E-PAPER
16 Nov 2026, 02:19:43 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

9 ರಂದು ಬೆಳಗಾವಿಯಲ್ಲಿ ಚೆಸ್ ಟೂರ್ನಾಮೆಂಟ್

ಬೆಳಗಾವಿ; ಇದೇ ತಿಂಗಳ ಶನಿವಾರ ದಿನಾಂಕ 9 ರಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿರುವ ಶ್ರೀ ಪ್ರಭುದೇವ ಇಂಡಿಪೆಂಡೆಂಟ್ ಸೈನ್ಸ್ ಪಿಯು ಕಾಲೇಜಿನಲ್ಲಿ ಒಂದು ದಿನದ ಚೆಸ್ ಟೂರ್ನಾಮೆಂಟ್ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಮತಿ ಸ್ವಪ್ನಾ ಜೋಶಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಬಹುದಾಗಿದೆ,
ನಾಲ್ಕು ವಿಭಾಗಗಳಲ್ಲಿ (ಕೆಟಗರಿ) ಪಂದ್ಯಾವಳಿಯನ್ನು ಜರುಗಿಸಲಾಗುತ್ತಿದೆ , ಎಲ್ಲ ವಿಭಾಗಗಳಿಗೂ ಪ್ರವೇಶ ಶುಲ್ಕವನ್ನು ರೂ.350/-ನಿಗದಿಪಡಿಸಲಾಗಿದ್ದು, ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳದ್ದು "ಎ" ಕೆಟಗರಿ, ಐದರಿಂದ ಏಳನೇ ತರಗತಿಯವರೆಗಿನದ್ದು "ಬಿ" ಕೆಟಗರಿ, ಎಂಟರಿಂದ 10ನೇ ತರಗತಿಯವರೆಗೆ ಸಿ" ಕೆಟಗರಿ ಮತ್ತು ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿದ್ದು "ಡಿ" ಕೆಟಗರಿ ಎಂದು ವಿಭಾಗಿಸಲಾಗಿದೆ ನಾಲ್ಕೂ ವಿಭಾಗಗಳಲ್ಲಿನ ವಿಜೇತರಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುತ್ತಿದೆ.
ಪ್ರಥಮ ಬಹುಮಾನ ನಗದು ರೂ 1500/- ಮತ್ತು ಟ್ರೋಫಿ, ಎರಡನೇ ಬಹುಮಾನ ರೂ 1,000/- ಮತ್ತು ಟ್ರೋಫಿ, ಮೂರನೇ ಬಹುಮಾನ ರೂ 500/- ಮತ್ತು ಟ್ರೋಫಿ ನೀಡಲಾಗುತ್ತಿದೆ ಇದಲ್ಲದೆ ಎಲ್ಲ ನಾಲ್ಕೂ ವಿಭಾಗಗಳಲ್ಲಿ ನಾಲ್ಕನೇ ರ್‍ಯಾಂಕಿನಿಂದ 10ನೇ ರ್‍ಯಾಂಕ ವರೆಗೆ ವಿಜೇತರಾಗುವ ಕ್ರೀಡಾಳುಗಳಿಗೆ ವಿಶೇಷ ಟ್ರೋಫಿಯನ್ನು ನೀಡಿ ಸತ್ಕರಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಟೂರ್ನಾಮೆಂಟ್ ನಲ್ಲಿ ಯಾವ ಅಕಾಡೆಮಿಯಿಂದ ಅತಿ ಹೆಚ್ಚು ಕ್ರೀಡಾಳುಗಳು ಭಾಗವಹಿಸುತ್ತಾರೋ ಅಂತಹ ಅಕ್ಯಾಡಮಿಗೆ ಪ್ರಥಮ ಪ್ರಶಸ್ತಿ ನಗದು 1500 ಮತ್ತು ಟ್ರೋಫಿ, ಅದೇ ರೀತಿ ದ್ವಿತೀಯ ಪ್ರಶಸ್ತಿ ನಗದು ರೂ 1,000 ಮತ್ತು ಟ್ರೋಫಿ ಈ ರೀತಿ ವಿಶೇಷ ಬಹುಮಾನವನ್ನು ಕೂಡ ಇಲ್ಲಿ ಘೋಷಿಸಲಾಗಿದೆ. ಟೂರ್ನಾಮೆಂಟಿನಲ್ಲಿ ಭಾಗವಹಿಸುವ ಕ್ರೀಡಾಳುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಟೂರ್ನಾಮೆಂಟ್ ನಲ್ಲಿ ಭಾಗವಹಿಸುವ ಕ್ರೀಡಾಳುಗಳು ಕಡ್ಡಾಯವಾಗಿ ತಮ್ಮ ಶಾಲಾ ಸಮವಸ್ತ್ರದಲ್ಲಿ ತಮ್ಮ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. ಈ ಸಂಬಂಧ ಹೆಚ್ಚಿನ ಮಾಹಿತಿಗಳಗಾಗಿ ತೀರ್ಪುಗಾರರಾದ ಗಿರೀಶ ಬಾಚಿಕರ 8050160834, ಆಕಾಶ ಮಡಿವಾಳರ 8310259025, ಸಕ್ಷಮ ಜಾಧವ 7899425214 ಇವರುಗಳನ್ನು ಮತ್ತು ಪ್ರಭು ಶಿವನಾಯಕರ 9449441955 ಇವರನ್ನು ಸಂಪರ್ಕಿಸಬಹುದು ಎಂದು ಅವರು ವಿವರಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ