LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚದುರಂಗ ಸ್ಪರ್ಧೆ ದೇಹದ ಶಕ್ತಿ, ಕೌಶಲ್ಯ ಅವಲಂಬಿಸಿರುವುದಿಲ್ಲ:ಪ್ರೊ ಕೃಷ್ಣೆಗೌಡ

ದಾವಣಗೆರೆ: 'ಇತರೆ ಕ್ರೀಡೆಗಳಲ್ಲಿ ಇರುವಂತೆ  ಚದುರಂಗದಾಟದ ಗೆಲುವಿಗೆ ಅದೃಷ್ಟ, ಆಕಸ್ಮಿಕ ಎಂಬುದಿಲ್ಲ. ಈ ಕ್ರೀಡೆಯಲ್ಲಿ ಬದುಕಿನ  ಫಿಲಾಸಫಿ ಇದೆ' ಎಂದು ವಾಗ್ಮಿ, ಚಿಂತಕ ಪ್ರೊ. ಕೃಷ್ಣಗೌಡ ಹೇಳಿದರು. ನಗರದ ಸೋಮೇಶ್ವರ ವಿದ್ಯಾಲಯದಲ್ಲಿ 2024-25 ನೇ ಸಾಲಿನ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಸೋಮೇಶ್ವರ ಚದುರಂಗ ಸಿರಿ ಪ್ರಶಸ್ತಿಗಾಗಿ

ನಡೆದ ಅಂತರ್‌ ಶಾಲಾ ಮಟ್ಟದ ಚದುರಂಗ ಸ್ಪರ್ಧೆ ಉದ್ಘಾಟಿಸಿ, ಮಾತನಾಡಿದರು ಚದುರಂಗ ಎಂಬುದು ಒಂದು ಅದ್ಭುತ ಆಟ ಇದರೊಳಗೆ ಬದುಕಿನ ಫಿಲಾಸಫಿಯೇ  ಅಡಗಿದೆ. ಎದುರಾಳಿ ನಡೆ ಆಧರಿಸಿ ಅವರ ಮನಸ್ಸನ್ನು ಅರಿತು ನೀವು ಆಟ ಆಡಬೇಕು. ಈ ಕಾಯಿ ನಡೆಸಿದರೆ ಮುಂದೆ ಏನಾಗಬಹುದು, ಅವರು ಮುಂದೆ ನಡೆದರೆ ನಾನು ಏನು ಮಾಡಬೇಕು ಎನ್ನುವ ಪ್ರತಿಕ್ಷಣದ ಜಾಣೆ,  ಬುದ್ಧಿಶಕ್ತಿ ಉಪಯೋಗಿಸಿ ಆಟ ಆಡಬೇಕು ಎಂದರು ತಾವೇ ಆಟವಾಡುವ ಮೂಲಕ ಕೃಷ್ಣಗೌಡ ಅವರು ಉದ್ಘಾಟಿಸಿದರು.   ಇದು ಸಂಪೂರ್ಣ ಬುದ್ಧಿಶಕ್ತಿಯ ಆಟ. ಯಾವುದೇ ದೇಹದ ಶಕ್ತಿ ಮತ್ತು ಕೌಶಲ್ಯವನ್ನು ಈ ಆಟ ಅವಲಂಬಿಸಿರುವುದಿಲ್ಲ' ಎಂದು  ಹೇಳಿದರು. ಮಕ್ಕಳಲ್ಲಿ ಕೌಶಲ್ಯ ಬೆಳೆಸುತ್ತಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ

ಚದುರಂಗ ಆಟವಿದೆ. ರಾಜ,  ಮಹಾರಾಜರು ದೊಡ್ಡದಾದ ಚದುರಂಗದ  ಅಂಕಣ ನಿರ್ಮಿಸಿ ನಿಜವಾಗಿಯೂ ಆನೆ,ಕುದುರೆಗಳನ್ನು ಅಲ್ಲಿ ನಿಲ್ಲಿಸಿ  ಮುನ್ನಡೆಸುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ನಾವು ನೋಡಬಹುದು. ಸೋಮೇಶ್ವರ ಶಾಲೆ ಮಕ್ಕಳಿಗೆ ಕೇವಲ ವಿದ್ಯೆ  ನೀಡುವುದಕ್ಕೆ ಸೀಮಿತವಾಗದೆ ಅವರಲ್ಲಿನ  ಅಂತಃಶಕ್ತಿಯನ್ನು  ಬೆಳೆಸುವ ಕೆಲಸವನ್ನು ಮಾಡುತ್ತದೆ ಎಂದು ಕೃಪೇಗೌಡ  ಹೇಳಿದರು. ಸೋಮೇಶ್ವರ ಸಮೂಹ ಸಂಸ್ಥೆಗಳ  ಸಂಸ್ಥಾಪಕ ಕೆ.ಎಂ. ಸುರೇಶ್‌ ಅಧ್ಯಕ್ಷತೆ  ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ  ಆರ್.ಎಂ. ಭರತ್, ತೀರ್ಪುಗಾರ  ಸೋಮಶೇಖರ್ ಬಿರಾದಾರ್, ಪ್ರಾಚಾರ್ಯ ಪ್ರಭಾವತಿ, ಗೋಣಿವಾಡ ಶಾಲೆ ಪ್ರಾಚಾರ್ಯರಾದ ವೀಣಾ ಆಡಳಿತಾಧಿಕಾರಿ ಹರೀಶ್‌ ಬಾಬು,  ಶೈಕ್ಷಣಿಕ  ನಿರ್ದೇಶಕ ಪರಮೇಶ್ವರಪ್ಪ, ಮುಖ್ಯಶಿಕ್ಷಕರಾದ ಪ್ರಕಾಶ್, ಗಾಯತ್ರಿ, ಪಿಆರ್ ಒ ಹೇಮಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ವೃಂದ ಇತರರು ಇದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳ್ತಂಗಡಿ : ನೇತ್ರಾವತಿ ಬಳಿ ಅರಣ್ಯದಲ್ಲಿ ಎಸ್.ಐ.ಟಿ ತನಿಖೆ ಮುಂದುವರಿಕೆ: ಮುಂದೆ ಜೆಸಿಬಿಯಿಂದ ಕಾರ್ಯಾಚರಣೆಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು‘ಸನ್ಯಾಸಿನಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಅವರಿಗೆ ನ್ಯಾಯ ಬೇಕು’: ರಾಜೀವ್ ಚಂದ್ರಶೇಖರ್'ಪಹಲ್ಗಾಮ್ ದಾಳಿ ಮಾಡಿದ ಮೂವರು ಉಗ್ರರನ್ನು ಎನ್‌ಕೌಂಟರ್‌ ಮಾಡಲಾಗಿದೆ'- ಅಮಿತ್‌ ಶಾ ಘೋಷಣೆಧರ್ಮಸ್ಥಳ ಪ್ರಕರಣವನ್ನು ಎಸ್ ಐಟಿ ಗಂಭೀರವಾಗಿ ಪರಿಗಣಿಸಿದೆ, ತನಿಖೆಯಲ್ಲಿ ಮಧ್ಯಪ್ರವೇಶ ಇಲ್ಲ; ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಪ್ರದೇಶದಲ್ಲಿ ಮಣ್ಣು ಅಗೆದು ಶೋಧ ಕಾರ್ಯ ಆರಂಭ” ಭಾರತ vs ಪಾಕಿಸ್ತಾನ ಪಂದ್ಯ ನೋಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ”: ಅಸಾದುದ್ದೀನ್ ಓವೈಸಿ'ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ ಆಗಲಿದ್ದಾರೆ'- ಚಿರಾಗ್ ಪಾಸ್ವಾನ್ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದುಜಾರ್ಖಂಡ್: ಭೀಕರ ಅಪಘಾತ; ಟ್ರಕ್ ಗೆ ಬಸ್ ಡಿಕ್ಕಿ,18 ಕನ್ವಾರಿಯಾ ಭಕ್ತರ ಮೃತ್ಯು