ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೊದಲ ಫೋಟೋ ಬಹಿರಂಗವಾಗಿದೆ. ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳ ಚಲನವಲನ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಇದೀಗ ಮತ್ತೋರ್ವ ಶಂಕಿತನನ್ನ ಅರೆಸ್ಟ್ ಮಾಡಿದ್ದಾರೆ
ಇದೀಗ ಮತ್ತೊಂದು ಮಾಹಿತಿಯ ಪ್ರಕಾರ ಪುಣೆ ಬದಲು ದೆಹಲಿ ಪಂಜಾಬ್ ನೆಟ್ವರ್ಕ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೂಟರ್ ಗಳ ತರಬೇತಿ ಜಹೂವಿಗೆ ಬಂದ ಬಗ್ಗೆ ತನಿಖೆ ನಡೆಸುತ್ತಿದ್ದು ನೇತಾಜಿ ನಗರ ಸಾಮ್ತಾಕ್ರೂಜ್ ನಲ್ಲಿ ಮನೆ ಬಾಡಿಗೆ ಪಡೆದಿದ್ರ? ಫೈರಿಂಗ್ ಗೆ ಶಸ್ತ್ರಾಸ್ತ್ರ ಬೈಕ್ ಹಣ ನೀಡಿದವರು ಯಾರು? ಸ್ಥಳೀಯವಾಗಿ ನೆರವು ನೀಡಿದ ಲಾಜಿಸ್ಟಿಕಲ್ ಸಪ್ಪೋರ್ಟ್ ಯಾರು ಮೊಬೈಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳಕೆಯಾಗಿರುವುದು ದೇಶಿ ಅಥವಾ ವಿದೇಶಿ ನಿರ್ಮಿತಶಾಸ್ತ್ರವೇ ಎಂಬುವುದರ ಕುರಿತು ಎಲ್ಲವೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದ ಸಮೀಪ ಸೆರೆಹಿಡಿಯಲಾಗಿದೆ ಎನ್ನಲಾದ ಫೋಟೋದಲ್ಲಿ ಬಿಳಿ ಬಣ್ಣದ ಶರ್ಟ್ ಧರಿಸಿರುವ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬ ಕಪ್ಪು ಬಣ್ಣದ ಪೂಮಾ (Puma) ಲೋಗೋ ಇರುವ ಟೋಪಿ ಧರಿಸಿದ್ದಾನೆ. ಆದರೆ, ಈವರೆಗೆ ಆರೋಪಿಗಳ ಗುರುತು ಪತ್ತೆಯಾಗಿಲ್ಲ.ಪೊಲೀಸರ ಮಾಹಿತಿ ಪ್ರಕಾರ, ಗುಂಡಿನ ದಾಳಿಗೆ ಬಳಸಲಾಗಿದೆ ಎನ್ನಲಾದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಬೈಕ್ ಅನ್ನು ಅಂಧೇರಿ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದ್ದು, ಅದಕ್ಕೆ ಮುಂಬೈ ನೋಂದಣಿ ಸಂಖ್ಯೆಯ ಫಲಕವಿದೆ.ಬೈಕ್ನ ನೋಂದಣಿ ಸಂಖ್ಯೆ ಹಾಗೂ ಹಿಂದಿನ ದಾಖಲೆಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಿಂದ ಅಂಧೇರಿ ರೈಲು ನಿಲ್ದಾಣದವರೆಗಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿಗಳು ಯಾವ ಮಾರ್ಗದಲ್ಲಿ ತೆರಳಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.