LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಸರಸ್ವತಿ ವಿದ್ಯಾ ಮಂದಿರ ಸಂಸ್ಥೆಗೆ 75ರ ಸಂಭ್ರಮ, ವಜ್ರ ಮಹೋತ್ಸವ ಆಚರಣೆ

ಬೆಂಗಳೂರು: ಶ್ರೀ ಸರಸ್ವತಿ ವಿದ್ಯಾ ಮಂದಿರ ಸಂಸ್ಥೆ ಯಾವುದೇ ಡೊನೇಷನ್ ತೆಗೆದುಕೊಳ್ಳದೆ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ಇತರ ಶಾಲೆಗಳಿಗೆ ಮಾದರಿಯಾಗಿದೆ, ಮಕ್ಕಳಿಗೆ ಪೊಷಕರು ಒತ್ತಡ ಹೇರುವುದನ್ನು ಬಿಟ್ಟು ಅವರಿಗೆ ಇಷ್ಟಬಂದಹಾಗೆ ಬಿಡಿ ಎಂದು ಉದ್ಯಮಿ, ಪರಿಸರವಾದಿ ರೇವತಿ ಕಾಮತ್ ತಿಳಿಸಿದರು.


ಬೆಂಗಳೂರಿನ ವಾಣಿವಿಲಾಸ ರಸ್ತೆಯ ಶ್ರೀ ಸರಸ್ವತಿ  ವಿದ್ಯಾ ಮಂದಿರ ಸಮೂಹ ಸಂಸ್ಥೆಯ 75 ನೇ ವರ್ಷದ ವಜ್ರ ಮಹೊತ್ಸವ ಆಚರಣೆ ಸಮಾರಂಭದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪೊಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಯಾವುದೇ ವಿಚಾರದಲ್ಲಿಯಾಗಲಿ ಒತ್ತಡ ಹಾಕುವುದನ್ನು ಬಿಡಬೇಕು, ಸ್ವತಂ ನಿರ್ಧಾರ ತೆಗೆದುಕೊಳ್ಳುವ ಹಾಗೆ ಬಿಡಬೇಕು, ಅದರಲ್ಲೂ ಓದಿನ ವಿಚಾರದಲ್ಲಿ ಅವರಿಗೆ ಸ್ವಾತಂತ್ರ್ಯ ಕೊಡಬೇಕು ಎಂದರು.


ಮಕ್ಕಳಿಗೆ ಯಾವುದು ಇಷ್ಟ ಇದೆಯೊ ಅದರ ಕಡೆ ಹೆಚ್ಚು ಗಮನ ಕೊಡಬೇಕು. ಅತ್ತಕಡೆ ಪೋಷಕರು ನಿಗಾ ವಹಿಸಬೇಕಾಗಿದೆ. ಪ್ರಸ್ತುತ ವಿದ್ಯಾ ಸಂಸ್ಥೆಗಳು ಮಾರುಕಟ್ಟೆಗಳಾಗಿವೆ, ಇಂತಹ ಸನ್ನಿವೇಶದಲ್ಲಿ ಶ್ರೀ  ಸರಸ್ವತಿ ವಿದ್ಯಾ ಮಂದಿರ ಸಮೂಹ ಸಂಸ್ಥೆಯ ದೃಢ ನಿರ್ಧಾರದಿಂದ ಶಾಲೆಗಳಿಂದ ಹಣ ಮಾವುದೇ ಕಾಯಕವಲ್ಲ ಗುಣಮಟ್ಟದ ಶಿಕ್ಷಣ ಕೊಡುವುದೇ ನಮ್ಮ ಮುಖ್ಯ ಧ್ಯೇಯವಾಗಿದೆ ಎನ್ನುವಹಾಗೆ ಸಂಸ್ಥೆಯನ್ನು 75 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.


ವಿದ್ಯಾ ಸಂಸ್ಥೆಯನ್ನು 75 ವರ್ಷಗಳ ಕಾಲ ನಡೆಸಿಕೊಂಡು ವಜ್ರ ಮಹೋತ್ಸವ ಆಚರಿಸಿಕೊಂಡು ಬಂದಿರುವುದು ಸುಲಭದ ಮಾತಲ್ಲ, ಶಾಲೆ ಪ್ರಾರಂಭವಾದ ದಿನದಿಂದ ಇಂದಿನ ತನಕ ಡೊನೇಷನ್ ಎಂಬುದು ದೂರದ ಮಾತಾಗಿದೆ.


ಪ್ರಸ್ತುತ ಪ್ರಕೃತಿ ಹಾಳಾಗಿದೆ ಯಾವ ಸರ್ಕಾರಗಳು,ಜನರು, ಪರಿಸರ ರಕ್ಷಣೆ ಮಾಡದ ಹಾಗೆ ಹಾಗಿವೆ. ಎಲ್ಲವೂ ಕಲುಷಿತವಾಗಿದ್ದು, ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಲ್ಲರೂ ಸರ್ಕಾರವನ್ನು ನೆಚ್ಚಿಕೊಳ್ಳದೆ ತಮ್ಮ ದುಡಿದ ಸಂಪಾದನೆಯಲ್ಲಿ ಪ್ರತಿಯೊಬ್ಬರು 1ರೂಪಾಯಿ ಯಂತೆ ಸಂಗ್ರಹ ಮಾಡಿದರೆ ಕೊಟ್ಯಾಂತರ ಹಣ ಸಂಗ್ರಹವಾಗುತ್ತದೆ, ಯಾರ,ಯಾವುದೇ ಸಹಾಯವನ್ನು ತೆಗೆದುಕೊಳ್ಳದೆ ಪ್ರಕೃತಿಯನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಸಫಲರಾಗುತ್ತೇವೆ ಎಂದು ಕರೆ ನೀಡಿದರು.


ಶ್ರೀ ಶಾರದಾ ವಿದ್ಯಾಸಂಸ್ಥೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯಾಗಿ ಕೆಲಸ ಮಾಡಿದ ಶಿಕ್ಷಕರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇನ್ನೂ ಇದೆ ವೇಳೆ ಸಂಸ್ಥೆಗೆ 75 ವರ್ಷ ತುಂಬಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಸಂಗೀತ ಕಚೇರಿ ಎಲ್ಲವೂ ಒಂದೇ ವೇದಿಕೆಯಲ್ಲಿ ನಡೆದವು, ಇನ್ನು ಪರಿಸರ ವದಕ್ಕೆ ಹಾಗೂ ಉದ್ಯಮಿ ರೇವತಿ ಕಾಮತ್ ಅವರು ಸ್ವತಹ ವೀಣೆಯನ್ನು ತುಂಬಿಸುವ ಮೂಲಕ ಸಂಗೀತ ಕಚೇರಿಯನ್ನು ಏರ್ಪಡಿಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹರೀಶ್ ನಾಗರಾಜ್ ಭಾಗಿ, ಇದೇ ವೇಳೆ ಸಂಸ್ಥೆ ನಿರ್ದೇಶಕಿ ಲಕ್ಷ್ಮಿ,ಸುಬ್ರಮಣ್ಯ ಶಾಸ್ರಿ,ಟ್ರಸ್ಟಿ,ನಿತಂಜನ್ ಸಂಸ್ಥೆ ಕಾರ್ಯದರ್ಶಿ,ಸತ್ಯನಾರಾಯಣ,  ಸಂಸ್ಥೆಯ ಟ್ರಸ್ಟಿ


ಶ್ರೀ ಶಾರದಾ ವಿದ್ಯಾಮಂದಿರದಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಹಾಗೂ ಹಳೆ ಶಿಕ್ಷಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ