Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವ್ಯವಸಾಯ ಮಾಡುವವರೆಲ್ಲ ಒಕ್ಕಲಿಗರು: ಚಲುವರಾಯಸ್ವಾಮಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವ್ಯವಸಾಯ ಮಾಡುವವರನ್ನು ಕರ್ನಾಟಕದಲ್ಲಿ ಒಕ್ಕಲಿಗ ಎಂದು ಕರೆಯಲಾಗುತ್ತದೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.


ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಕ್ಕಲಿಗ ಎಂಬ ಪದವೇ ಹೃದಯಕ್ಕೆ ಹತ್ತಿರವಾದದ್ದು, ಜೀವ ಹಾಗೂ ಜೀವನದ ಸಂಕೇತ ಶ್ರೇಷ್ಠ ಜೀವನದ ಸಂಸ್ಕøತಿಯ ಪ್ರತೀಕ, ಜಗತ್ತಿಗೆ ಅನ್ನ ನೀಡುವ, ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಎಲ್ಲರನ್ನೂ ಒಕ್ಕಲಿಗೆ ಎಂದೇ ಗುರುತಿಸಲಾಗುತ್ತಿದೆಯಾದರೂ ಕಾಲಾಂತರದಲ್ಲಿ ಒಕ್ಕಲಿಗ ಎಂಬುದು ಜಾತಿಯಾಗಿಯೂ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳಿದರು.


 ಮಧ್ಯಮ ಪಾಂಡವ ಅರ್ಜುನ ಆದಿಚುಂಚನಗಿರಿಯ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶಾದಾದ್ಯಂತ ಯಾತ್ರೆ ಮಾಡಿ, ಕೃಷಿಕ ಜನರನ್ನು ಒಕ್ಕಲಿಗರನ್ನಾಗಿಸಿದ ಎಂದೂ ಪ್ರತೀತಿ ಇದೆ. ದಕ್ಷಿಣ ಕರ್ನಾಟಕದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಒಕ್ಕಲಿಗರು ದಕ್ಷಿಣ ಕರ್ನಾಟಕದ ಮೂಲ ನಿವಾಸಿಗಳೆಂದು ಗುರುತಿಸಲಾಗಿದೆ. 1800 ವರ್ಷಗಳಿಗಿಂತಲೂ ಇಲ್ಲಿ ನೆಲೆಸಿ ಕೃಷಿ ಕಸಬು ಮಾಡುತ್ತಿದ್ದಾರೆಂದು ಐತಿಹ್ಯಗಳಿಂದ ತಿಳಿದು ಬಂದಿದೆ ಎಂದರು.

ಒಕ್ಕಲಿಗರು ಕೇವಲ ಕೃಷಿಗೆ ಸೀಮಿತವಾಗಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಒಕ್ಕಲಿಗರ ಮಕ್ಕಳು ಮಾಡದ ಕಸುಬಿಲ್ಲ. ಎಲ್ಲಾ ಕೆಲಸದಲ್ಲೂ ನೈಪುಣ್ಯತೆ ಸಾಧಿಸಿ ಸೈ ಎನಿಸಿಕೊಂಡಿದ್ದಾರೆ. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯಮ ಎಲ್ಲಾ ಕ್ಷೇತ್ರದಲ್ಲೂ ಅಗ್ರಮಾನ್ಯ ಸಾಧಕರಿದ್ದಾರೆ. ದೇಶದ ಮತ್ತು ರಾಜ್ಯದ ಚುಕ್ಕಾಣಿ ಹಿಡಿದು ಸಮರ್ಥ ಆಡಳಿತ ನಡೆಸಿ ದೇಶ ಹಾಗೂ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಕೊಡುಗೆ ನೀಡ ಉಳುವ ಕೈ ಆಳಲೂ ಸೈ ಎಂದು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.



ಇಂತಹ ಸಾಧಕರೆಲ್ಲರನ್ನೂ ಸೇರಿಸಿ ಸಮುದಾಯದ ಮಾದರಿಗಳನ್ನು ತೋರಿಸಿ ಯುವ ಪೀಳಿಗೆಗೆ ಉತ್ಸಾಹ ತುಂಬಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಫಸ್ಟ್ ಸರ್ಕಲ್ ಸೊಸೈಟಿ ಪ್ರಾರಂಭವಾಗಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ವಿಚಾರ, ಪರಸ್ಪರ ಒಗ್ಗೂಡುವಿಕೆ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯಮಶೀಲತೆ, ಉದ್ಯೋಗಾವಕಾಶಗಳು ಮತ್ತು ಉತ್ತಮ ನಡವಳಿಕೆಗಳನ್ನು ಪರಿಚಯಿಸುತ್ತಾ ಸಮುದಾಯದ ಉದ್ಯಮವನ್ನು ಉದ್ಯಮಿಗಳನ್ನು ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಸಂಘಟಕರನ್ನು ಮನಪೂರ್ವಕವಾಗಿ ಅಭಿನಂಧಿಸುತ್ತ ದಕ್ಷಿಣ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲೂ ಇದರ ಶಾಖೆ ಹೊಂದುವ ಗುರಿ ಹೊಂದಲಾಗಿದೆ. ಇದರಿಂದ ಒಕ್ಕಲಿಗರ ಸಮುದಾಯದ ಸಾವಿರಾರು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಡಬಲ್ಲದು. ಇದು ಫಸ್ಟ್ ಸರ್ಕಲ್ ಸದಸ್ಯರು ಈಗಾಗಲೇ ಪರಸ್ಪರ ಸಂಬಂಧಗಳ ಮೂಲಕ 2500 ಕೋಟಿಗೂ ಹೆಚ್ಚು ಅಧಿಕ ವಹಿವಾಟು ನಡೆಸಿರಿವುದು ಸಾಧನೆಯೇ ಸರಿ ಎಂದು ಹೇಳಿದರು.


ಒಕ್ಕಲಿಗ ಟು ಒಕ್ಕಲಿಗ ಎಂಬ ಇ-ಕಾಮರ್ಸ್ ಪ್ಲಾಟ್‍ಫಾರ್ಮ್ ಒಕ್ಕಲಿಗೆ ಉತ್ಪಾದಕರಿಗೆ ಅವಕಾಶಗಳನ್ನು ಸೃಷ್ಟಿಸಿ, ಆತ್ಮವಿಶ್ವಾಸ ತುಂಬುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ನಮ್ಮೆಲ್ಲರ ಪೆÇ್ರೀತ್ಸಾಹ ಸಹಕಾರ ಸದಾ ಇರಲಿದೆ. 3 ದಿನಗಳ ಈ ಕಾರ್ಯಕ್ರಮಕ್ಕೆ ನೂರಾರು ಜನರು ಗಣ್ಯರು, ಸಾಧಕರನ್ನು ಅಹ್ವಾನಿಸಿದ್ದೀರಿ, ಅವರು ಆಯಾಯ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ. ನಾನು ಕೃಷಿ ಸಚಿವನಾಗಿ ಕೃಷಿಗೆ ಪೂರಕವಾದ ವ್ಯಾಪಾರ, ವಹಿವಾಟು, ಉದ್ಯಮಗಳ ಬಗ್ಗೆ ಬೆಳಕು ಚೆಲ್ಲಲು ಬಯಸುತ್ತೇನೆ ಎಂದು ಹೇಳಿದರು.


ಕೃಷಿ ಯಾಂತ್ರೀಕರಣ ಯೋಜನೆಗೆ ರೂ.1250 ಕೋಟಿ ಸಹಾಯಧನ ಯಂತ್ರೋಪಕರಣಗಳಿಗೆ ವಿತರಿಸಲಾಗಿದ್ದು, 3ಲಕ್ಷಕ್ಕೂ ಅಧಿಕ ರೈತರ ಇದರ ಉಪಯೋಗಪಡೆದುಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ 6 ಲಕ್ಷ ರೈತರಿಗೆ ರೂಪಾಯಿ 132398 ಸಹಾಯಧನದಲ್ಲಿ ಸೂಕ್ಷ್ಮ ನೀರಾವರಿ ಘಟಕಗಳನ್ನು ನೀಡಲಾಗಿದೆ.ಎರಡೂವರೆ ವರ್ಷಗಳಲ್ಲಿ 36 ಲಕ್ಷ ರೈತರಿಗೆ 5000 ಕೋಟಿ ಬೆಳೆವಿಮೆ ನೀಡಲಾಗಿದೆ ಎಂದರು.


ನಮ್ಮ ಸರ್ಕಾರ ಜಾರಿಗೆ ತಂದ ನೂತನ ಯೋಜನೆಯಡಿ ಇದುವರೆಗೆ ಹೈಟೆಕ್ ಹಾರ್ವೆಸ್ಟರ್ ಹಬ್‍ಗೆ 127 ಕೋಟಿ ವೆಚ್ಚ ಸಹಾಯಧನದಲ್ಲಿ 340 ಹೈಟೆಕ್ ಹಾರ್ವೆಸ್ಟರ್ ಹಬ್ ವಿತರಿಸಲಾಗಿದೆ. ಪಿ.ಎಂ.ಎಫ್.ಎಂ.ಇ ಯೋಜನೆಯಡಿ 5000 ಮಾದರಿ ಉದ್ದಿಮೆದಾರರಿಗೆ 206 ಕೋಟಿ ವೆಚ್ಚದಲ್ಲಿ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು.


ಇದು ಅವಕಾಶಗಳ ಜಗತ್ತು, ಸಾಧಿಸುವ ಮನಸ್ಸಿದ್ದರೆ ಹಾಗೂ ಪರಿಶ್ರಮವಿದ್ದರೆ ಏನೂ ಬೇಕಾದರೂ ಸಾಧಿಸಲು ಅವಕಾಶವಿದೆ. ಸಸಿ ಮಡಿಗಳಿಂದ ಹಿಡಿದು ಔಷಧಿಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವವರೆವಿಗೂ ಕೃಷಿ ಕ್ಷೇತ್ರದಲ್ಲಿ ಅವಕಾಶಗಳಿದೆ.

ಕೇವಲ ಬೇಸಾಯದ ಬಗ್ಗೆ ಗಮನ ಹರಿಸಿದರೆ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವಿಕೆ ಹಾಗೂ ಮೌಲ್ಯವರ್ಧೆನೆಗೂ ಗಮನ ಹರಿಸಿದರೆ ಹೆಚ್ಚಿನ ಲಾಭಗಳಿಸಲೂ ಅವಕಾಶವಿದೆ ಎಂದು ಹೇಳಿದರು. ಒಂದೇ ಬಗೆಯ ಬೆಳೆಗೆ ಜೋತು ಬೀಳದೆ ಸಮಗ್ರ ಬೇಸಾಯ, ಸಾವಯವ, ಕೃಷಿ ಹಾಗೂ ಸಿರಿಧಾನ್ಯ ಕೃಷಿ ಬಗ್ಗೆಯೂ ಗಮನ ಹರಿಸಿದರೆ ವರ್ಷವಿಡೀ ಆದಾಯ ಮತ್ತು ಆರ್ಥಿಕ ಸಬಲೀಕರಣ ಸಾಧ್ಯವಾಗಬಹುದು. ಹೈನುಗಾರಿಕೆ, ಕುಕ್ಕುಟೋದ್ಯಮ, ಕುರಿ, ಹಂದಿ ಹಾಗೂ ಮೀನು ಸಾಕಾಣಿಕೆಗಳು ಕೂಡ ಕೃಷಿಯ ಜೊತೆಗೆ ಉಪಕಸುಬುಗಳಾಗಿ ರೂಢಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ