಸಿದೆ. ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಹಕ್ಕಿದೆ, ಆದರೆ ಪ್ರದೋಷ್ ಸಾಕ್ಷಿ ವಿಚಾರಣೆಯು ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಪಡುವುದರಿಂದ ಈ ಮೆಮೋವನ್ನು ವಜಾಗೊಳಿಸಬೇಕು" ಎಂದು ಬಲವಾಗಿ ವಾದಿಸಿದರು.

ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು, ದರ್ಶನ್ ಪರ ವಕೀಲರು ಸಲ್ಲಿಸಿದ್ದ ಮೆಮೋವನ್ನು ವಜಾಗೊಳಿಸಿ ಆದೇಶ ಹೊರಡಿಸಿದರು. ಇದರೊಂದಿಗೆ ವಿಚಾರಣೆಯನ್ನು ಮುಂದೂಡಬಾರದು ಎಂಬ ಎಸ್‌ಪಿಪಿ ಅವರ ಆಕ್ಷೇಪಣೆಯನ್ನು ಕೋರ್ಟ್ ಮಾನ್ಯ ಮಾಡಿತು. ಇದೇ ಸಂದರ್ಭದಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಅಪ್ರೂವರ್ ಪ್ರದೋಷ್ ಅವರನ್ನು ಕೋರ್ಟ್ ಕೊಠಡಿಯ ಒಳಗಡೆಯೇ ಕೂರಿಸಲು ಅನುಮತಿ ನೀಡಬೇಕೆಂದು ಕೋರಿದರು. ಈ ಮನವಿಗೆ ಸಮ್ಮತಿಸಿದ ನ್ಯಾಯಾಲಯವು ಅನುಮತಿ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಕೆಲಕಾಲ ಮುಂದೂಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : 'KPSC' ನೇಮಕಾತಿ ಅಕ್ರಮ: ಆರೋಪಿ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಬಯಲಾಯ್ತು ಲಕ್ಷ ಲಕ್ಷ ಹಣದ ಲೆಕ್ಕ!BREAKING : ರೇಣುಕಸ್ವಾಮಿ ಕೊಲೆ ಪ್ರಕರಣ: ದರ್ಶನ್ ವಕೀಲರ ಮೆಮೋ ವಜಾ, ವಿಚಾರಣೆ ಕೆಲಕಾಲ ಮುಂದೂಡಿಕೆಗಣೇಶೋತ್ಸವ ವೇಳೆ ಅವಾಚ್ಯ ಶಬ್ದ ಬಳಕೆ ಆರೋಪ : ಬಿಜೆಪಿ ಶಾಸಕ ಮುನಿರತ್ನ ಕಾರು ಅಡ್ಡ ಹಾಕಿ, ಸ್ಥಳೀಯರಿಂದ ತೀವ್ರ ಆಕ್ರೋಶ!BREAKING : ಕೆಲವೇ ಕ್ಷಣಗಳಲ್ಲಿ ಕೋರ್ಟ್ ನಲ್ಲಿ ದರ್ಶನ್ ವಿರುದ್ಧ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು!BREAKING : ಮಹದಾಯಿ ಹೋರಾಟದ ಹಿನ್ನೆಲೆ : ವಾರಂಟ್ ಮೇಲೆ ಕೋಡಿಹಳ್ಳಿ ಚಂದ್ರಶೇಖರ್​ ಅರೆಸ್ಟ್!ಮಕ್ಕಳು, ಯುವಕರನ್ನು ಗುರಿಯಾಗಿಸಿ ಸೈದ್ಧಾಂತಿಕ ಬೋಧನೆ : ಅಪಾರ್ಟ್‌ಮೆಂಟ್‌ಗಳಲ್ಲಿ RSS ಕಾರ್ಯಕ್ರಮದ ವಿರುದ್ಧ ಖರ್ಗೆ ವಾಗ್ದಾಳಿBREAKING : ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರದ ಸಂಚು: ಡೀಲರ್ ನೀಡಿದ ಒಂದೇ ಒಂದು ಸುಳಿವು, ಬೆಚ್ಚಿಬಿದ್ದ ಖಾಕಿ!ಮೈಸೂರು ದಸರಾ 2026 : ಮಾನಸಗಂಗೋತ್ರಿಯಲ್ಲಿ ಇಂದಿನಿಂದ ವೈಭವದ ‘ಯುವ ಸಂಭ್ರಮ’ಕ್ಕೆ ಚಾಲನೆಕಾರವಾರ: ಲಾರಿ ಡಿಕ್ಕಿಯಾಗಿ ರಸ್ತೆಯಲ್ಲೇ ಹೊತ್ತಿ ಉರಿದ ಸ್ಕೂಟಿ ; ಚಕ್ರಕ್ಕೆ ಸಿಲುಕಿ ಸವಾರ ದುರಂತ ಸಾವು!ಕೊಪ್ಪಳದಲ್ಲಿ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ಆರೋಪ : ಸರ್ಕಾರಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು