ಕಾಂತರಾಜ್ ವರದಿ ಅಂಗಿರಾಕ್ಕೆ ಸರಕಾರಕ್ಕೆ ಒತ್ತಾಯ: ಬಿ.ಟಿ ಜಗದೀಶ್
ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇನ್ನೂ ಆರು ತಿಂಗಳಲ್ಲಿ ಕಾಂತರಾಜ್ ವರದಿಯ ಅಂಗೀಕಾರ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿವರೆಗೂ ಯಾವುದೇ ಅಂಗೀಕಾರ ಆಗಿಲ್ಲ. ಕೆಲವರು ಈ ವರದಿಯನ್ನು ಅವೈಜ್ಞಾನಿಕ ಅಂತ ಗುರುತರವಾದ ಆಪಾದನೆ ಮಾಡುತ್ತಿದ್ದಾರೆ. ಈ ವರದಿಯನ್ನ ಸಂಪುಟದಲ್ಲಿ ಮಂಡಿಸಿ ಚರ್ಚಿಸಿ ಸಾರ್ವಜನಿಕ ಆಹವಾಲಗಳನ್ನು ಸ್ವೀಕರಿಸಿ ಜಾರಿಗೆ ತರಬೇಕೆಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕರಾದ ಬಿ.ಟಿ ಜಗದೀಶ್ ಸರ್ಕಾರವನ್ನು ಒತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರದಿಯನ್ನು ೧೬೭ ಕೋಟಿ ರೂ ವೆಚ್ಚದಲ್ಲಿ ೬೩ ಸಾವಿರ ಸಿಬ್ಬಂದಿಗಳು ನಿರಂತರ ಮನೆ ಮನೆಗೆ ಹೋಗಿ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಕೊಟ್ಟ ಮಾತಿನಂತೆ ಜಾರಿ ಮಾಡಬೇಕಿತ್ತು ಆದರೆ ಉಪಚುನಾವಣೆ ಬಂದ ಕಾರಣ ಅದು ಆಗಲಿಲ್ಲ. ಈಗಲಾದರೂ ಕಾಂತರಾಜ್ ವರದಿ ಜಾರಿಯಾಗಬೇಕು. ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಿದ್ದರಾಮಯ್ಯನಂತಹ ಅವರಿಂದ ಮಾತ್ರ ಸಾಧ್ಯ.. ಈ ವರದಿಯಿಂದ ೧೯೭ ಹಿಂದುಳಿದ ಜಾತಿಗಳಿಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ.
೨೦೧೬ರಲ್ಲಿ ರಾಜ್ಯ ಸರ್ಕಾರವು ಸುಮಾರು ೧೬೫ ಕೋಟಿ ರೂಗಳನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಈಗಾಗಲೇ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ದಮನಿತ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಮತ್ತು ಸಾಮಾಜಿಕ ನ್ಯಾಯದ ಪರ ಇರುವ ಮುಖ್ಯಮಂತ್ರಿಗಳು ವರದಿಯನ್ನು ಒಪ್ಪಿ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸಿ ರಾಜ್ಯದಲ್ಲಿ ಜಾರಿಗೊಳಿಸುತ್ತೇವೆಂದು ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು ಎಂದರು.
ರಾಜ್ಯದಲ್ಲಿ ಪ್ರಬಲ ಜಾತಿಗಳಿಂದ ೨ಎ ಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿವೆ.. ಇದು ರಕ್ತ ಕ್ರಾಂತಿಗೆ, ಜಾತಿ-ಜಾತಿಗಳ ಮಧ್ಯೆ ಹೋರಾಟಕ್ಕೆ ಕಾರಣವಾಗಬಹುದು.೨ಎ ಮೀಸಲಾತಿಯ ಹೋರಾಟಗಾರರಾದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಸವಣ್ಣರವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ಸನ್ಮಾನಿಸಿದ್ದರು.ಆದರೆ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡದೇ ಇರುವುದಕ್ಕೆ ಸಿದ್ದರಾಮಯ್ಯರವರು ಲಿಂಗಾಯಿತ ವಿರೋಧಿ ಎಂದು ಆಪಾದನೆ ಮಾಡುತ್ತಿದ್ದಾರೆ. ಆದರೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಅಡಿಯಲ್ಲಿ ಬರಲಿಕ್ಕೆ ನಾವು ಬಿಡುವುದಿಲ್ಲ... ಈ ಬಗ್ಗೆ ಒಕ್ಕೂಟ ಉಗ್ರವಾದ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಗೋಷ್ಟಿಯಲ್ಲಿ ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹೆಚ್.ಮಂಜಪ್ಪ, ಸಂಚಾಲಕರಾದ ಡಿ.ದುರುಗೇಶ್, ಸಾಧಿಕ್ವುಲ್ಲಾ ಭಾಗವಹಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.