Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

BREAKING : ಫಾರ್ಮ್-7 ರಿಂದ ಯಾವುದೇ ಮತ ಡಿಲೀಟ್ ಆಗಿಲ್ಲ : ರಾಜ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಸ್ಪಷ್ಟನೆ!

ಬೆಂಗಳೂರು: ರಾಜ್ಯದಲ್ಲಿ ವಿಶೇಷ ಪರಿಷ್ಕರಣೆ (SIR) ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ, ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಸೇರ್ಪಡೆ ಮಾಡಲು ಆಯೋಗದ ಸೂಚನೆಯಂತೆ ಮತ್ತೊಂದು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಅನ್ಬುಕುಮಾರ್ ತಿಳಿಸಿದ್ದಾರೆ. ಸೋಮವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಸೇರ್ಪಡೆಗಾಗಿ ಈ ಹಿಂದೆ SIR ನಲ್ಲಿ ಕೇಳಲಾಗಿದ್ದ ತಂದೆ-ತಾಯಿಯ ದಾಖಲೆಗಳು ಅಥವಾ ವಿವರಗಳ ಅಗತ್ಯವಿರುವುದಿಲ್ಲ. ಬದಲಾಗಿ, ನಿಗದಿತ 12 ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ನೀಡುವ ಮೂಲಕ ಸುಲಭವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.

ಸಾಮೂಹಿಕ ಫಾರ್ಮ್ 7 ಸಲ್ಲಿಕೆ: ಇಆರ್‌ಒಗಳಿಂದ ಪರಿಶೀಲನೆ ಮತ್ತು ಕ್ರಮ ರಾಜ್ಯದಲ್ಲಿ 2026ರ ಜೂನ್ 16ರಿಂದ ಅಕ್ಟೋಬರ್ 4ರವರೆಗೆ ಒಟ್ಟು 91,278 'ಫಾರ್ಮ್ 7' (ಹೆಸರು ತೆಗೆದುಹಾಕುವ ಅರ್ಜಿ) ಸ್ವೀಕೃತವಾಗಿವೆ. ಆದರೆ, ಪ್ರಸ್ತಾಪಿತ ಹೆಸರು ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾದ ನಮೂನೆಗಳ ಸಂಖ್ಯೆ ಶೂನ್ಯವಾಗಿದೆ. ಸೆಪ್ಟೆಂಬರ್ 23ರವರೆಗೆ ಸಲ್ಲಿಕೆಯಾದ 58,220 ಅರ್ಜಿಗಳನ್ನು ಅಕ್ಟೋಬರ್ 22ರೊಳಗೆ ವಿಲೇವಾರಿ ಮಾಡಿ, ಅಕ್ಟೋಬರ್ 27ಕ್ಕೆ ಪ್ರಕಟಗೊಳ್ಳುವ ಅಂತಿಮ ಪಟ್ಟಿಯಲ್ಲಿ ಪರಿಗಣಿಸಲಾಗುವುದು. ಸಾಮೂಹಿಕವಾಗಿ ಅಥವಾ ಪೂರ್ವ ಮುದ್ರಿತ ಫಾರ್ಮ್ 7 ಸಲ್ಲಿಸಿರುವ ಪ್ರಕರಣಗಳಲ್ಲಿ (ಉದಾಹರಣೆಗೆ ಬಬಲೇಶ್ವರ) ಚುನಾವಣಾ ನೋಂದಣಿ ಅಧಿಕಾರಿಗಳು (ERO) ಮತದಾರರು ಹಾಗೂ ಅರ್ಜಿದಾರರಿಗೆ ನೋಟಿಸ್ ನೀಡಿ 7 ದಿನಗಳ ಕಾಲಾವಕಾಶ ನೀಡಲಿದ್ದಾರೆ. ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದರೆ 'ಮತದಾರರ ನೋಂದಣಿ ನಿಯಮ 20'ರ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಯಾರ ಹೆಸರನ್ನೂ ಏಕಾಏಕಿ ಕೈಬಿಟ್ಟಿಲ್ಲ: ಫಾರ್ಮ್ 7 ಸಲ್ಲಿಕೆಯಾದ ಮಾತ್ರಕ್ಕೆ ಇದುವರೆಗೆ ಯಾವೊಬ್ಬ ಮತದಾರನ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ. ಹೆಸರು ಸೇರ್ಪಡೆಗೆ ಆಕ್ಷೇಪ ಸಲ್ಲಿಸುವ ಅವಧಿ ಮುಗಿದಿದೆಯಾದರೂ, ಪಟ್ಟಿಯಿಂದ ಹೆಸರು ಡಿಲೀಷನ್ ಮಾಡುವ ಪ್ರಕ್ರಿಯೆ ಮತ್ತು ಅವಧಿ ಮುಂದುವರಿದಿದೆ. ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 10 ಹಾಗೂ ಒಟ್ಟಾರೆಯಾಗಿ ಗರಿಷ್ಠ 50 ಫಾರ್ಮ್ 7 ಅರ್ಜಿಗಳನ್ನು ಮಾತ್ರ ಸಲ್ಲಿಸಲು ಅವಕಾಶವಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ 4.50 ಕೋಟಿಗೂ ಅಧಿಕ ಮತದಾರರು: ಅಕ್ಟೋಬರ್ 5, 2026ರ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 4,50,29,916 ಮತದಾರರಿದ್ದಾರೆ. ಈ ಪೈಕಿ 2,23,41,784 ಪುರುಷರು, 2,26,85,269 ಮಹಿಳೆಯರು ಹಾಗೂ 2,863 ತೃತೀಯ ಲಿಂಗಿ ಮತದಾರರಿದ್ದಾರೆ. ಪರಿಶೀಲನೆ ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ಗಳನ್ನು ಸೃಜಿಸಲಾಗಿದ್ದು, ಅದರಲ್ಲಿ 43,55,818 (ಶೇ. 99.40) ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸಲಾಗಿದೆ. ಕೇವಲ 26,495 ನೋಟಿಸ್‌ಗಳು ಮಾತ್ರ ವಿತರಣೆಗೆ ಬಾಕಿ ಇವೆ.

ಅಕ್ಟೋಬರ್ 22ರೊಳಗೆ ಹಕ್ಕು-ಆಕ್ಷೇಪಣೆ ವಿಲೇವಾರಿ: ವಿತರಿಸಲಾದ ನೋಟಿಸ್‌ಗಳ ಪೈಕಿ ಈಗಾಗಲೇ 36,89,063 (ಶೇ. 84.69) ವಿಚಾರಣೆಗಳು ಪೂರ್ಣಗೊಂಡಿದ್ದು, 6,66,755 ವಿಚಾರಣೆಗಳು ಬಾಕಿ ಉಳಿದಿವೆ. ಮತಗಟ್ಟೆ ಹಂತದ ಅಧಿಕಾರಿಗಳೇ (BLO) ಖುದ್ದಾಗಿ ಮನೆ ಮನೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ. ಅಂತಿಮ ವಿಚಾರಣೆಯನ್ನು ಅಕ್ಟೋಬರ್ 12, 2026 ರಂದು ನಡೆಸಲಾಗುತ್ತಿದ್ದು, ಹಕ್ಕುಗಳು ಹಾಗೂ ಆಕ್ಷೇಪಣೆಗಳ ಸಂಪೂರ್ಣ ವಿಲೇವಾರಿಗೆ ಅಕ್ಟೋಬರ್ 22 ಕೊನೆಯ ದಿನಾಂಕವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!