Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

BREAKING: KPSC ನೇಮಕಾತಿ ಅಕ್ರಮ: SIT ರಚನೆಗೆ ಸುಪ್ರೀಂ ಕೋರ್ಟ್ ತಡೆ

ವದೆಹಲಿ: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಹತ್ವದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಈ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿದೆ.

ಸುಪ್ರೀಂ ಅಂಗಳದಲ್ಲಿ ಕಪಿಲ್ ಸಿಬಲ್ ಬಿರುಸಿನ ವಾದ:

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, "ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದ ದಿನದಿಂದಲೂ ಸಿಐಡಿ (CID) ತಂಡವು ಅತ್ಯಂತ ಪಾರದರ್ಶಕವಾಗಿ ತನಿಖೆ ಮುಂದುವರಿಸಿದೆ. ಕೆಲ ಅಭ್ಯರ್ಥಿಗಳು ಸಿಬಿಐ ತನಿಖೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರೂ, ಹೈಕೋರ್ಟ್ ದಿಢೀರನೇ ಎಸ್‌ಐಟಿ ರಚನೆಗೆ ಆದೇಶಿಸಿದೆ. ಎಸ್‌ಐಟಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರ ಮೇಲೆ ಈ ಹಿಂದೆ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಎದುರಿಸಿದ ಕಳಂಕವಿದೆ," ಎಂದು ಆಕ್ಷೇಪ ವ್ಯಕ್ತಪಡಿಸಿ, ಸಂಬಂಧಿತ ದಾಖಲೆಗಳನ್ನು ಪೀಠದ ಮುಂದಿಟ್ಟರು.

ಅಭ್ಯರ್ಥಿಗಳ ಪರ ವಕೀಲರ ತೀವ್ರ ಆಕ್ಷೇಪ:

ಸರ್ಕಾರದ ಈ ನಿಲುವನ್ನು ಅಭ್ಯರ್ಥಿಗಳ ಪರ ವಕೀಲರು ಬಲವಾಗಿ ವಿರೋಧಿಸಿದರು. "ಪ್ರಕರಣದ ಗಂಭೀರತೆಯನ್ನು ಅರಿತು ಸೂಕ್ತ ಪರಿಶೀಲನೆ ನಡೆಸಿಯೇ ಹೈಕೋರ್ಟ್ ಸಮರ್ಥ ಅಧಿಕಾರಿಯ ನೇತೃತ್ವದ ಎಸ್‌ಐಟಿಯನ್ನು ರಚಿಸಿದೆ. ಸರ್ಕಾರಕ್ಕೆ ಈ ತನಿಖೆಗೆ ಹಿಂಜರಿಕೆಯೇಕೆ? ತಮಗೆ ಬೇಕಾದ ಅನುಕೂಲಕರ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಸರ್ಕಾರ ಹವಣಿಸುತ್ತಿದೆಯೇ? ಒಂದು ವೇಳೆ ಅಧಿಕಾರಿಯ ಬಗ್ಗೆ ಆಕ್ಷೇಪವಿದ್ದರೆ ಹೈಕೋರ್ಟ್‌ನಲ್ಲೇ ಮರುಪರಿಶೀಲನೆ ಕೋರಬೇಕಿತ್ತು," ಎಂದು ಪ್ರತಿವಾದ ಮಂಡಿಸಿದರು.

ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಲು ಸೂಚನೆ:

ಉಭಯ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, "ನಿರ್ದಿಷ್ಟ ಅಧಿಕಾರಿಯ ಆಯ್ಕೆಯ ಬಗ್ಗೆ ತಕರಾರುಗಳಿದ್ದಲ್ಲಿ ಹೈಕೋರ್ಟ್ ಗಮನಕ್ಕೆ ತರಬಹುದಿತ್ತು. ಇಂತಹ ಆಡಳಿತಾತ್ಮಕ ತೀರ್ಮಾನಗಳಲ್ಲಿ ನ್ಯಾಯಾಲಯಗಳು ಸಲೀಸಾಗಿ ಹಸ್ತಕ್ಷೇಪ ಮಾಡುವುದಿಲ್ಲ," ಎಂದು ಮೌಖಿಕ ಅಭಿಪ್ರಾಯಪಟ್ಟಿತು.

ಆದಾಗ್ಯೂ, ಸರ್ಕಾರದ ವಾದವನ್ನು ಪರಿಗಣಿಸಿದ ಪೀಠ, ಸಂಬಂಧಪಟ್ಟ ಅಧಿಕಾರಿಯ ಮೇಲಿರುವ ಆರೋಪಗಳ ಕುರಿತ ಸಂಪೂರ್ಣ ವಿವರಗಳನ್ನು ಮುಂದಿನ ವಿಚಾರಣೆಯೊಳಗೆ 'ಮುಚ್ಚಿದ ಲಕೋಟೆ'ಯಲ್ಲಿ (Sealed Cover) ಸಲ್ಲಿಸಲು ಆದೇಶಿಸಿತು. ಜತೆಗೆ, ಎಸ್‌ಐಟಿ ತನಿಖೆಗೆ ಸರ್ಕಾರ ಒಪ್ಪುವಂತಹ ಇತರ ಸಮರ್ಥ ಪೊಲೀಸ್ ಅಧಿಕಾರಿಗಳ ಪಟ್ಟಿಯೊಂದನ್ನು ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿತು.

ಮುಂದಿನ ತನಿಖೆ ಯಾರ ಹೆಗಲಿಗೆ?

ಹೈಕೋರ್ಟ್ ಆದೇಶ ಹೊರಬಿದ್ದಾಗಿನಿಂದಲೂ ಕಳೆದ ಹತ್ತು ದಿನಗಳಿಂದ ಸಿಐಡಿ ಅಧಿಕಾರಿಗಳು ತಮ್ಮ ತನಿಖಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಎಸ್‌ಐಟಿ ರಚನೆಗೆ ಬ್ರೇಕ್ ಹಾಕಿರುವುದರಿಂದ, ತನಿಖೆಯನ್ನು ಹಳೆ ತಂಡವಾದ ಸಿಐಡಿಯೇ ಮುಂದುವರಿಸಲಿದೆಯೇ ಅಥವಾ ಸುಪ್ರೀಂ ಸೂಚನೆಯಂತೆ ಹೊಸ ಅಧಿಕಾರಿಗಳನ್ನೊಳಗೊಂಡ ನೂತನ ಎಸ್‌ಐಟಿ ಜನ್ಮತಾಳಲಿದೆಯೇ ಎಂಬ ಕುತೂಹಲ ತೀವ್ರಗೊಂಡಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು-ರಾಮೇಶ್ವರಂ ನಡುವೆ ವಿಶೇಷ ರೈಲುಗಳ ಸಂಚಾರ15 ದಿನದೊಳಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 'ಗ್ಯಾರಂಟಿ ಸಮಿತಿ ರಚನೆ'ಗೆ ಸರ್ಕಾರ ಖಡಕ್ ಆದೇಶತಿರುಮಲದ ಕರ್ನಾಟಕ ಪ್ರವಾಸಿ ಸೌಧ ನಿರ್ವಹಣೆ KSTDCಗೆ: ಸಚಿವ ಕೆ.ಜೆ. ಜಾರ್ಜ್ವಿಶೇಷಚೇತನರ ಮಾಸಾಶನವನ್ನು 5,000 ರೂ.ಗೆ ಏರಿಕೆ ಮಾಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ‘ಆಕ್ಟಿವ್ ಕರ್ನಾಟಕ’ ಮೂಲಕ ಕ್ರೀಡೆ–ಪ್ರವಾಸೋದ್ಯಮ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್ಪರಿಶಿಷ್ಟ ಪಂಗಡದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವುದೇ ನನ್ನ ಗುರಿ: ಸಚಿವ ಟಿ.ರಘುಮೂರ್ತಿBIG BREAKING: ತಾವು ಕರ್ತವ್ಯ ನಿರ್ವಹಿಸುವ 'ಕೇಂದ್ರ ಸ್ಥಾನ'ಗಳಲ್ಲೇ 'ಅಧಿಕಾರಿ, ಸಿಬ್ಬಂದಿ ವಾಸ' ಕಡ್ಡಾಯ: ರಾಜ್ಯ ಸರ್ಕಾರ ಆದೇಶಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತBREAKING: ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ರದ್ದು, ಚುನಾವಣಾ ಆಯೋಗ ಮುಂದೆ ಸಿಎಂ ಸೇರಿ ಸಚವರು ಧರಣಿBREAKING: ಫಾರ್ಮ್-7 ಸಲ್ಲಿಕೆ ಅಕ್ರಮ: ಚು.ಆಯೋಗದ ಕಚೇರಿ ಎದುರು ಸಿಎಂ ಡಿ.ಕೆ. ಶಿವಕುಮಾರ್, ಸಚಿವರು ಧರಣಿ ಪ್ರತಿಭಟನೆ