LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಶ್ವದಲ್ಲಿ ಬಹಳ ದಟ್ಟ ಪ್ರಭಾವ ಬೀರಿರುವ ವ್ಯಕ್ತಿ “ಬುದ್ಧ”: ಪ್ರೊ. ಸಿ.ಕೆ.ಮಹೇಶ್

 

ಚಿತ್ರದುರ್ಗ: ಜಗತ್ತಿನ ಎಲ್ಲಾ ತತ್ವ, ಸಿದ್ಧಾಂತಗಳ ಪ್ರಕಾರ ಇಡೀ ವಿಶ್ವದಲ್ಲಿ ಬಹಳ ದಟ್ಟವಾದ ಪ್ರಭಾವ ಬೀರಿರುವ ವ್ಯಕ್ತಿ ಬುದ್ಧ ಎಂದು ಚಿಂತಕ, ನವಯಾನ ಬುದ್ಧ ದಮ್ಮ ಸಂಘದ ಪ್ರೊ. ಸಿ.ಕೆ.ಮಹೇಶ್ ಹೇಳಿದರು.

ನಗರದ ಸ್ಟೇಡಿಯಂ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಬುದ್ಧರ ಜಯಂತಿ ಆಚರಣೆ ಸಮಾರಂಭದಲ್ಲಿ ಬುದ್ಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಜಗತ್ತಿನ ಖಂಡಗಳ ಕಾಲಘಟ್ಟದಲ್ಲಿ ತುಂಬಾ ದೊಡ್ಡದಾಗಿ ಪ್ರಚಾರವಾಗಿದ್ದು ಬುದ್ಧ ದಮ್ಮ. ಇಡೀ ಜಗತ್ತಿನಲ್ಲಿ ಯಾವುದೇ ಧರ್ಮ, ತತ್ವ, ಸಿದ್ದಾಂತಗಳಿರಬಹುದು. 2,600 ವರ್ಷಗಳ ಹಿಂದೆ ಉದಯಿಸಿದ ಬುದ್ಧನಿಂದಲೇ ಎಲ್ಲವೂ ನಡೆಯುತ್ತಿರುವುದು ಎಂದು ಅಭಿಪ್ರಾಯಪಟ್ಟರು.

ಜಗತ್ತಿನಲ್ಲಿ ಬುದ್ಧ ಪ್ರಭಾವ ಬೀರಿರುವುದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಾವಿರಾರು ಲೇಖನ, ಪುಸ್ತಕಗಳು ಬಂದಿವೆ. 2,600 ವರ್ಷಗಳಿಂದಲೂ ಬುದ್ಧನ ಬಗ್ಗೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಂತನೆ ನಡೆದಿದೆ ಎಂದರೆ ಆಶ್ಚರ್ಯ ಆಗುತ್ತದೆ. ಧ್ಯಾನದ ರೀತಿ, ಕಣ್ಣು ಮುಚ್ಚಿರುವ ರೀತಿಯಲ್ಲಿ, ಧರ್ಮದ ರೀತಿಯಲ್ಲಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬುದ್ಧ ಕಂಡಿದ್ದಾನೆ ಎಂದು ಹೇಳಿದರು.

ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಸಮಾನತೆ, ಸ್ವಾತಂತ್ರ್ಯ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ದಮ್ಮವನ್ನು ಕಟ್ಟಿದ್ದು ಬುದ್ಧ. ಇದೇ ಕಾರಣಕ್ಕೆ ಇಡೀ ವಿಶ್ವ, ಭಾರತಕ್ಕೆ ಗೌರವ ಕೊಡುತ್ತಿದೆ. ಯುದ್ಧ, ಹಿಂಸೆ ಯಾವುದೇ ಕಾರಣಕ್ಕೂ ಯಾರನ್ನೂ ಗೆಲ್ಲಿಸಲು ಸಾಧ್ಯವೇ ಇಲ್ಲ, ಪ್ರೀತಿಯೊಂದೇ ಮಾನವ ಸಂಕುಲ ಬದುಕಿಸಲು ಸಾಧ್ಯ ಎಂದು ಸಾರ್ವಕಾಲಿಕ ಸಂದೇಶ ನೀಡಿದವರು ಭಗವಾನ್ ಬುದ್ಧರು.  ಪ್ರಪಂಚದಲ್ಲಿ ಅತ್ಯಂತ ಪಾಂಡಿತ್ಯ ಹೊಂದಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಬುದ್ಧನೇ ನನ್ನ ಗುರು, ನನ್ನ ಬದುಕಿನ ಹಾಗೂ ಎಲ್ಲ ಮೂಲವೂ ಬುದ್ಧನೆ ಎಂದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ ಮಾತನಾಡಿ, ಎಲ್ಲರಿಗೂ ಭಗವಾನ್ ಬುದ್ಧರ ಜಯಂತಿ ಶುಭಾಶಯ ಕೋರಿದರು. ಗಂಗಾಧರ ಮತ್ತು ತಂಡದವರು ಹಾಗೂ ಕೋಟೆನಾಡು ಬುದ್ಧ ವಿಹಾರದ ಉಪಾಸಕರು ತ್ರಿಸರಣ ಮತ್ತು ಪಂಚಶೀಲ ಪಠಣ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಪೌರಾಯುಕ್ತೆ ಎಂ.ರೇಣುಕ, ನವಯಾನ ಬುದ್ಧ ದಮ್ಮ ಸಂಘದ ಡಿ.ದುರ್ಗೇಶ್, ಟಿ.ರಾಮು, ಸಿ.ಎ.ಚಿಕ್ಕಣ್ಣ, ಕುಮಾರ್ ಜೆಜೆ ಹಟ್ಟಿ, ಉಪಾಸಕರಾದ ಎಚ್.ಸಿ. ನಿರಂಜನಮೂರ್ತಿ, ಬೀಸನಹಳ್ಳಿ ಜಯಪ್ಪ, ಚಂದ್ರಪ್ಪ ಬೆನಕನಹಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ.ಗುರುನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಟಿ. ತಿಪ್ಪೇರುದ್ರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈರಲ್ ಮಾಲೀಕನ ಶವ ಇದ್ದ ವಾಹನವನ್ನು 4 ಕಿಮೀ ವರೆಗೂ ಹಿಂಬಾಲಿಸಿದ ಶ್ವಾನ- ವೈರಲ್ ವಿಡಿಯೋ ನೋಡಿಉದಯನಿಧಿ ಸ್ಟಾಲಿನ್‌ನ ಹಿಂದೂ ವಿರೋಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮ: ಹೈಕೋರ್ಟ್9 ತಿಂಗಳ ಅಸಾಧಾರಣ ಬಾಹ್ಯಾಕಾಶ ಪಯಣದ ಬಳಿಕ ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಜೈಪುರ ಬಳಿ ತಪ್ಪಿದ ದೊಡ್ಡ ರೈಲು ಅಪಘಾತಉದ್ಘಾಟನೆಗೂ ಮುನ್ನವೇ ಕುಸಿದ 21 ಕೋಟಿ ವೆಚ್ಚದ ನೀರಿನ ಟ್ಯಾಂಕ್!ಐಎಎಸ್ ಸುಲೋಚನಾ ಮೀನಾ ಯಶಸ್ಸಿನ ಕಥನಕಲ್ಲೇಟಿಗಿಂತ ಕಣ್ಣೇಟು ಜೋರಂತೆ ಮನೆ ಕಟ್ಟಡಕ್ಕೆ ದೃಷ್ಟಿ, ಅದರ ಪರಿಹಾರಕ್ಕಾಗಿ ಕೆಲವೊಂದು ಇಲ್ಲಿ ಸೃಷ್ಟಿ.ಈ ಕಾರಣಕ್ಕೆ ಜ್ಞಾನಭಾರತಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎಸ್. ರವಿ ಅಮಾನತ್ತು.!ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ನಿಖರ ಹಾಗೂ ವಾಸ್ತವ ಅಂಕಿ ಅಂಶಗಳ ಕ್ರೋಢೀಕರಣ ಅಗತ್ಯನೀವುಗಳು ಯಾವ ಪಕ್ಷದಲ್ಲಿಯಾದರೂ ಇರಿ ಸಮಾಜಕ್ಕೆ ಧಕ್ಕೆ ಬಂದಾಗ ಮಾತ್ರ ಒಂದಾಗಿ: ಸಚಿವ ಕೆ.ಎಚ್.ಮುನಿಯಪ್ಪ