LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಲ್ಲ ರೀತಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

ಮುಂಬೈ: ಪರಿಪೂರ್ಣ ಟೆಸ್ಟ್‌ ಆಟದ ಕೊನೆಯ ಕೊಂಡಿ ಎಂದೇ ಅರಿಯಲ್ಪಡುತ್ತಿದ್ದ ಪ್ರತಿಭಾವಂತ ಟೆಸ್ಟ್‌ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿ ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ.

ಈ ವರ್ಷ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರವಿಚಂದ್ರನ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕ ಈಗ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ದಿಢೀರ್‌ ಎಂದು ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಸುಂದರ ಅಧ್ಯಾಯವೊಂದು ಮುಕ್ತಾಯವಾದಂತಾಗಿದೆ. ಏಕದಿನ, ಟ್ವೆಂಟಿ 20 ಜಮಾನದಲ್ಲೂ ಟೆಸ್ಟ್‌ ಕ್ರಿಕೆಟ್‌ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಪೂಜಾರ ಕೊಟ್ಟ ಕೊಡುಗೆ ಹಿರಿದಾದುದು.

ಟೆಸ್ಟ್‌ನಲ್ಲಿ 43.60 ಸರಾಸರಿಯಲ್ಲಿ 7,195 ರನ್‌ ಗಳಿಸಿರುವ ಪೂಜಾರ ಭಾರತದ ಎಂಟನೇ ಅತ್ಯಧಿಕ ಟೆಸ್ಟ್‌ ರನ್‌ ಸ್ಕೋರ್‌ ಮಾಡಿದ ಆಟಗಾರ ಎಂಬ ಹಿರಿಮೆಯನ್ನು ಹೊಂದಿದ್ದಾರೆ. ರನ್‌ ಗಳಿಕೆಗಿಂತಲೂ ಟೆಸ್ಟ್‌ ಆಟದ ಮನಮೋಹಕ ಶೈಲಿ ಅವರಿಗೆ ಒಬ್ಬ ಪರಿಪೂರ್ಣ ಟೆಸ್ಟ್‌ ಆಟಗಾರ ಎಂಬ ಗೌರವವನ್ನು ತಂದುಕೊಟ್ಟಿತ್ತು. ರಾಹುಲ್‌ ದ್ರಾವಿಡ್‌ ಬಳಿಕ ಈ ಹಿರಿಮೆಗೆ ಪೂಜಾರ ಪಾತ್ರರಾಗಿದ್ದರು. ಅವರನ್ನು ರಾಹುಲ್‌ ದ್ರಾವಿಡ್‌ ಅವರ ಉತ್ತರಾಧಿಕಾರಿ ಎಂದೇ ಅರಿಯಲಾಗುತ್ತಿತ್ತು. 103 ಟೆಸ್ಟ್‌ ಪಂದ್ಯಗಳಲ್ಲಿ ಅವರು 19 ಶತಕಗಳನ್ನು ಬಾರಿಸಿದ್ದಾರೆ.

ಕೊನೆಯ ಕೆಲವು ಪಂದ್ಯಗಳಲ್ಲಿ ಅವರ ರನ್‌ ಗಳಿಕೆ ಕುಸಿದಿದ್ದರೂ ಒಟ್ಟಾರೆಯಾಗಿ ಟೆಸ್ಟ್‌ ಕ್ರಿಕೆಟ್‌ಗೆ ನೀಡಿದ ಕೊಡುಗೆ ಮಾತ್ರ ದೊಡ್ಡದು. 20-20ಯಂಥ ಹೊಡಿಬಡಿ ಕ್ರಿಕೆಟ್‌ ಯುಗದಲ್ಲಿ ಟೆಸ್ಟ್‌ನ ಪಾವಿತ್ರ್ಯವನ್ನು ಉಳಿಕೊಂಡಿದ್ದ ಆಟಗಾರ ಅವರು. ಟೆಸ್ಟ್‌ನ ಎಲ್ಲ ತಾಂತ್ರಕಿತೆ ಮತ್ತು ಕೌಶಲಗಳನ್ನು ಮೈಗೋಡಿಸಿಕೊಂಡಿದ್ದ ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026