LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸೆಂಟ್ರಲ್ ಜೈಲಿನ ಅಧೀಕ್ಷಕಿಗೆ ಕಾರು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ

ಕಲಬುರುಗಿ :ಸೆಂಟ್ರಲ್ ಜೈಲಿನ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಆಡಿಯೋ ಸಂದೇಶ ಕಳಿಸಿದ್ದಾನೆ ಎಂದು ವರದಿಯಾಗಿದೆ.

ಕಲಬುರಗಿ ನಗರದ ಪೊಲೀಸ್ ಇನ್ಸೆಪೆಕ್ಟರ್ ಮೊಬೈಲ್‍ಗೆ ಅನಾಮದೇಯ ವ್ಯಕ್ತಿಯಿಂದ ಬೆದರಿಕೆ ಸಂದೇಶ ಬಂದಿದೆ. ಈ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದರಿಂದ ಅಲರ್ಟ್ ಆಗಿರುವ ಅಧಿಕಾರಿಗಳು ಕಾರನ್ನು ಸಿಸಿಟಿವಿ ಇರುವೆಡೆ ಮಾತ್ರ ಪಾರ್ಕ್ ಮಾಡುವಂತೆ ಕಾರು ಚಾಲಕನಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ ಜೈಲಿಗೆ ಅನಿತಾ ಅವರು ವರ್ಗಾವಣೆಯಾಗಿ ಬಂದಿದ್ದರು. ಬಂದ ತಕ್ಷಣ ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಕ್ರಮ ತೆಗೆದುಕೊಂಡಿದ್ದರು. ಈ ಕಾರಣದಿಂದ ಅನೀತಾ ವಿರುದ್ಧ ಕೈದಿಗಳು ಮಂಗಳವಾರ ಪ್ರತಿಭಟನೆ ಮಾಡಿದ್ದರು. ಕಟ್ಟು ನಿಟ್ಟಿನ ನಿಯಮದ ವಿರುದ್ಧ ಕೇರಳಿದ ಕೈದಿಗಳಿಂದ ಬಂದ ಬೆದರಿಕೆ ಆಡಿಯೋನಾ ಎಂದು ಸಂಶಯಿಸಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST