ನವದೆಹಲಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಕ್ರಮ ಹಗರಣದ ಮುಖ್ಯ ರೂವಾರಿ ರುದ್ರಗೌಡ ಪಾಟೀಲ್ (ಆರ್.ಡಿ.ಪಾಟೀಲ್)ಗೆ ಜೈಲೇ ಗತಿ ಆಗಿದೆ. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಸೋಮವಾರ ನ್ಯಾಯಮೂರ್ತಿ ಸಂಜಯ್ ಕುಮಾರ್ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. 26 ಪ್ರಕರಣಗಳು ದಾಖಲಾಗಿದ್ದರೂ 20 ಪ್ರಕರಣಗಳ ಬಗ್ಗೆ ಅಷ್ಟೇ ಮಾಹಿತಿ ನೀಡಿದ್ದ. ಅಲ್ಲದೇ ಕಳೆದ ಭಾರಿ ಬೇಲ್ ನೀಡಿದಾಗ ಮತ್ತೊಂದು ಹಗರಣದಲ್ಲಿ ಭಾಗಿಯಾಗಿದ್ದ ಎಂದು ಸರ್ಕಾರ ವಾದ ಮಂಡಿಸಿತು.
ಬಳಿಕ ಆರ್ .ಡಿ.ಪಾಟೀಲ್ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಸರ್ಕಾರದ ಪರ ಎ.ಎಸ್.ಜಿ ನಿಶಾಂತ್ ವಾದ ಮಂಡಿಸಿದರು. ಇದೇ ವರ್ಷದ ಮಾರ್ಚ್ನಲ್ಲಿ ಆರ್.ಡಿ.ಪಾಟೀಲ್ ರಾಜ್ಯ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಈತನ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾ ಮಾಡಿತ್ತು.