ಬಸ್ ಕಂಡಕ್ಟರ್ ಮಗಳು ಐಪಿಎಸ್ ಅಧಿಕಾರಿ.!
ಹಿಮಾಚಲ ಪ್ರದೇಶ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಐಪಿಎಸ್ ಅಧಿಕಾರಿ ಆದ ಶಾಲಿನಿ ಅಗ್ನಿಹೋತ್ರಿ ಬಗ್ಗೆ ಓದಿದರೆ ಒಂದು ಸ್ಪೂರ್ತಿ.!
ಶಾಲಿನಿ ಅಗ್ನಿಹೋತ್ರಿ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯವರು. ಅವರ ತಂದೆ ಹಿಮಾಚಲ ರೋಡ್‌ವೇಸ್‌ನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಅವರಿಗೆ ಬಹಳ ಕಡಿಮೆ ಸಂಬಳ ಬರುತ್ತಿತ್ತು.
ಯಾವಾಗಲೂ ಅಧ್ಯಯನದಲ್ಲಿ ನಿಪುಣಳಾಗಿದ್ದ ಶಾಲಿನಿ ಅವರು ಧರ್ಮಶಾಲಾದ ಶಾಲೆಯಲ್ಲಿ ಓದಿದರು. ಅವರು 10 ನೇ ತರಗತಿಯಲ್ಲಿ ಶೇಕಡಾ 92 ಮತ್ತು 12 ನೇ ತರಗತಿಯಲ್ಲಿ ಶೇಕಡಾ 77 ಅಂಕಗಳನ್ನು ಗಳಿಸಿದರು. 12 ನೇ ತರಗತಿಯ ನಂತರ, ಶಾಲಿನಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದರು. ಇದರ ನಂತರ, ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು.
ಶಾಲಿನಿ ಅವರು ಅವರ ಬಳಿ ಇದ್ದ ಸೀಮಿತ ಸಂಪನ್ಮೂಲಗಳು ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ, ಯಾವುದೇ ತರಬೇತಿ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಲು ಪ್ರಾರಂಭಿಸಿದರು. 2011 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಅವರು ಐಪಿಎಸ್ ಆಗಿ ಆಯ್ಕೆಯಾದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.