
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಚಂದ್ರು " ಕೈಗಾರಿಕೆಗಳ ಅಭಿವೃದ್ಧಿಯ ನೆಪದಲ್ಲಿ ತಲೆತಲಾಂತರದಿಂದ ಕೃಷಿ ಬದುಕನ್ನೇ ಅನುಸರಿಸಿಕೊಂಡು, ಫಲವತ್ತಾದ ಬೆಳೆಗಳನ್ನು ಬೆಳೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣದ ಸಾವಿರಾರು ಎಕರೆ ಇಂದು ರಿಯಲ್ ಎಸ್ಟೇಟ್ ಮಾಫಿಯಾಗಳ ಕಪಿಮುಷ್ಠಿಯಿಂದ ಹೊರ ಬಿದ್ದಿದೆ. ಇನ್ನು ಮುಂದಾದರು ಯಾವುದೇ ಸರ್ಕಾರಗಳು ಬರಡು ಭೂಮಿಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಗಳನ್ನು ನೀಡಬೇಕು.
ರೈತರ ಈ ಶಾಂತಿಯುತ ಹೋರಾಟ ನಮ್ಮ ದೇಶಕ್ಕೆ ಮಾದರಿಯಾಗಿದೆ. ಯಾವುದೇ ರಕ್ತಪಾತಗಳಿಲ್ಲದೆ ಕೊನೆಗೂ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಆಮ್ ಆದ್ಮಿ ಪಕ್ಷವು ಸದಾಕಾಲ ಕೈಗಾರಿಕೆಗಳ ಅಭಿವೃದ್ಧಿಯ ನೆಪದಲ್ಲಿ ಫಲವತ್ತಾದ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಇಂತಹ ಕುತಂತ್ರಗಳಿಗೆ ವಿರೋಧವನ್ನು ವ್ಯಕ್ತಪಡಿಸುತ್ತದೆ. ರೈತ ಹೋರಾಟದಲ್ಲಿ ಸದಾಕಾಲ ಜೊತೆಯಲ್ಲಿ ಇರುತ್ತದೆ " ಎಂದು ತಿಳಿಸಿದರು.