LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಘದ ಸದಸ್ಯತ್ವ ವಜಾಗೆ ಸಿ ರಾಮಾಚಾರಿ ಬೇಸರ, ಸ್ಪಷ್ಟನೆ

ಬೆಂಗಳೂರು : ಕೋಟಕ್ ಮಹೇಂದ್ರ ಬ್ಯಾಂಕ್ ನೌಕರರ ಸಂಘದಲ್ಲಿ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿರುವ ಸಿ ರಾಮಾಚಾರಿ ಅವರನ್ನು ಸಂಘದ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಅವರು ಸಂಘದ ಸದಸ್ಯತ್ವದಿಂದ ಮಜಾ ಮಾಡಿದ್ದಾರೆ, ಆದರೆ ನಾನು ಯಾವುದೇ ಸಂಘದ ವಿರುದ್ಧ ಚಟುವಟಿಕೆಗಳನ್ನು ಮಾಡಿಲ್ಲ, ರದ್ದಾಗಿರುವ ಸದಸ್ತ್ವವನ್ನು ಪುನಃ ವಾಪಸ್ ಪಡೆಯಬೇಕೆಂದು ರಾಮಾಚಾರಿ ಅವರು ಅಳಲು ತೋಡಿಕೊಂಡರು.


ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 28 ವರ್ಷಗಳಿಂದ ಕೊಟೆಕ್ ಮಹೀಂದ್ರಾ ಬ್ಯಾಂಕ್ ನೌಕರರ ಸಂಘದಲ್ಲಿ ನಿಷ್ಠಾವಂತ ಸದಸ್ಯನಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಸಂಘದ ವಿವಿಧ ಚಟುವಟಿಕೆಗಳಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡು ನೌಕರರ ಹಿತಕ್ಕಾಗಿ ಧ್ವನಿ ಎತ್ತಿದೇನೆ.

ನೌಕರರ ಭಟ್ಟಿ ಪ್ರಮೋಷನ್ ಸಂಖ್ಯೆ ಇಳಿಕೆಯಾಗಿರುವ ವಿಚಾರ ಅರೆಕಾಲಿಕ ನೌಕರರ ಭರ್ತಿ ಸಮಸ್ಯೆ ಹಾಗೂ ನಮ್ಮ ನೌಕರರ ಇತರ ಸಮಸ್ಯೆಗಳ ಬಗ್ಗೆ ಇವನಿಗೆ ಮನವಿ ಹಾಗೂ ಹೆಚ್ಚು ಸಕ್ರಿಯ ವಾಗುವಂತೆ ಗಮನ ಸೆಳೆದಿದ್ದೇನೆ ಪ್ರಾಮಾಣಿಕವಾಗಿ. ಈ ಬಗ್ಗೆ ಏಪ್ರಿಲ್ 24ರಂದು ಲಿಖಿತವಾಗಿ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಮಾಡಿದರೂ ಸಹ ಯಾವುದೇ ಸ್ಪಷ್ಟನೆ ನೀಡಲಿಲ್ಲ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಗಮನಕ್ಕೂ ನಾವು 2024 ರಲ್ಲಿಯೇ ಮನವಿ ಸಲ್ಲಿಸಿದ್ದೆ. ಆದರೆ ಸಂಘದ ಪದಾಧಿಕಾರಿಗಳು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ ಬದಲಿಗೆ ನಾವು ಪರಸ್ಪರ ಚರ್ಚೆ ಮಾಡಿದ ಕುರಿತು ಹಲವಾರು ಆರೋಪಗಳನ್ನು ಧರಿಸಿ ನನ್ನ ವಿರುದ್ಧ ನೋಟ್ಠಿ ಜಾರಿ ಮಾಡಿದರು.

ನಾನೊಬ್ಬ ಕೆಳಹಂತದ ನೌಕರನಾಗಿದ್ದು ಆಂಗ್ಲ ಭಾಷೆಯಲ್ಲಿ ನನಗೆ ನೋಟಿಸ್ ನೀಡಿದರು ಆದರೆ ನನಗೆ ಅರ್ಥವಾಗುತ್ತಿಲ್ಲ ಎಂದು ಕನ್ನಡದಲ್ಲಿ ಬರೆದು ಕೊಡುವಂತೆ ತಿಳಿಸಿದರು ಸಹ ಸೊಪ್ಪು ಹಾಕದೆ ಪ್ರಧಾನ ಕಾರ್ಯದರ್ಶಿಯವರು ದರ್ಪ  ಮೆರೆದಿದ್ದಾರೆ ಎಂದು ಆರೂಪಿದರು.

ಸಂಘದ ಪ್ರಧಾನ ಕಾರ್ಯದರ್ಶಿಯಾದ ಮನೋಜ್ ಅವರು ಸಂಘಕ್ಕೆ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದೀಯ ಎಂದು  ಹೇಳಿಕೊಂಡು ನನ್ನನ್ನು ಸಂಘದ ಸದಸ್ಯತ್ವದಿಂದ ವಜಾ ಮಾಡಿದ್ದಾರೆ ಎಂದು ಸಂಘದ ಸದಸ್ಯ ಸಿ ರಾಮಾಚಾರಿ ಅಳಲು ತೊಡಿಕೊಂಡರು.


ಆದರೆ ನಾನು ಯಾವುದೇ ರೀತಿ ಸಂಘ ವಿರುದ್ಧ ಚಟುವಟಿಕೆ ನಡೆಸಿಲ್ಲ ನಮ್ಮ ದೇಹ ಸಂಘ ಭರಿಷ್ಟವಾಗಬೇಕೆಂಬುದು ಸದಸ್ಯರ ಸಮಸ್ಯೆಗಳಿಗೆ ಸಮಾಧಾನ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದೆ ನಾಯಕತ್ವದ ಗೌರವ ಉಳಿಸಿಕೊಳ್ಳುವ ಜೊತೆಗೆ ಸದಸ್ಯರ ನ್ಯಾಯವನ್ನು ಉಳಿಸಲು ಹೋರಾಟ ನಡೆಯಬೇಕಾಗಿದೆ ಎಂದರು.

ಜುಲೈ 11 12ರಂದು ಹೈದರಾಬಾದಿನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ನೌಕರರ ಸಂಘದ ಸಮ್ಮೇಳನ ನಡೆಯಲಿದೆ, ಅದರಲ್ಲಿ ಚುನಾವಣಾ ನಡೆಯುವುದರಿಂದ ಸದಸ್ಯರೆಲ್ಲರೂ ಕಾರ್ಮಿಕರ ಹಿತ ರಕ್ಷಣೆಯನ್ನು ಮಾಡುವ ಪ್ರಾಮಾಣಿಕ ವ್ಯಕ್ತಿಗೆ  ಮತವನ್ನು ಹಾಕಬೇಕೆಂದು ಎಂದು ಸಂಘದ ಸದಸ್ಯರಲ್ಲಿ ಮನವಿ ಮಾಡಿಕೊಂಡರು.

ಸಂಘದ ಯಾವುದೇ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದಿಲ್ಲ ಹಾಗೂ ಮಾಡಿರುವುದಿಲ್ಲ ಕಾರಣ ನನ್ನ ಸದಸ್ಯತ್ವವನ್ನು ಮರು ಸ್ಥಾಪಿಸಿ ಘಟನೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ನ್ಯಾಯ ಸಮ್ಮತವಾಗಿ ಪರಿಶೀಲಿಸುವಂತೆ ನಾನು ಸಂಘಕ್ಕೆ ಒತ್ತಾಯ ಮಾಡುತ್ತೇನೆ ನಮ್ಮ ಹಕ್ಕುಗಳಿಗಾಗಿ ನಾವು ಶಾಂತಿಯುತವಾಗಿ ಹೋರಾಟವನ್ನು ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೋಟಕ್ ಮಹೇಂದ್ರ ಬ್ಯಾಂಕ್ ನೌಕರ ಸಂಘದ ಪದಾಧಿಕಾರಿಗಳು ನಿವೃತ್ತ ನೌಕರರು ಹಾಗೂ ರಕ್ಷಣಾ ವೇದಿಕೆಯ ಅಪ್ಪು ಸೇನೆಯ ಅಧ್ಯಕ್ಷ ತಿಮ್ಮರಾಜು ಸೇರಿದಂತೆ ಅನೇಕರು ಇದೇ ವೇಳೆ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ