LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'CD' ಶಿವಕುಮಾರ್ ಪೆನ್‌ಡ್ರೈವ್ ಗ್ಯಾಂಗ್ - ದೇವರಾಜೇಗೌಡ ಹೇಳಿಕೆ ಬೆನ್ನಲ್ಲೆ ಜೆಡಿಎಸ್‌ನಿಂದ ಟ್ವೀಟ್ ಸಮರ

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೇ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ವಕೀಲ ದೇವರಾಜೇಗೌಡ ಅವರು ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡಿರುವ ಜೆಡಿಎಸ್ ಟ್ವೀಟ್‌ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೆಸರು ಕೆಡಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನಗೆ ಕೋಟಿ ಆಫರ್ ನೀಡಿದ್ದರು ಎಂದು ವಕೀಲ ದೇವರಾಜೇಗೌಡ ಗಂಭೀರವಾದ ಆರೋಪ ಮಾಡಿದ್ದರು.

ಈಗ ಇವರ ಹೇಳಿಕೆಯ ಬೆನ್ನಲ್ಲೇ ಜೆಡಿಎಸ್ ಟ್ವೀಟ್ ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. 'CD' ಶಿವಕುಮಾರ್ ಪೆನ್‌ಡ್ರೈವ್ ಗ್ಯಾಂಗ್

1) ಡಿಸಿಎಂ ಡಿ.ಕೆ.ಶಿವಕುಮಾರ್

2) ಕೃಷಿ ಸಚಿವ ಚೆಲುವರಾಯಸ್ವಾಮಿ

3) ಕಂದಾಯ ಸಚಿವ ಕೃಷ್ಣಭೈರೇಗೌಡ

4) IT BT ಸಚಿವ ಪ್ರಿಯಾಂಕ್ ಖರ್ಗೆ

5) ಇನ್ನೂ ಒಬ್ಬ ಸಚಿವ + ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

ಇವರೆಲ್ಲರೂ ಹೂಡಿರುವ ಸಂಚು ಏನ್ ಗೊತ್ತಾ? ಪ್ರಧಾನಿಗಳಾದ ಮಾನ್ಯ ಶ್ರೀ ನರೇಂದ್ರಮೋದಿ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ HD ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವುದು. ಈ ಸಂಚು ಸಾಕಾರಗೊಳಿಸಲು CDಶಿವಕುಮಾರ್ ಸಾಹೇಬರು ವಕೀಲರಾದ ಶ್ರೀ ದೇವರಾಜೇಗೌಡರಿಗೆ ಆಫರ್ ಮಾಡಿದ ಮೊತ್ತ ಬರೋಬ್ಬರಿ 100 ಕೋಟಿ ರೂಪಾಯಿ! ಎಂದು ಬರೆದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಪಕ್ಷವನ್ನು ಕುಟುಕಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
10th, 12th ಪಾಸ್ ಆದವರಿಗೆ Airport ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಆಸ್ಪತ್ರೆಯಲ್ಲಿ ದರ್ಶನ್‌ ಬಳಿ ಬಂದ ಅಭಿಮಾನಿ ಮಾಡಿದ್ದೇನು? ದಾಸ ಸಿಟ್ಟಾಗಿದ್ದೇಕೆ?ಒಂದೇ ಕುಟುಂಬದಲ್ಲಿ ತಾಯಿ, ಇಬ್ಬರೂ ಪುತ್ರಿಯರೂ ಕೂಡ ಐಎಎಸ್‌ ಅಧಿಕಾರಿಯಾದ ಯಶೋಗಾಥೆನೇರಳೆ ಹಣ್ಣಿನಲ್ಲಿ ಅಡಗಿದೆ ಆರೋಗ್ಯ ಪ್ರಯೋಜನಗಳುಮುಸ್ಲಿಂ ಪರುಷರು ಎಷ್ಟು ಮದುವೆ ಆಗಬಹುದು.? ಬಾಂಬೆ ಹೈಕೋರ್ಟ್ ಹೇಳಿದ್ದೇನು.?ಗ್ರೂಪ್-ಎ ಸಹಾಯಕ ಹಾಗೂ ಗ್ರೂಪ್-ಬಿ ಗೆ ಪರೀಕ್ಷೆ ಬರೆದವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!10 ನೇ ಕ್ಲಾಸ್ ಪಾಸಾದವರು ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.!ವಚನ- -ಗುಪ್ತ ಮಂಚಣ್ಣ .!ಸತತ ಮಳೆಯಿಂದಾಗಿ ಬೆಂ.ನಗರ ಜಿಲ್ಲೆಯಾದ್ಯಂತ ನಾಳೆ ಶಾಲೆಗಳಿಗೆ ರಜೆ : ಡಿಸಿ ಜಗದೀಶ್ಸಂಡೂರಿಗೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಿಸಿದ ಸಿದ್ದರಾಮಯ್ಯ..!